ಅಪ್ರಾಪ್ತ ವಯಸ್ಸಿನ ಸಹೋದರಿಯರನ್ನು ಮದುವೆಯಾಗಲು ಗುರುತು ಮರೆಮಾಚಿದ ಯುವಕ!

marriage
Published on

ಡೆಹ್ರಾಡೂನ್​: ಅಪ್ರಾಪ್ತ ವಯಸ್ಸಿನ ಸಹೋದರಿಯರ ಜೊತೆ ಸ್ನೇಹ ಬೆಳೆಸಲು ವ್ಯಕ್ತಿಯೋರ್ವ ತನ್ನ ಗುರುತನ್ನು ಮರೆಮಾಚಿ ಸಿಕ್ಕಿ ಹಾಕಿಕೊಂಡಿರುವ ಘಟನೆ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಮೋರಿ ಎಂಬ ಪ್ರದೇಶದಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಬಾಲಕಿಯರ ತಾಯಿ ನೀಡಿದ ದೂರಿನನ್ವಯ ಉತ್ತರಪ್ರದೇಶ ಮುಜಾಫರ್​ನಗರ ಮೂಲದ ನವಾಬ್​ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೋರಿ ಪೊಲೀಸ್​ ಠಾಣಾಧಿಕಾರಿ ಮೋಹನ್ ಸಿಂಗ್ ಕಥೈಟ್​ ಮೊದಲಿಗೆ ಆರೋಪಿಯು ಪಬ್​ಜಿ, ಫ್ರೀ ಫೈರ್​ ಆನ್​ಲೈನ್​ ಗೇಮ್​ಗಳ ಮೂಲಕ 16 ಮತ್ತು 14 ವರ್ಷದ ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಪರಿಚಯ ಮಾಡಿಕೊಂಡಿದ್ದಾನೆ. ದಿನ ಕಳೆದಂರತೆ ಚಾಟಿಂಗ್​ ಹಾಗೂ ವಿಡಿಯೋ ಕರೆಗಳ ಮೂಲಕ ಆರೋಪಿ ಬಾಲಕಿಯರಿಗೆ ಮತ್ತಷ್ಟು ಹತ್ತಿರವಾಗಿದ್ದಾನೆ.

ಮುಂದೂಂದು ದಿನ ಆರೋಪಿಯೂ ಸಹೋದರಿಯರನ್ನು ಆರಕೋಟ್​ಗೆ ಬರುವಂತೆ ಹೇಳಿದ್ದಾನೆ. ಬಾಲಕಿಯರು ಸ್ನೇಹಿತರ ಜೊತೆ ಹೋಗಿ ಬರುತ್ತೇವೆ ಎಂದು ಹೇಳಿ ಮನೆಯಲ್ಲಿ ಅನುಮತಿ ಕೇಳಿದ್ದಾರೆ. ಇದರಿಂದ ಅನುಮಾನಗೊಂಡ ಪಾಲಕರು ಅವರನ್ನು ಹಿಂಬಾಲಿಸಿ ಮೋಲ್ಡಿ ಎಂಬ ಪ್ರದೇಶದಲ್ಲಿ ಹಿಡಿದಿದ್ದಾರೆ.

ಆರೋಪಿಯೂ ಇಬ್ಬರು ಬಾಲಕಿಯರಿಗೆ ಮುಂಬೈನಲ್ಲಿ ಕೆಲಸ ಕೊಡಿಸಿ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಸಹೋದರಿಯರಿಗೆ ವಂಚಿಸಲು ಯತ್ನಿಸಿದ್ದ. ಅವರ ವಿಡಿಯೋ ಮಾಡಿ ಬೆದರಿಸುತ್ತಿದ್ದ ಎಂದು ದೂರಿನಲ್ಲಿ ಉ್ಲಲೇಖಿಸಲಾಗಿದೆ ಎಂದು ಮೋರಿ ಪೊಲೀಸ್​ ಠಾಣಾಧಿಕಾರಿ ಮೋಹನ್ ಸಿಂಗ್ ಕಥೈಟ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net