15 ವರ್ಷಗಳ ಕಾಲ ಶವ ಮನೆಯಲ್ಲೇ ಇಟ್ಟುಕೊಂಡಿದ್ದ ವಿಕ್ಷಿಪ್ತ ವ್ಯಕ್ತಿ; ದೋಚಲು ಬಂದಿದ್ದವನ ಗುಂಡಿಟ್ಟು ಕೊಂದಿದ್ದ...

crime
Published on

ನವದೆಹಲಿ: ಈತ ಅತ್ಯಂತ ವಿಕ್ಷಿಪ್ತ ವ್ಯಕ್ತಿ. ಏಕೆಂದರೆ ಈತ ವ್ಯಕ್ತಿಯೊಬ್ಬನನ್ನು ಕೊಂದಿದ್ದಷ್ಟೇ ಅಲ್ಲ, 15 ವರ್ಷಗಳ ಕಾಲ ಆ ಶವವನ್ನು ಮನೆಯಲ್ಲೇ ಇರಿಸಿಕೊಂಡಿದ್ದ. ಇಂಥದ್ದೊಂದು ಪ್ರಕರಣ ತಡವಾಗಿ ಬೆಳಕಿಗೆ ಬಂದು, ಮತ್ತೊಮ್ಮೆ ಸುದ್ದಿಯಾಗಿ ಹರಿದಾಡಲಾರಂಭಿಸಿದೆ.

ಅಷ್ಟಕ್ಕೂ ಇದು ನಡೆದಿದ್ದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ. ಅಲ್ಲಿನ ಬ್ರೂಸ್​ ರಾಬರ್ಟ್ಸ್ ಎಂಬಾತನ ಮನೆಗೆ ಸುಲಿಗೆಕೋರ ಶ್ನೇನ್​ ಶ್ನೆಲ್​​ಮ್ಯಾನ್ ಎಂಬಾತ ನುಗ್ಗಿದ್ದು, ಆತನನ್ನು ಗುಂಡಿಟ್ಟು ಕೊಂದಿದ್ದ. ಮಾತ್ರವಲ್ಲ ಆತನ ಶವವನ್ನು ಮನೆಯಲ್ಲೇ ಮುಚ್ಚಿಟ್ಟಿದ್ದ. ಇನ್ನು ವಾಸನೆ ಬರಬಾರದು ಎಂಬ ಕಾರಣಕ್ಕೆ 70 ಏರ್​ ಫ್ರೆಷನರ್ ಬಾಟಲಿಗಳನ್ನು ಬಳಸಿದ್ದ.

ಅಂದಹಾಗೆ ಇದು 2002ರಲ್ಲಿ ನಡೆದಿದ್ದು, 2017ರಲ್ಲಿ ರಾಬರ್ಟ್​ ಮೃತಪಟ್ಟಾಗ ಈ ವಿಷಯ ಸ್ಥಳೀಯರಿಂದಾಗಿ ಬೆಳಕಿಗೆ ಬಂದಿದೆ. ಆತನ ಸಾವಿನ ಬಳಿಕ ಆತನಿದ್ದ ಮನೆ ಕ್ಲೀನ್​ ಮಾಡಲಿಕ್ಕೇ ಸಾಕಷ್ಟು ಸಮಯ ತೆಗೆದುಕೊಂಡಿದ್ದು, ಅಲ್ಲಿ ಡಜನ್​ಗೂ ಅಧಿಕ ಕೋವಿಗಳು ಪತ್ತೆಯಾಗಿವೆ. ಈ ಎಲ್ಲದರ ಕುರಿತು ವಿದೇಶಿ ಮಾಧ್ಯಮವೊಂದು ಗುರುವಾರ ಸುದ್ದಿ ಪ್ರಕಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net