

ವಿಜಯವಾಡ: ಆಂಧ್ರ ಪ್ರದೇಶದ ಈವೆಂಟ್ ಡ್ಯಾನ್ಸರ್ ಗಾಯತ್ರಿ ಎಂಬಾಕೆ ವಿಜಯವಾಡದ ವಂಬೆ ಕಾಲನಿಯಲ್ಲಿರುವ ತನ್ನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದು, ಪ್ರಕರಣದ ಹಿಂದೆ ಅಕ್ರಮ ಸಂಬಂಧ ಬೆಳಕಿಗೆ ಬಂದಿದೆ.
ವಂಬೆ ಕಾಲನಿಯ ಬನ್ನಿ ಡ್ಯಾನ್ಸ್ ಟ್ರೂಪ್ನಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಗಾಯತ್ರಿ ಸಂತೋಷ್ ಎಂಬಾತನನ್ನು ಪ್ರೀತಿಸಿ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದಳು. ಇಬ್ಬರು ವೈವಾಹಿಕ ಜೀವನ ಸಾಕ್ಷಿಯಾಗಿ ಇಬ್ಬರು ಮಕ್ಕಳು ಸಹ ಇದ್ದರು. ಬನ್ನಿ ಪತ್ನಿ ನೀಲಿಮಾ ಸಹ ಡ್ಯಾನ್ಸರ್ ಆಗಿದ್ದಳು. ಇಬ್ಬರು ಸಹ ಒಳ್ಳೆಯ ಸ್ನೇಹಿತೆಯರಾಗಿದ್ದರು. ಬರುಬರುತ್ತಾ ಬನ್ನಿ ಮತ್ತು ಗಾಯತ್ರಿ ನಡುವೆ ವಿವಾಹೇತರ ಸಂಬಂಧ ಬೆಳೆಯ ತೊಡಗಿತು.
ಹೀಗಿರುವಾಗ ಇತ್ತೀಚೆಗಷ್ಟೇ ಗಾಯತ್ರಿ, ಬನ್ನಿ ಜತೆಗಿರುವ ಫೋಟೋವನ್ನು ತನ್ನ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಶೇರ್ ಮಾಡಿಕೊಂಡಿದ್ದಳು. ಅದನ್ನು ನೋಡಿ ಬನ್ನಿ ಪತ್ನಿ ನೀಲಿಮಾ, ಗಾಯತ್ರಿ ಮನೆಗೆ ಧಾವಿಸಿದ್ದಾಳೆ. ಇದೇ ವಿಚಾರವಾಗಿ ಇಬ್ಬರ ನಡುವೆಯೂ ಜಗಳವೂ ನಡೆದು ನೀಲಿಮಾ ಮನೆಯಿಂದ ಹೊರನಡೆದ ಬೆನ್ನಲ್ಲೇ ಗಾಯತ್ರಿ ನೇಣಿಗೆ ಕೊರಳೊಡ್ಡಿದ್ದಾಳೆ. ಗಾಯತ್ರಿಯ ತಂದೆ-ತಾಯಿಯು ಸಹ ಪಕ್ಕದಲ್ಲೇ ನೆಲೆಸಿದ್ದಾರೆ.
ನೀಲಿಮಾ ಮನೆಗೆ ಬಂದಾಗ ಗಾಯತ್ರಿ ಗಂಡ ಸತೀಶ್ ತನ್ನೆರೆಡು ಮಕ್ಕಳನ್ನು ಕರೆದುಕೊಂಡು ಹೊರ ಹೋಗಿದ್ದ. ಸತೀಶ್ ಮನೆಗೆ ಮರಳಿದಾಗ ಬಾಗಿಲು ಹಾಕಿರುವುದನ್ನು ನೋಡಿ ತವರಿಗೆ ಹೋಗಿರಬಹದು ಅಂದುಕೊಂಡಿದ್ದಾನೆ. ಆದರೆ, ಕಿಟಕಿಯನಲ್ಲಿ ಇಣುಕಿ ನೋಡಿದಾಗ ಗಾಯತ್ರಿ ನೇಣು ಹಾಕಿಕೊಂಡಿರುವ ಬೆಳಕಿಗೆ ಬಂದಿದೆ. ಬಳಿಕ ಬಾಗಿಲ ಒಡೆದು ಒಳಗೆ ನುಗ್ಗಿದ್ದಾರೆ.
ಗಾಯತ್ರಿ ಮನೆಗೆ ಬಂದಿದ್ದ ನೀಲಿಮಾ ಆಕೆಯನ್ನು ಹಿಗ್ಗಾಮುಗ್ಗ ಬೈದು, ಹೀಯಾಳಿಸಿದ್ದಾಳೆ. ಅದೇ ನೋವಿನಲ್ಲಿ ಗಾಯತ್ರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಕರಣ ದಾಖಲಾಗಿದ್ದು, ಗಾಯತ್ರಿ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ. (ಏಜೆನ್ಸೀಸ್)