ಬಲೆಗೆ ಬಿದ್ದ ಮೀನಿನ ಹೊಟ್ಟೆಯೊಳಗಿತ್ತು ಫುಲ್ ಬಾಟೆಲ್ ವಿಸ್ಕಿ! ಜಾಕ್​ಪಾಟ್ ಎಂದರೆ ಇದೇ ಎಂತಿದ್ದಾನೆ ಆತ

fish
Published on

ಬೆಂಗಳೂರು: ಮೀನಿಗಾಗಿ ಬಲೆ ಹಾಕಿದವನಿಗೆ ಮೀನಿನ ಜತೆ ವಿಸ್ಕಿ ಕೂಡ ಸಿಕ್ಕಿರುವ ಘಟನೆಯೊಂದು ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವ್ಯಕ್ತಿಯೊಬ್ಬ ಬೋಟ್​ನಲ್ಲಿ ಹೋಗುತ್ತಾ ಮೀನಿಗಾಗಿ ಬಲೆ ಹಾಕಿದ್ದಾನೆ. ಸ್ವಲ್ಪ ಸಮಯವಾದ ನಂತರ ಬಲೆಯನ್ನು ಎಳೆದಿದ್ದಾನೆ. ಬಲೆಯಲ್ಲಿ ದೊಡ್ಡದೊಂದು ಮೀನು ಬಿದ್ದಿರುವುದನ್ನು ಕಂಡ ಆತ ಅತ್ಯಂತ ಸಂತೋಷದಿಂದ ಬಲೆ ಎಳೆದಿದ್ದಾನೆ. ಬಲೆ ಎಳೆದು, ಮೀನನ್ನು ಹೊರತೆಗೆದ ಆತ ಅದನ್ನು ತುಂಡರಿಸಲು ಮುಂದಾಗಿದ್ದಾನೆ. ಮೀನಿನ ಮಧ್ಯಭಾಗದವನ್ನು ಸರಿಯಾಗಿ ಕತ್ತರಿಸುವಾಗ ಆತನಿಗೆ ಇನ್ನೂ ಓಪನ್ ಆಗಿರದ ವಿಸ್ಕಿ ಬಾಟೆಲ್ ಸಿಕ್ಕಿದೆ.

ಮೀನು ಹಿಡಿಯಲು ಹೋದವನಿಗೆ ಮೀನಿನ ಜತೆ ಅದರ ಹೊಟ್ಟೆಯಲ್ಲಿದ್ದ ವಿಸ್ಕಿ ಬಾಟೆಲ್ ಕೂಡ ಫ್ರೀ ಆಗಿ ಸಿಕ್ಕಿದ್ದರಿಂದಾಗಿ ಆತ ಸಂತೋಷದಿಂದ ಕುಣಿದಾಡಿದ್ದಾನೆ. ಇದೇ ಜಾಕ್​ಪಾಟ್​ ಎಂದು ಹೇಳಿದ್ದಾನೆ. ಅದರ ವಿಡಿಯೋ ಮಾಡಿಕೊಂಡಿದ್ದ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಅನೇಕ ರೀತಿಯ ಅಭಿಪ್ರಾಯ ವ್ಯಕ್ತಪಡಿಸಲಾರಂಭಿಸಿದ್ದಾರೆ. ಇದು ವಿಡಿಯೋಗಾಗಿ ಮಾಡಿರುವ ಕೆಲಸ ಎಂದು ಅನೇಕರು ಹೇಳುತ್ತಿದ್ದರೆ, ಸಮುದ್ರಗಳಲ್ಲಿ ನಾವು ಎಸೆಯುತ್ತಿರುವ ಕಸ ನೋಡಿದರೆ ಹೀಗೆ ಆಗುವುದಕ್ಕೂ ಸಾಧ್ಯವಿದೆ ಎಂದು ಕೆಲವರು ವಾದಿಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net