

ನವದೆಹಲಿ: ಉತ್ತರ ಪ್ರದೇಶದ ನವಾಬ್ ಗಂಜ್ನಲ್ಲಿ ಕೆನರಾ ಬ್ಯಾಂಕ್ ಎಟಿಎಂಅನ್ನು ಕತ್ತರಿಸಿ ಹಣ ದೋಚಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ತನ್ನ ತಾಯಿಯ ಕ್ಯಾನ್ಸರ್ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ಈ ಅಪರಾಧವನ್ನು ಮಾಡುತ್ತಿರುವುದಾಗಿ ಆರೋಪಿ ಹೇಳಿಕೊಂಡಿದ್ದು, ತನ್ನ ಬಂಧನದ ಬಗ್ಗೆ ಯಾವುದೇ ವಿಷಾದವಿಲ್ಲ ಎಂದು ಸುಭಮ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ.
ಮುಂಜಾನೆ 3 ಗಂಟೆ ಸುಮಾರಿಗೆ ಎಟಿಎಂ ಬಳಿ ತಲುಪಿದ ಶುಭಂ, ಯಂತ್ರವನ್ನು ತೆರೆಯಲು ಪ್ರಯತ್ನಿಸಿದಾಗ ಬೆಂಗಳೂರಿನ ಕೆನರಾ ಬ್ಯಾಂಕಿನ ನಿಯಂತ್ರಣ ಕೊಠಡಿ ಕಾನ್ಪುರ ಪೊಲೀಸರಿಗೆ ಮಾಹಿತಿ ನೀಡಿದೆ. ನವಾಬ್ ಗಂಜ್ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ ಶುಭಂರನ್ನು ಬಂಧಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ತನ್ನ ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆಗೆ ಹಣದ ಅಗತ್ಯವಿದೆ ಎಂದು ಅವನು ಪೊಲೀಸರಿಗೆ ತಿಳಿಸಿದ್ದಾನೆ. ಬೇರೆ ದಾರಿ ಹೋದಾಗ ತಾನು ಎಟಿಎಂ ಕಳ್ಳತನಕ್ಕೆ ಇಳಿದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕಳ್ಳತನಕ್ಕೂ ಗುರು ಬೇಕಾಗುತ್ತಾರೆ. ಅನುಭವ ಶಿಷ್ಯ ಕಳ್ಳರಿಗೆ ಹಿರಿ ಕಳ್ಳರು ಧಾರೆ ಎರೆಯುತ್ತಾರೆ. ಇತ್ತೀಚಿಗೆ ಗೂಗಲ್ ಎಲ್ಲರಿಗೂ ಗುರು ಆದ ಮೇಲೆ ಕಳ್ಳರೂ ಆನ್ಲೈನ್ ಮೂಲಕ ಕಳ್ಳತನ ಕಲಿಯಲು ಪ್ರಯತ್ನಿಸುತ್ತಾರೆ ಎನ್ನುವುದಕ್ಕೆ ಇದೇ ಪಕ್ಕಾ ಉದಾಹರಣೆ, ಶುಭಂ, ಎಟಿಎಂ ಬಿಚ್ಚುವುದನ್ನು ತಿಳಿದುಕೊಂಡದ್ದು ಹೇಗೆ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಅದಕ್ಕೆ ಆತ ಕೊಟ್ಟ ಉತ್ತರ ಪೊಲೀಸರನ್ನೂ ಶಾಕ್ಗೆ ತಳ್ಳಿತ್ತು. ಆತ, ಯೂಟ್ಯೂಬ್ನಲ್ಲಿ ಬರುವ ಟ್ಯುಟೋರಿಯಲ್ಗಳನ್ನು ನೋಡಿ ಎಟಿಎಂ ಬಿಚ್ಚುವುದನ್ನು ಎಂದಿದ್ದಾನೆ! ಈತ ತನ್ನ ಬಂಧನದ ಕುರಿತಾಗಿ ಮಾತನಾಡಿದ್ದು “ಮಾಡಿದ ಕೆಲಸದ ಬಗ್ಗೆ ವಿಷಾದವಿಲ್ಲ. ನನ್ನ ತಾಯಿಯ ಚಿಕಿತ್ಸೆಗಾಗಿ ಹಣವನ್ನು ಹೊಂದಿಸಲು ಸಾಧ್ಯವಾಗಲಿಲ್ಲ ಎಂಬುದು ತನ್ನ ಏಕೈಕ ವಿಷಾದ” ಎಂದು ಶುಭಂ ಹೇಳಿದ್ದಾನೆ. ಶುಭಂಗೆ ಯಾವುದೇ ಅಪರಾಧದ ಇತಿಹಾಸವಿಲ್ಲ. ಇದನ್ನೂ ಓದಿ: ಮನೆ ಹೊರಗೆ ಆಟವಾಡುತ್ತಿದ್ದ ಮಗುವನ್ನು ಎತ್ತಿ ನೆಲಕ್ಕೆಸೆದ ಕಳ್ಳ ಸ್ವಾಮಿ: ನೋಡಿದ ಜನರು ಮಾಡಿದ್ದಿಷ್ಟು.. (ಏಜೆನ್ಸೀಸ್)