ವರ್ಜಿನಿಟಿ ಕಳೆದುಕೊಳ್ಳಲು ಸರಿಯಾದ ವಯಸ್ಸು ಯಾವುದು? ಅಮ್ಮನಿಗೇ ಪ್ರಶ್ನಿಸಿದ ಆಲಿಯಾ ಕಶ್ಯಪ್

alia
Published on

ಮುಂಬೈ: ನಟ ಅನುರಾಗ್ ಕಶ್ಯಪ್ ಅವರ ಮಗಳು ಆಲಿಯಾ ಕಶ್ಯಪ್ ಅಪ್ಪನೊಂದಿಗೆ ಬೋಲ್ಡ್ ಆಗಿ ಮಾತನಾಡಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಅವರ ಮತ್ತೊಂದು ವಿಡಿಯೋ ಸುದ್ದಿಯಾಗುತ್ತಿದೆ. ಈ ಹಿಂದೆ ಆಕೆ ತನ್ನ ಅಮ್ಮನೊಂದಿಗೆ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿವೆ.

ವಿಡಿಯೋ ಚಿತ್ರೀಕರಿಸುವುದಕ್ಕೂ ಮೊದಲು ಆಲಿಯಾ ತನ್ನ ಇನ್​ಸ್ಟಾಗ್ರಾಂ ಹಿಂಬಾಲಕರಿಗೆ ನೀವು ನಿಮ್ಮ ಅಮ್ಮನ ಬಳಿ ಕೇಳಲಾಗದ ಪ್ರಶ್ನೆಗಳನ್ನು ನನಗೆ ಕಳುಹಿಸಿ ಎಂದು ಹೇಳಿದ್ದರು. ಹಿಂಬಾಲಕರಿಂದ ಬಂದ ಮೆಸೇಜ್​ಗಳನ್ನು ಆಕೆ ಒಂದೊಂದಾಗಿ ತಾಯಿಗೆ ಕೇಳಿದ್ದಾರೆ. ನಿಮ್ಮ ಮೊದಲನೇ ಕಿಸ್ ಯಾವ ವಯಸ್ಸಿನಲ್ಲಿ ಆಯಿತು ಎಂದು ಕೇಳಿದಾಗ ಅದಕ್ಕೆ ತಾಯಿ 17 ವರ್ಷ ಎಂದು ಉತ್ತರಿಸಿದ್ದಾರೆ.

ವರ್ಜಿನಿಟಿ ಕಳೆದುಕೊಳ್ಳಲು ಯಾವ ವಯಸ್ಸು ಸೂಕ್ತ ಎಂದು ಆಲಿಯಾ ಪ್ರಶ್ನಿಸಿದ್ದಾರೆ. ಅದಕ್ಕೆ ತಾಯಿ ವಯಸ್ಸು ಎಂದು ಹೇಳಲಾಗುವುದಿಲ್ಲ. ನೀವು ಅದಕ್ಕೆ ಸಿದ್ಧ ಎಂದು ನಿಮಗೆ ಎನ್ನಿಸಬೇಕು. ಹಾಗೆಯೇ ಸೂಕ್ತ ವ್ಯಕ್ತಿ ನಿಮ್ಮವರಾದಾಗ ನೀವು ಆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಆಕೆ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net