ತಾನಾಡಿದ ಒಂದೇ ಮಾತಿಗೆ ಸಂಬಂಧಿಯಿಂದಲೇ ಬರ್ಬರ ಹತ್ಯೆಯಾದ ಸುಂದರಿ: ಬೆಚ್ಚಿಬೀಳಿಸುತ್ತೇ ಕೊಲೆಗಾರನ ಕ್ರೌರ್ಯ!

Austria
Published on

ವಿಯೆನ್ನಾ: ಕ್ರಿಶ್ಚಿಯನ್​ ಸಂಭ್ರಮದಂದು ತನ್ನ ಪ್ರೀತಿಯನ್ನು ನಿರಾಕರಿಸಿದಕ್ಕೆ ಸೋದರ ಸಂಬಂಧಿ ಯುವತಿಯನ್ನು ಕೊಲೆ ಮಾಡಿದ ಯುವಕನೋರ್ವ ಆಕೆಯ ಇಡೀ ಕುಟುಂಬವನ್ನು ನಾಶಮಾಡಲು ಯತ್ನಿಸಿದ ಘಟನೆ ಆಸ್ಟ್ರೀಯಾದದಲ್ಲಿ ವರದಿಯಾಗಿದೆ.

ವಿದ್ಯಾರ್ಥನಿಯಾಗಿದ್ದ ಸಂತ್ರಸ್ತೆ ಎನಿ ಅಗುಯಿಲರ್ (25) ಆಸ್ಟ್ರೀಯಾದ ಲಿಯಾಂಡಿಂಗ್​ ಗ್ರಾಮದಲ್ಲಿ ತನ್ನ ಸಹೋದರಿಯ ಮನೆಯಲ್ಲಿ ವಾಸವಿದ್ದಳು. ಅಗುಯಿಲರ್​ ಸಹೋದರಿಗೆ ಮದುವೆಯಾಗಿ ಓರ್ವ ಮಗಳಿದ್ದಳು. ಅಗುಯಿಲರ್​ ಸೇರಿ ಒಟ್ಟು ಮನೆಯಲ್ಲಿ ನಾಲ್ವರು ಇದ್ದರು. ಸಹೋದರಿಯರಿಬ್ಬರು ಸಹ ಕೊಲೆಗಾರನಿಗೆ ದೂರದ ಸಂಬಂಧಿಯಾಗಿದ್ದರು ಅಲ್ಲದೆ, ಮೂವರು ಸಹ ಕೇಂದ್ರ ಅಮೆರಿಕದ ಹೊಂಡಾರಸ್​ ಮೂಲದವರು.

ಕೊಲೆಗಾರನನ್ನು ಗೇಬ್ರಿಯಲ್ಲೆ ಎನ್​ ಎಂದು ಗುರುತಿಸಲಾಗಿದೆ. ಕ್ರಿಸ್​ಮಸ್​ ಮತ್ತು ನ್ಯೂ ಇಯರ್​ ಸಂಭ್ರಮಾಚರಣೆಯ ಭಾಗವಾಗಿ ಗೇಬ್ರಿಯಲ್ಲೇನನ್ನು ಮನೆಗೆ ಆಹ್ವಾನಿಸಿದ್ದರು. ಭೇಟಿ ನೀಡಿದ್ದ ಆತ ಅಗುಯಿಲರ್ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ. ತನ್ನ ಪ್ರೀತಿಯನ್ನು ಪ್ರಸ್ತಾಪ ಮಾಡಿದಾಗ ನಿರಾಕರಿಸಿದ ಅಗುಯಿಲರ್​, ಈಗಾಗಲೇ ತನಗೆ ಬಾಯ್​ಫ್ರೆಂಡ್​ ಇರುವುದಾಗಿಯು ಮತ್ತು ಹೊಸ ಸಂಬಂಧವನ್ನು ಬೆಳೆಸಲು ಇಷ್ಟವಿಲ್ಲದಿರುವುದಾಗಿ ಹೇಳಿದ್ದಳು.

ಇದರಿಂದ ತೀವ್ರ ಅಸಮಾಧಾನಗೊಂಡ ಗೇಬ್ರಿಯಲ್ಲೆ ಆಕೆಯ ಇಡೀ ಕುಟುಂಬವನ್ನು ನಾಶ ಮಾಡುವ ನಿರ್ಧಾರಕ್ಕೆ ಬಂದಿದ್ದ. ಸದ್ಯ ಪೊಲೀಸರ ವಶದಲ್ಲಿರುವ ಆರೋಪಿ, ಬರಿಗೈನಿಂದ ಉಸಿರುಗಟ್ಟಿಸಿ ಅಗುಯಿಲರ್​ಳನ್ನು ಕೊಲೆ ಮಾಡಿದ್ದಾಗಿ ಮತ್ತು ಮನೆಯ ಬೇಸ್​ಮೆಂಟ್​ನಲ್ಲಿ ಚಾಕುವಿನಿಂದ ಅನೇಕ ಬಾರಿ ಆಕೆಯ ಹೊಟ್ಟೆಗೆ ಇರಿದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದೇ ವೇಳೆ ಮನೆಯ ಇತರೆ ಸದಸ್ಯರು ಕ್ರಿಸ್​ಮಸ್​ ಎಂಜಾಯ್​ನಲ್ಲಿರುವಾಗಲೇ ಗೇಬ್ರಿಯಲ್ಲೇ ಕ್ರೂರತ್ವ ಮೆರೆದಿದ್ದ.

ಇತ್ತ ಬೇಸ್​ಮೆಂಟ್​ನಲ್ಲಿ ಏನು ನಡೆದಿದೆ ಎಂಬ ಅರಿವು ಅಗುಯಿಲರ್​ ಸಹೋದರಿ, ಆಕೆಯ ಪತಿ ಮತ್ತು ಮಗಳಿಗೆ ಇರಲಿಲ್ಲ. ಕೊಲೆಗಾರನ ಮುಂದಿನ ದೃಷ್ಟಿ ಅಗುಯಿಲರ್​ ಸಹೋದರಿ ಮೇಲೆ ಬಿದ್ದಿತ್ತು. ಆಕೆಯನ್ನು ಪುಸಲಾಯಿಸಿ ಬೇಸ್​ಮೆಂಟ್​ಗೆ ಕರೆತಂದು ಬಲವಾದ ಆಯುಧದಿಂದ ತಲೆಗೆ ಹೊಡೆದಿದ್ದ. ಬಳಿಕ ಉಸಿರುಗಟ್ಟಿಸಿ ಸಾಯಿಸುವಾಗ ನರಳಾಟ ಕೇಳಿದ ಪತಿ ಬೇಸ್​ಮೆಂಟ್​ಗೆ​ ಓಡಿ ಬರುತ್ತಾನೆ. ನಂತರ ಆತನನ್ನು ನೂಕಿ ದಾಳಿ ಮಾಡುತ್ತಾನೆ. ಇಬ್ಬರು ಜಗಳ ಆಡುವುದನ್ನು ಆತನ 8 ವರ್ಷದ ಮಗಳು ನೋಡುತ್ತಾಳೆ. ಬಳಿಕ ತನ್ನ ತಾತನಿಗೆ ವಿಷಯ ತಿಳಿಸುತ್ತಾಳೆ. ಬಳಿಕ ಎಲ್ಲರೂ ಸೇರಿ ಆರೋಪಿಯನ್ನು ಹಿಡಿದು ಕೇಬಲ್​ ವೈರ್​ನಿಂದ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net