ಸಿನಿಮಾ

IPL 2023| ಮುಂಬೈ ಇಂಡಿಯನ್ಸ್​ಗೆ 8 ವಿಕೆಟ್​ಗಳ ಗೆಲುವು; ಪ್ಲೇ ಆಫ್​ಗೇರಲು ಬೇಕಿದೆ ಅದೃಷ್ಟ

ಮುಂಬೈ: ಒನ್​ಡೌನ್​ ಬ್ಯಾಟರ್​ ಕ್ಯಾಮರೂನ್​ ಗ್ರೀನ್​, ನಾಯಕ ರೋಹಿತ್​ ಶರ್ಮಾ ಬಿರುಸಿನ ಜೊತೆಯಾಟದ ಫಲವಾಗಿ ಮುಂಬೈ ಇಂಡಿಯನ್ಸ್​ ತಂಡವು ಸನ್​ರೈಸರ್ಸ್​ ತಂಡದ ವಿರುದ್ಧ 8 ವಿಕೆಟ್​ಗಳ ಜಯ ಗಳಿಸಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ SRH 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 200ರನ್​ ಗಳಿಸಿತ್ತು.

ಮಯಾಂಕ್​-ವಿವ್ರಾಂತ್​ ಭದ್ರ ಬುನಾದಿ

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಸನ್​ರೈಸರ್ಸ್​ ಆರಂಭಿಕರಾದ ಮಯಾಂಕ್​ ಅಗರ್​ವಾಲ್(83 ರನ್​, 46 ಎಸೆತ, 8 ಬೌಂಡರಿ, 4 ಸಿಕ್ಸರ್​), ವಿವ್ರಾಂತ್​ ಶರ್ಮಾ(69 ರನ್​, 47 ಎಸೆತ, 9 ಬೌಂಡರಿ, 2 ಸಿಕ್ಸರ್​) ಜತೆಯಾಟದ ಫಲವಾಗಿ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 200ರನ್​ ಗಳಿಸಿತ್ತು.

ಮುಂಬೈ ಪರ ಆಕಾಶ್​ ಮಧ್ವಾಲ್​(4-0-37-4), ಕ್ರಿಸ್​ ಜೋರ್ಡಾನ್​(4-0-42-1), ಕುಮಾರ್​ ಕಾರ್ತಿಕೇಯ(4-0-39-0), ಪಿಯೂಷ್​ ಚಾವ್ಲಾ(4-0-39-0), ಜೇಸನ್​ ಬೆಹನ್​ಡ್ರಾಫ್​(3-0-36-0), ಕ್ಯಾಮರೂನ್​ ಗ್ರೀನ್(1-0-2-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

ಗ್ರೀನ್-ರೋಹಿತ್​ ಬಿರುಸಿನಾಟ

ಸವಾಲಿನ ಗುರಿ ಬೆನ್ನತ್ತಿದ್ದ ಮುಂಬೈ ತಂಡಕ್ಕೆ ಆರಂಭಿಕ ವೈಫಲ್ಯದ ಹೊರತಾಗಿಯೂ ನಾಯಕ ರೋಹಿತ್​ ಶರ್ಮಾ(56 ರನ್​, 37 ಎಸೆತ, 8 ಬೌಂಡರಿ, 1 ಸಿಕ್ಸರ್​), ಕ್ಯಾಮರೂನ್​ ಗ್ರೀನ್(100 ರನ್​, 47 ಎಸೆತ, 8 ಬೌಂಡರಿ, 8 ಸಿಕ್ಸರ್) ಶತಕದ ನೆರವಿನಿಂದ ಗುರಿಯನ್ನು 18 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 201ರನ್​ ಗಳಿಸಿ ಗೆಲುವಿನ ನಗೆ ಬೀರುವ ಮೂಲಕ ಪ್ಲೇ ಆಫ್​ ಹಾದಿಯನ್ನು ಜೀವಂತವಾಗಿಸಿದೆ.

SRH ಪರ ಭುವನೇಶ್ವರ್​​ ಕುಮಾರ್​(4-0-26-1), ಮಯಾಂಕ್​ ದಗಾರ್​(4-0-37-1), ಉಮ್ರಾನ್​ ಮಲ್ಲಿಕ್(3-0-41-0), ನಿತೀಶ್​ ರೆಡ್ಡಿ(3-0-35-0), ಕಾರ್ತಿಕ್​ ತ್ಯಾಗಿ(2.5-0-41-0), ವಿವ್ರಾಂತ್​ ಶರ್ಮಾ(1-0-19-0), ಏಡೆನ್​ ಮಾರ್ಕ್ರ್​ಮ್​(0.1-0-1-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

Latest Posts

ಲೈಫ್‌ಸ್ಟೈಲ್