

ನವದೆಹಲಿ: ಹಾವುಗಳು ಎಂದರೆ ಸಾಕು ನಮ್ಮಲ್ಲಿ ಇಂದಿಗೂ ಅನೇಕರಲ್ಲಿ ವಿಪರೀತ ಭಯ ಆವರಿಸಿಕೊಳ್ಳುತ್ತದೆ. ಹಾವು ಕಂಡರೆ ಸಾಕು ಅದೆಷ್ಟೋ ದೂರದಲ್ಲಿ ನಿಂತು ನೋಡುವವರು ಸಾಕಷ್ಟು ಮಂದಿಯಿದ್ದಾರೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ ವಿವಿಧ ಬಗೆಯ ಹಾವುಗಳನ್ನು ಕಿಂಚಿತ್ತು ಹೆದರದೆ, ಕೈಯಲ್ಲಿಡಿದು ವೇದಿಕೆಯ ಮೇಲೆ ಪ್ರದರ್ಶಿಸಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಪ್ರಭಾಕರನ್ ಜಾನ್ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ದೃಶ್ಯ ಪೋಸ್ಟ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಆಶ್ವರ್ಯಚಕಿತರಾಗಿದ್ದಾರೆ. ಯಾವುದೋ ಕಾರ್ಯಕ್ರಮದ ವೇದಿಕೆಯಲ್ಲಿ ಕಾಣಿಸಿಕೊಂಡ ವ್ಯಕ್ತಿ, ತನ್ನ ಅಂಗಿಯನ್ನು ಕಳಚಿದ್ದಾನೆ.
ತದನಂತರ ಬ್ಯಾಗ್ನಲ್ಲಿದ್ದ ಹಾವುಗಳನ್ನು ತೆರೆದು, ಕೈಯಲ್ಲಿ ಹಿಡಿದು, ನೆರದಿದ್ದ ಜನರ ಮುಂದೆ ಪ್ರದರ್ಶಿಸಿದ್ದಾನೆ. ಸದ್ಯ ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದು, ನೆಟ್ಟಿಗರು ಈತನ ಧೈರ್ಯವನ್ನು ಮೆಚ್ಚಿ ಹೆಚ್ಚಿನ ಸಂಖ್ಯೆಯಲ್ಲಿ ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).