

ಝಾನ್ಸಿ: ಬೆಕ್ಕು ಅಡ್ಡ ಬಂದರೆ ನಿಲ್ಲಬೇಕು ಎಂಬ ಮಾತಿದೆ. ಏಕೆಂದರೆ ಬೆಕ್ಕಿನ ಹಾದಿಯನ್ನು ದಾಟುವುದು ಅಪಶಕುನವೆಂದು ಹೇಳುತ್ತಾರೆ ಇದು ಅವರವರ ನಂಬಿಕೆ. ಆದರೆ ಇದನ್ನೇ ಗಂಬೀರವಾಗಿ ತೆಗೆದುಕೊಂಡ. ಝಾನ್ಸಿಯಲ್ಲಿ ಕಳ್ಳರು ಅದೇ ರೀತಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.
ಇದನ್ನೂ ಓದಿ: ಹೈದರಾಬಾದ್ನಲ್ಲಿದ್ದ ಹೆಂಡತಿ, ಮನೆಯವರ ಮೇಲೆ ವಿಷ ಪ್ರಯೋಗ: ಲಂಡನ್ನಲ್ಲಿದ್ದುಕೊಂಡೇ ಮಾಸ್ಟರ್ ಪ್ಲಾನ್ ಮಾಡಿದ ಪತಿ..!
ಘಟನೆಯಲ್ಲಿ ಅಮಿತ್ ಪಾಠಕ್ ಅಲಿಯಾಸ್ ಅಕ್ಕು, ಸೋನು ಅಲಿಯಾಸ್ ಸೈನಿಕ್ ಮತ್ತು ರಾಹುಲ್ ಸೇನ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಸಿಪ್ರಿ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೀವ್ ಎಂಬಾತ ರೈಲ್ವೇಯಲ್ಲಿ ಬುಕ್ಕಿಂಗ್ ಕ್ಲರ್ಕ್ ಆಗಿದ್ದು, ಈತನ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿದೆ. ಆಗಸ್ಟ್ 11ರಂದು ಸಂತ್ರಸ್ತನು ಅಪರಿಚಿತರ ವಿರುದ್ಧ ಕಳ್ಳತನದ ಪ್ರಕರಣವನ್ನು ದಾಖಲಿಸಿದ್ದನು.
ದುಷ್ಕರ್ಮಿಗಳು ಕಳ್ಳತನ ಮಾಡಿ ಕಾರಿನಿಂದ ಹಿಂತಿರುಗುತ್ತಿದ್ದರು. ಬೆಕ್ಕು ದಾರಿಯನ್ನು ದಾಟಿದಾಗ, ಅವರು ಕಾರನ್ನು ನಿಲ್ಲಿಸಿದ್ದು ಅಲ್ಲಿಯೇ ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಾರಿನ ಸಂಖ್ಯೆ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶುಕ್ರವಾರ ಢಾಬಾ ಮಾಲೀಕ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿ ಇವರಿಂದ 5 ಲಕ್ಷ 50 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ 25 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಆತನ ಸಹಚರನೊಬ್ಬ ಇನ್ನೂ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.(ಏಜೆನ್ಸೀಸ್)