VIDEO| ಚಿಕಿತ್ಸೆ ಕೊಡಲು ನಕಾರ: ಆಸ್ಪತ್ರೆ ಒಳಗಡೆಯೇ ವಾಹನ ನುಗ್ಗಿಸಿದ ವ್ಯಕ್ತಿ, ವಿಡಿಯೋ ವೈರಲ್​!

Vehicle
Published on

ಗುರುಗ್ರಾಮ: ತನ್ನ ಕುಟುಂಬದ ಸದಸ್ಯರಿಗೆ ಚಿಕಿತ್ಸೆ ಕೊಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ಆಸ್ಪತ್ರೆಯೊಳಗೆ ತನ್ನ ವಾಹನ ನುಗ್ಗಿಸಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ.

ಆರೋಗ್ಯ ಹದಗೆಟ್ಟಿದ್ದ ಕುಟುಂಬದ ಇಬ್ಬರ ಹಿರಿಯರಿಗೆ ಚಿಕಿತ್ಸೆ ಕೊಡಿಸಲು ಗುರುಗ್ರಾಮದ ಬಸಾಯಿ ಚೌಕ್​ನಲ್ಲಿರುವ ಬಾಲಾಜಿ ಆಸ್ಪತ್ರೆಗೆ ಪಿಕ್​ಅಪ್​ ವಾಹನದಲ್ಲಿ ಕರೆತಂದಿದ್ದ. ಚಿಕಿತ್ಸೆ ನೀಡಲು ತಕರಾರು ತೆಗೆದಿದ್ದಕ್ಕೆ ವೈದ್ಯರೊಂದಿಗೆ ವಾಗ್ವಾದಕ್ಕೆ ಇಳಿದ ವ್ಯಕ್ತಿ ಕೋಪದಿಂದ ವಾಹನ ನುಗ್ಗಿಸಿದ್ದಾನೆ.

ಸುಮಾರು ಏಳೆಂಟು ಬಾರಿ ಆಸ್ಪತ್ರೆಯೊಳಗೆ ವಾಹನ ನುಗ್ಗಿಸಿದ್ದು, ಮೆಡಿಕಲ್​ ಸ್ಟೋರ್​ ಸೇರಿದಂತೆ 10 ರಿಂದ 15 ವಾಹನಗಳಿಗೆ ಹಾನಿಯಾಗಿದೆ. ಬಳಿಕ ಆತ ಅಲ್ಲಿಂದ ಪರಾರಿಯಾಗಿದ್ದಾನೆ.

ಈ ಬಗ್ಗೆ ಮಾತನಾಡಿ ಬಾಲಾಜಿ ಆಸ್ಪತ್ರೆಯ ನಿರ್ದೇಶಕ ಡಾ. ಬಲ್ವಾನ್​ ಸಿಂಗ್​, ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net