

ಬಿಹಾರ: ಯುವತಿಯೊಂದಿಗೆ ತನ್ನ ಪತಿ ಅಕ್ರಮ ಸಂಬಂಧ ಹೊಂದಿದ್ದನ್ನು ಪತ್ತೆಹಚ್ಚಿದ ಪತ್ನಿ, ಗಂಡನಿಗೆ ಆಕೆಯನ್ನು ಕೊಲ್ಲುವಂತೆ ಹಿಂಸೆ ನೀಡಿದ್ದಾಳೆ. ಇದಕ್ಕೆ ಮಣಿದ ಆತ ಬಲವಂತವಾಗಿ ಯುವತಿಯನ್ನು ಹತ್ಯೆಗೈದ ಘಟನೆ ಬಿಹಾರದ ಸಮಸ್ತಿಪುರದಲ್ಲಿ ವರದಿಯಾಗಿದೆ.
ಹೆಂಡತಿಯ ಒತ್ತಡಕ್ಕೆ ಮಣಿದ ಪತಿ ಅಕ್ರಮ ಸಂಬಂಧ ಹೊಂದಿದ್ದ ಯುವತಿಗೆ ವಿಷ ಬೆರೆಸಿದ ಎಗ್ ರೋಲ್ ನೀಡಿ, ಆಕೆಯನ್ನು ಕೊಂದಿರುವುದಾಗಿ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಆರೋಪಿಗಳನ್ನು ರಾಜ್‌ಕುಮಾರ್ ಮೆಹ್ತಾ ಮತ್ತು ಆತನ ಪತ್ನಿ ಸಂಜು ದೇವಿ ಎಂದು ಹೇಳಲಾಗಿದ್ದು, ಕೆಲವು ದಿನಗಳಿಂದ ಯುವತಿಯ ಕೊಲೆಗೆ ಸಂಚು ಹೂಡಿ ಈ ದುಷ್ಕೃತ್ಯ ಎಸಗಿದ್ದಾರೆ.
ಎಗ್ ರೋಲ್ನಲ್ಲಿ ವಿಷ ಬೆರೆಸಿ ಯುವತಿಗೆ ನೀಡಿ, ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಮಗಳು ಕಾಣೆಯಾದ ಹಿನ್ನೆಲೆಯಲ್ಲಿ ಆಕೆಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸಂತ್ರಸ್ತೆಯ ಕರೆ ದಾಖಲೆಗಳ ತಾಂತ್ರಿಕ ವಿಶ್ಲೇಷಣೆ ಮತ್ತು ಪರೀಕ್ಷೆಯ ನಂತರ, ಕೊಲೆಯಲ್ಲಿ ದಂಪತಿಗಳು ಭಾಗಿಯಾಗಿರುವುದನ್ನು ಪೊಲೀಸರು ದೃಢಪಡಿಸಿಕೊಂಡಿದ್ದಾರೆ,(ಏಜೆನ್ಸೀಸ್).