

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಯುವಜನತೆ ಬಹಳ ಸೋಮಾರಿ ಆಗಿದ್ದಾರೆ ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿಯೇ. ಇದಕ್ಕೆ ಬಲವಾದ ಕಾರಣ ಹೈ-ಸ್ಪೀಡ್ ಇಂಟರ್ನೆಟ್ ಯುಗ. ಕುಳಿತಲ್ಲೇ ತಮಗೆ ಬೇಕಾದ ವಸ್ತು ಅಥವಾ ತಿಂಡಿ-ತಿನಿಸುಗಳನ್ನು ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದ ಪ್ಲಾಟ್ಫಾರ್ಮ್ಗಳ ಮೂಲಕ ತರಿಸಿಕೊಳ್ಳುವ ಜನರು, ಅದನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಅನುಸರಿಸಲು ಪ್ರಾರಂಭಿಸಿದ್ದಾರೆ. ಒಂದು ಸೂಜಿದಾರ ಬೇಕೆಂದರೆ ಸಾಕು 6 ಇಂಚಿನ ಮೊಬೈಲ್ ತೆಗೆದುಕೊಳ್ಳೋದೇ, ಆನ್ಲೈನ್ನಲ್ಲಿ ಆರ್ಡರ್ ಮಾಡೋದೇ. ಕೆಲವು ವಸ್ತುಗಳು ನೋಡಿದಂತೆ ಕೈಸೇರಿದರೆ ಖುಷಿ. ಆದ್ರೆ, ಕೇಳಿದ್ದೇ ಒಂದು ಪಡೆದಿದ್ದೇ ಮತ್ತೊಂದು ಎಂದರೆ ನಿಜಕ್ಕೂ ಬಹಳ ಬೇಸರ ಮೂಡಿಸುತ್ತೆ. ಅಂತಹದ್ದೇ ಒಂದು ಘಟನೆ ಇದೀಗ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಹೊಯ್ಸಳ ಟ್ರಸ್ಟ್ನಿಂದ ಮೂರ್ತಿ ತಯಾರಕರ ಸನ್ಮಾನ
'ಬ್ಲಿಂಕ್ ಇಟ್' ಎಂಬ ತಕ್ಷಣದ ಡೆಲಿವರಿ ಆ್ಯಪ್ನಲ್ಲಿ ಯುವಕನೊಬ್ಬ ತನ್ನ ದೈನಂದಿನ ಬಳಕೆಗೆ ಬೇಕಾದ ಒಳ ಉಡುಪನ್ನು ಆರ್ಡರ್ ಮಾಡಿದ್ದಾನೆ. ತನ್ನ ಆರ್ಡರ್ ಬಂದಾಗ ಖುಷಿಯಿಂದ ಬಾಕ್ಸ್ ಓಪನ್ ಮಾಡಿದ ಗ್ರಾಹಕನಿಗೆ ಸಿಕ್ಕಿದ್ದು ಮಹಿಳೆಯರು ಧರಿಸುವ ಬಿಕಿನಿ. ಇದನ್ನು ನೋಡುತ್ತಿದ್ದಂತೆ ಭಾರೀ ಅಚ್ಚರಿಗೆ ಒಳಗಾದ ಗ್ರಾಹಕ, ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಸಮೇತ ಹಂಚಿಕೊಂಡು, ಕಂಪನಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಗ್ರಾಹಕನನ್ನು ಹಿಮಾಚಲ ಪ್ರದೇಶದ ಪ್ರಿಯಾಂಶು ಎಂದು ಹೇಳಲಾಗಿದ್ದು, ಪುರುಷರು ಧರಿಸುವ ಒಳ ಉಡುಪನ್ನು ಇವರು ಆರ್ಡರ್ ಮಾಡಿದ್ದಾರೆ. ಆದ್ರೆ, ಡೆಲಿವರಿ ದಿನ ಇದರ ಬದಲಾಗಿ ತನ್ನ ಮನೆ ಬಾಗಿಲಿಗೆ ಬಂದದ್ದು ಬಿಕಿನಿ. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಗ್ರಾಹಕ, ನಾನು ಆರ್ಡರ್ ಮಾಡಿದ್ದೇನು? ನೀವು ಕೊಟ್ಟಿರುವುದೇನು? ದಯವಿಟ್ಟು ಇದನ್ನು ಹಿಂಪಡೆಯಿರಿ ಅಥವಾ ಕೊಟ್ಟ ಹಣವನ್ನು ಮರುಪಾವತಿ ಮಾಡಿ ಎಂದು ಮನವಿ ಮಾಡಿದ್ದಾರೆ. ಆದ್ರೆ, ಇದ್ಯಾವುದಕ್ಕೂ ಸ್ಪಂದನೆ ದೊರಕಿಲ್ಲ.
ಇದನ್ನೂ ಓದಿ: ಜಾಗತಿಕ ಶಾಂತಿಗಾಗಿ ವಿವಿಧೆಡೆ ಸೈಕಲ್ ಜಾಥಾ
ತನ್ನ ಮನವಿಗೆ ಪ್ರತಿಕ್ರಿಯಿಸದ ಕಂಪನಿ ವಿರುದ್ಧ ಸಿಡಿದೆದ್ದ ಪ್ರಿಯಾಂಶು, ತಪ್ಪಾಗಿ ಕಳುಹಿಸಿದ ಬಿಕಿನಿಯನ್ನೇ ತೊಟ್ಟು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಪೋಸ್ಟ್ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಬ್ಲಿಂಕ್ ಇಟ್ ವಿರುದ್ಧ ತೀವ್ರ ಕಿಡಿಕಾರಿದ್ದಾರೆ,(ಏಜೆನ್ಸೀಸ್).