ಕಾರ ಹುಣ್ಣಿಮೆಯ ದಿನ ಕರಿಬಿಟ್ಟ ಎತ್ತಿನ ಕೆಳಗೇ ಬಿದ್ದ ಯುವಕರು! ಎದ್ದು ಬಂದಿದ್ದೇ ಆಶ್ಚರ್ಯ

1126683
Published on

ಕೊಪ್ಪಳ: ನಾಡಿನಾದ್ಯಂತ ಕಾರ ಹುಣ್ಣಿಮೆ ಆಚರಿಸಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಈ ಹಬಕ್ಕೆ ಎತ್ತಿನ ಓಟದ ಸ್ಪರ್ಧೆ ಆಚರಿಸಲಾಗುತ್ತದೆ. ಕರಿಬಿಡುವುದು ಎಂದೇ ಪ್ರಚಲಿತವಾದ ಸ್ಪರ್ಧೆಯಲ್ಲಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ತಾಲೂಕು ತಿಗರಿ ಗ್ರಾಮದಲ್ಲಿ ಎತ್ತಿನ ಓಟವನ್ನು ಏರ್ಪಡಿಸಲಾಗಿತ್ತು. ಎತ್ತನ್ನು ಓಡಲು ಬಿಟ್ಟ ಯುವಕರು ಆಕಸ್ಮಿಕವಾಗಿ ಎತ್ತಿನ ಕಾಲಡಿಗೇ ಬಿದ್ದಿದ್ದಾರೆ. ರಭಸವಾಗಿ ಓಡಲು ಹೊರಟಿದ್ದ ಎತ್ತಿನ ಕೆಳಗೆ ಸಿಕ್ಕಿದ್ದ ಯುವಕರು ಅದೇಗೋ ಕಷ್ಟು ಪಟ್ಟು ಮೇಲೆದ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net