

ಕೈರೋ: ಸೋಶಿಯಲ್ ಮೀಡಿಯಾಗಳನ್ನು ಬಳಸುವಾಗ ಅತ್ಯಂತ ಎಚ್ಚರಿಕೆಯಿಂದಿರಬೇಕು. ಒಂದು ಚೂರು ಹೆಚ್ಚು ಕಡಿಮೆಯಾದರೂ ಕಂಟಕ ಸುತ್ತಿಕೊಳ್ಳುತ್ತದೆ. ಅದೇ ರೀತಿ ಟಿಕ್ಟಾಕ್ ಬಳಸುತ್ತಿದ್ದ ಯುವತಿಯೊಬ್ಬಳು ಮಾಡಿದ ತಪ್ಪಿನಿಂದಾಗಿ ಆಕೆ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಘಟನೆ ಈಜಿಪ್ಟ್ನಲ್ಲಿ ನಡೆದಿದೆ.
20 ವರ್ಷ ವಯಸ್ಸಿನ ಹನೀನ್ ಈ ರೀತಿ ಶಿಕ್ಷೆಗೆ ಗುರಿಯಾಗಿರುವ ಯುವತಿ. ಆಕೆ ಟಿಕ್ಟಾಕ್ನಲ್ಲಿ ಸಾಕಷ್ಟು ಆಕ್ಟಿವ್ ಇದ್ದು ಸುಮಾರು 9 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾಳೆ. ಮಹಿಳೆಯರು ಹಣ ಸಂಪಾದನೆ ಮಾಡಲು ಏನು ಮಾಡಬೇಕು ಎನ್ನುವ ವಿಡಿಯೋಗಳನ್ನು ಮಾಡಿ ಹರಿಬಿಡುತ್ತಿರುತ್ತಿದ್ದಳು. ಯಾವ ಆ್ಯಪ್ನಿಂದ ಎಷ್ಟು ಹಣ ಸಂಪಾದನೆ ಮಾಡುವುದರ ಬಗ್ಗೆ ಮಾಹಿತಿ ಕೊಡುತ್ತಿದ್ದಳು. ಆದರೆ ಆಕೆ ವೇಶ್ಯಾವಾಟಿಕೆಗೆ ಸಹಾಯ ಮಾಡುತ್ತಿದ್ದಾಳೆ ಎನ್ನುವ ಕಾರಣಕ್ಕೆ ಆಕೆಯ ಮೇಲೆ ಈಜಿಪ್ಟ್ ಸರ್ಕಾರ ಪ್ರಕರಣ ದಾಖಲಿಸಿಕೊಂಡಿತ್ತು.
ಆದರೆ ಈ ಪ್ರಕರಣದ ವಿಚಾರಣೆಗೆ ಹನೀನ್ ನ್ಯಾಯಾಲಯಕ್ಕೆ ತೆರಳಿಲ್ಲ. ಆ ಹಿನ್ನೆಲೆಯಲ್ಲಿ ಆಕೆಗೆ 10 ಲಕ್ಷ ರೂಪಾಯಿ ದಂಡದ ಜತೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಆಕೆಯೊಂದಿಗೆ ಇನ್ನೂ ಮೂರು ಯುವತಿಯರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. (ಏಜೆನ್ಸೀಸ್)