ಅಪ್ರಾಪ್ತ ವಯಸ್ಕಳನ್ನು ಅಪಹರಿಸಿ ವಿವಾಹ; ಆರೋಪಿ ಬಂಧನ

arrest
Published on

ಲಖನೌ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ವಿವಾಹವಾದ ಆರೋಪದ ಮೇಲೆ ಪೊಲೀಸರು 22 ವರ್ಷದ ಯುವಕನ ವಿರುದ್ಧ ಅತ್ಯಾಚಾರ ಪ್ರಕರಣದಡಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಘಟನೆಯೂ ಉತ್ತರಪ್ರದೇಶದ ಭದೋಹಿ ಜಿಲ್ಲೆಯಲ್ಲಿ ನಡೆದಿದ್ದು ಬಾಲಕಿ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಯುವಕ ಸೂರಜ್​(22)ನನ್ನು ವಶಕ್ಕೆ ಪಡೆದಿದ್ದಾರೆ.

ಅಪಹರಿಸಿ ಮದುವೆ

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ಉಮೇಶ್ವರ ಪ್ರಭಾತ್‌ ಸಿಂಗ್‌ ರಾಯಲ್ಮ್​​ಪುರ್​ ನಿವಾಸಿಯಾದ ಯುವಕ ಸೂರಜ್​ ಮಾರ್ಚ್​ 12ರಂದು 16ವರ್ಷದ ಬಾಲಕಿಯನ್ನು ಅಪಹರಿಸಿ ವಿವಾಹ ಮಾಡಿಕೊಂಡಿದ್ದಾನೆ.

harassment

ಅಪ್ರಾಪ್ತೆಯ ಕುಟುಂಬಸ್ಥರು ವ್ಯಾಪಕ ಹುಡುಕಾಟ ನಡೆಸಿದಾಗ ಬಾಲಕಿಗೆ ಮದುವೆಯಾಗಿದ್ದು ಆರೋಪಿ ​ ಮನೆಯಲ್ಲಿ ಇರುವುದು ತಿಳಿದು ಬಂದಿದೆ. ಈ ವೇಳೆ ತನ್ನ ಮಗಳನ್ನು ಮಾತನಾಡಿಸಲು ಹೋದ ಸಂದರ್ಭದಲ್ಲಿ ಸೂರಜ್​ ಆಕೆಯ ತಂದೆಗೆ ಬೆದರಿಕೆ ಹಾಕಿ ವಾಪಸ್​ ಕಳುಹಿಸಿದ್ದಾನೆ.

ಬಾಲಕಿಯ ತಂದೆ ನೀಡಿದ ದುರಿನ ಮೇರೆಗೆ ಆರೋಪಿ ಸೂರಜ್​ ವಿರುದ್ಧ ಅತ್ಯಾಚಾರ, ಬೆದರಿಕೆ, ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿ ಉಮೇಶ್ವರ ಪ್ರಭಾತ್‌ ಸಿಂಗ್‌ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net