IND vs ENG: "ಇದೇ ನಮಗೆ ಬೇಕಿದ್ದು, ಮೊದಲು ಬ್ಯಾಟ್ ಆನಂತರ….." ರಾಜ್‌ಕೋಟ್ ಟೆಸ್ಟ್ ಗೆಲುವಿನಲ್ಲಿ ರವೀಂದ್ರ ಜಡೇಜಾ

Untitled design - 2024-02-18T211637.661
Published on

ರಾಜ್‌ಕೋಟ್‌: ಇಂದು ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತ 434 ರನ್‌ಗಳ ಜಯ ಸಾಧಿಸಿದ ಬೆನ್ನಲ್ಲೇ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಮೂರನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಉತ್ತಮ ಪಾರ್ಟ್​ನರ್​ಶಿಪ್​ ಬೆಳೆಸಲು ಬಯಸಿದ್ದರಂತೆ. ಇದಕ್ಕೆ ಕಾರಣ ಶೀಘ್ರವೇ ಪತನಗೊಂಡ ಮೂರು ವಿಕೆಟ್‌ಗಳು ಎಂದು ಹೇಳಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ಉತ್ತಮ ಆಲ್ ರೌಂಡ್ ಪ್ರದರ್ಶನ ನೀಡಿದ ಜಡೇಜಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

"ನಾನು ರೋಹಿತ್ ಜತೆ ಬೆಸ್ಟ್​ ಪಾರ್ಟ್​​ನರ್​ಶಿಪ್​ ನಿರ್ಮಿಸಲು ಎದುರು ನೋಡುತ್ತಿದ್ದೆ. ಯಾಕಂದ್ರೆ ನಾವು ಕಠಿಣ ಪರಿಸ್ಥಿತಿಯಲ್ಲಿದ್ದೆವು, ನನ್ನ ಸಾಮರ್ಥ್ಯ, ನನ್ನ ಬ್ಯಾಟಿಂಗ್ ವೈಖರಿ ಎಲ್ಲದರ ಬಗ್ಗೆ ಹೆಚ್ಚು ಜಾಗೃತನಾಗಿದ್ದೆ. ಈ ಪೀಚ್​ನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿ, ನಂತರದಲ್ಲಿ ಬೋಲಿಂಗ್ ಮಾಡುವುದು ಉತ್ತಮ ಎಂದೇ ನಾನು ಲೆಕ್ಕಾಚಾರ ಹಾಕಿಕೊಂಡಿದ್ದೆ" ಎಂದರು.

"ನನಗೆ ಇಲ್ಲಿನ ವಿಕೆಟ್ ಬಗ್ಗೆ ತಿಳಿದಿತ್ತು. ನಾವು ಮೊದಲು ಬ್ಯಾಟ್ ಮಾಡುತ್ತೇವೆ, ಬ್ಯಾಟಿಂಗ್ ಮಾಡುವುದು ಯಾವಾಗಲೂ ಒಳ್ಳೆಯದು, ಸೆಕೆಂಡ್​ ಹಾಫ್​ನಲ್ಲಿ ಆಡುವವರಿಗೆ ಬಾಲ್ ತಿರುಗಲು ಪ್ರಾರಂಭಿಸುತ್ತದೆ ಎಂದು ನಿರೀಕ್ಷಿಸಿದ್ದೆ. ಅದಕ್ಕೆ ತಕ್ಕಂತೆ ರೋಹಿತ್ ಟಾಸ್ ಗೆದ್ದಾಗ, ನಾನು ಅಂದುಕೊಂಡಿದ್ದು ಸರಿಯಾಯಿತು. ಇದೇ ನಾವು ಬಯಸಿದ್ದು, ನಮಗೆ ಬೇಕಾಗಿರುವುದು ಮೊದಲು ಬ್ಯಾಟ್ ಮಾಡಿ, ಆನಂತರ ಬೌಲಿಂಗ್​ ಮಾಡಬೇಕು ಅದರಂತೆಯೇ ಆಯಿತು" ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net