ಮೇಕೆಯನ್ನು ಕೊಂದ ವ್ಯಕ್ತಿಯನ್ನು ಬಲಿ ತೆಗೆದುಕೊಂಡ ಆಡಿನ ಕಣ್ಣು

goat
ಸಾಂದರ್ಭಿಕ ಚಿತ್ರ
Published on

ರಾಯ್​ಪುರ: ತಾವು ಅಂದುಕೊಂಡ ಕಾರ್ಯ ಸರಾಗವಾಗಿ ನೆರವೇರಲಿ ಎಂದು ಜನರು ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ತಮ್ಮ ಇಚ್ಛೆ ಈಡೇರಿದ ಬಳಿಕ ದೇವರಿಗೆ ತಾವು ಅಂದುಕೊಂಡ ರೀತಿಯಲ್ಲಿ ಹರಕೆ ತೀರಿಸುವ ಮೂಲಕ ಭಕ್ತಿಯನ್ನು ಸಮರ್ಪಿಸುತ್ತಾರೆ. ಆದರೆ, ಇಲ್ಲೊಬ್ಬ ದೇವರಿಗೆ ಬಲಿ ಕೊಟ್ಟ ಆಡಿನಿಂದ ಮೃತಪಟ್ಟಿರುವ ಘಟನೆ ಛತ್ತೀಸ್​ಗಢದ ಸೂರಜ್​ಪುರ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಬಗರ್​ ಸಾಯಿ(51) ಎಂದು ಗುರುತಿಸಲಾಗಿದ್ದು, ತಮ್ಮ ಇಷ್ಟಾರ್ಥಗಳು ನೆರವೇರಿದ ಕಾರಣ ದೇವಸ್ಥಾನದಲ್ಲಿ ಆಡನ್ನು ಬಲಿ ಕೊಟ್ಟಿದ್ದರು.

Goat

ಮದನಪುರ ಗ್ರಾಮದ ನಿವಾಸಿ ಬಗರ್​ ಸಾಯಿ ತಮ್ಮ ಬಂಧು ಬಳಗದೊಂದಿಗೆ ಖೋಪಾ ಧಾನ್​ನಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ ಆಡನ್ನು ಬಲಿ ಕೊಡುವ ಮೂಲಕ ಹರಕೆ ತೀರಿಸಿದ್ದರು. ಬಳಿಕ ಅಡುಗೆ ಮಾಡಿ ಎಲ್ಲರೂ ಊಟಕ್ಕೆ ಕುಳಿತುಕೊಂಡಿದ್ದಾರೆ.

ಈ ವೇಳೆ ಬಗರ್​ ಬೇಯಿಸಿದ ಆಡಿನ ಕಣ್ಣನ್ನು ಸೇವಿಸಲು ಎತ್ತಿಕೊಂಡಿದ್ದಾರೆ. ಸೇವಿಸಿದ ಬಳಿಕ ಅದರ ಕಣ್ಣು ಬಗರ್​ ಅವರ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಉಸಿರಾಡಲು ಸಾಧ್ಯವಾಗದೆ ಪ್ರಾಣ ಬಿಟ್ಟಿದ್ದಾರೆ. ಕೂಡಲೇ ಅವರನ್ನು ಸೂರಜ್​ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ವೈದ್ಯರು ಬಗರ್​ ಸಾಯಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net