More

    ಹೊಸ ವರ್ಷ ಯಾರಿಗೆ ಹರ್ಷ- ಯಾರಿಗೆ ಯಾವ ಫಲ: ರಾಜಗುರು ಬಿ.ಎಸ್.ದ್ವಾರಕನಾಥ್ ಅವರಿಂದ ಮುನ್ನೋಟ

    2020 ಪೂರ್ಣ ವರ್ಷ ಕರೊನಾ ವ್ಯಾಧಿಯ ಕನವರಿಕೆಯಲ್ಲೇ ಕಳೆದುಹೋಯಿತು. 2021 ವರ್ಷ ಹೇಗಿದೆ? ಯಾರ ಗ್ರಹಗತಿಗಳು ಹೇಗಿರಲಿವೆ? ಯಾವ ರಾಶಿಯಲ್ಲಿ ಜನಿಸಿದವರು ಯಾವ ಫಲ ಹೊಂದಿರುತ್ತಾರೆ ಎಂಬ ಕುತೂಹಲ ಸಹಜ. ಈ ಹಿನ್ನೆಲೆಯಲ್ಲಿ 2021ನೇ ವರ್ಷದಲ್ಲಿ ದ್ವಾದಶ ರಾಶಿಯ ಫಲಾಫಲಗಳ ಸಮಗ್ರ ಮಾಹಿತಿ ಇಲ್ಲಿದೆ.
     

    ಮೇಷ 2020ರಲ್ಲಿ ಬಂದಿರುವ ದುಪ್ಪಟ್ಟು ತೊಂದರೆ ಎದುರಿಸಿರುವ ನಿಮ್ಮನ್ನು 2021ರಲ್ಲಿ ಏಪ್ರಿಲ್4ನೇ ತಾರೀಕಿನವರೆಗೂ ಗುರು ರಕ್ಷಿಸುತ್ತಾನೆ. 2021ನೇ ಇಸವಿಯ ನವೆಂಬರ್​ವರೆಗೂ ನಿಮ್ಮ ಕಾರ್ಯಗಳು ಸುಗಮವಾಗಿ ನಡೆದು ಆನಂದವನ್ನು ತರುತ್ತವೆ. ಆದರೆ ರಾಶ್ಯಾಧಿಪತಿ ಸುಬ್ರಹ್ಮಣ್ಯೇಶ್ವರನನ್ನು ತಮಿಳುನಾಡು ತಿರುಚ್ಚಂದೂರಿನಲ್ಲಿ ದರ್ಶನ ಮಾಡಿ ಬಂದರೆ ಹೆಚ್ಚು ಸುಖ. ಸಣ್ಣಪುಟ್ಟ ವಿಚಾರಗಳಿಗೆ ಗೊಂದಲ ಮಾಡಿಕೊಳ್ಳದಿರಿ. ಮಕರ ರಾಶಿಯ ರವಿಯು ಬೆಳಕನ್ನು ತೋರಿಸಿ ದ್ವಿತೀಯ ರಾಹು ಕೇತುಗಳು ಧನವನ್ನು ಕೊಡುತ್ತಾರೆ. ಆನಂತರದಲ್ಲಿ ಕುಂಭರಾಶಿಯನ್ನು ಪ್ರವೇಶಿಸಿ ಹನ್ನೊಂದರ ಗುರುವು ಮತ್ತೆ ಹೆಚ್ಚಿನ ಸುಖವನ್ನು ಕೊಡುತ್ತಾನೆ. ಆರೋಗ್ಯದ ದೃಷ್ಟಿಯಿಂದ ಪೀಠಾಪುರದಲ್ಲಿರುವ ದತ್ತ ದೇವರನ್ನು ದರ್ಶಿಸಿ ಕೈಲಾದ ಸೇವೆ ಮಾಡಿ ಬನ್ನಿ. ದೈವ ಋಣ, ಪಿತೃ ಋಣ, ಋಷಿ ಋಣ ಈ ಮೂರರಲ್ಲಿ ಪಿತೃ ಋಣವನ್ನು ತೀರಿಸುವುದು ಮನುಷ್ಯನ ಕರ್ತವ್ಯ. ವೃದಾಟಛಿಶ್ರಮವನ್ನು ತೋರದಿರಿ,ವೃದ್ಧರಾದ ಮಾತಾ ಪಿತೃಗಳನ್ನು ಆರೈಕೆ ಮಾಡಿ ವಿಶೇಷ ಸುಖ ಲಾಭವನ್ನು ಪಡೆಯಿರಿ.

    ವೃಷಭ ಜನವರಿಯಿಂದ ಒಂಭತ್ತರ ಸೂರ್ಯನು ಗುರು ಮತ್ತು ಶನಿಯನ್ನು ಬಂದು ಸೇರುತ್ತಾನೆ. ಒಳ್ಳೆಯ ನೌಕರಿಯಲ್ಲಿದ್ದಲ್ಲಿ ವಿಶೇಷವಾದ ಬೆಳಕನ್ನು, ಕೀರ್ತಿಯನ್ನು ತಂದುಕೊಡುತ್ತಾನೆ. ರಾಜಕಾರಣಿಗಳು ಮತ್ತು ಸ್ವಂತ ಉದ್ಯೋಗದಲ್ಲಿ ಬಂಡವಾಳ ಹೂಡುವವರು ಅವಶ್ಯಕವಾಗಿ ನರಸಿಂಹದೇವರ ದರ್ಶನವನ್ನು ಪಡೆದು ತೊಂದರೆಗಳನ್ನು, ಶತ್ರುಕಾಟಗಳನ್ನು ಜಯಿಸಿ ಆನಂದಪಡುವ ಕಾಲ. ವಿಚಾರ ಮಗ್ನರಾಗಿ, ಯಾವ ಗೊಂದಲಗಳಿಗೂ ಸಿಕ್ಕಿಕೊಳ್ಳದೇ ಜಾಣ್ಮೆಯಿಂದ ನಿರ್ವಹಿಸಿದಲ್ಲಿ ಹೆಚ್ಚು ಯಶಸ್ಸು, ಕೀರ್ತಿಯನ್ನು ಸಂಪಾದಿಸಬಹುದು. ಅಧಿಕಾರದಲ್ಲಿ ದರ್ಪವನ್ನು ತೋರಿಸದೆ ಎಲ್ಲರನ್ನೂ ಸಮನಾಗಿ ಕಾಣುವ ಗುಣವಿರಬೇಕು. ಗುಣಕ್ಕೆ ಮಾತ್ಸರ್ಯವು ಸಲ್ಲದು. ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದ್ದು, ನಿಮ್ಮ ಒತ್ತಡವೇ ಕಾರಣವಾಗಿರುತ್ತದೆ. ಯಾವುದೋ ದೇವರ ಹರಕೆಯನ್ನು ತೀರಿಸದೆ ಗೊಂದಲಕ್ಕೆ ಈಡಾಗುತ್ತೀರಿ. ಅಂಗಾರಕನು ಹನ್ನೆರಡರಲ್ಲಿರುವುದರಿಂದ ನರಸಿಂಹ ಹಾಗೂ ಷಣ್ಮುಖನ ಹರಕೆ ಇದ್ದಲ್ಲಿ ಕೂಡಲೆ ತೀರಿಸಿದರೆ ನಿಮ್ಮ ಸಂಕೋಲೆಗಳಿಂದ ಆಚೆ ಬಂದು ದಾರಿ ಕಾಣುತ್ತೀರಿ.

    ಮಿಥುನ  ಸಂಯಮ ಜೀವನವು ಸುಖಜೀವನವನ್ನು, ಆನಂದವನ್ನೂ ನೀಡುತ್ತದೆ. ಸಪ್ತಮದಲ್ಲಿ ಯಾವ ಪುಣ್ಯ ಗ್ರಹವೂ ಇಲ್ಲದೇ, ಅಷ್ಟಮದಲ್ಲಿ ಸೂರ್ಯ, ಗುರು, ಶನಿ ಎಲ್ಲ ಪಾಪಗ್ರಹಗಳೂ ಒಟ್ಟಾಗಿ ದಾರಿ ಕಾಣದಂತೆ ಆಗುವ ಸಮಯವಿದು. ಸಮಯಕ್ಕೆ ತಕ್ಕನಾದ ಬುದಿಟಛಿಯೇ ಔಷಧ. ಅನ್ಯರನ್ನು ನಿಂದಿಸುವುದೂ ಬೇಡ, ಹೆಣ್ಣುಮಕ್ಕಳ ಮನಸ್ಸನ್ನು ನೋಯಿಸುವುದೂ ಬೇಡ. ನಾಲಗೆಯನ್ನು ಹಿಡಿತದಲ್ಲಿ ಇಟ್ಟುಕೊಂಡಲ್ಲಿ ಏಪ್ರಿಲ್ ಐದರ ನಂತರ ಗುರುವು ಕುಂಭರಾಶಿಗೆ ಬಂದಾಗ ನಿಮ್ಮನ್ನು ಸಂರಕ್ಷಿಸುತ್ತಾನೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಮನುಷ್ಯನ ಲಕ್ಷಣ. ಈ ಸಮಯದಲ್ಲಿ ಹೆಚ್ಚು ದೈವ ಪ್ರಾರ್ಥನೆ ಅಗತ್ಯವಿದ್ದು, ಎಚ್ಚರವಾಗಿ ಕಾರ್ಯ ನಿರ್ವಹಿಸಿದಲ್ಲಿ ಅನಾಹುತಗಳು, ನಷ್ಟಗಳು ತಪ್ಪುತ್ತವೆ. ವಿಶೇಷವಾಗಿ ಈಶ್ವರ ಅರ್ಚನೆಯನ್ನು ಮಾಡಿ. ಸಾಧ್ಯವಾದರೆ ದ್ವಾದಶ ಲಿಂಗಗಳಲ್ಲಿ ಒಂದಾದ ಭೀಮಾಶಂಕರನನ್ನು ಪೂಜಿಸಿ. ಆರ್ಥಿಕತೆ, ನಿಮ್ಮ ಕೆಲಸ ಕಾರ್ಯಗಳು, ಎಲ್ಲದರಲ್ಲೂ ಭೀಮಬಲವನ್ನು ಪಡೆದು ಸುಖವಾಗಿರಬಹುದು. ಅವಶ್ಯಕತೆಗೆ ಮೀರಿ ಮಾತನಾಡಬಾರದು, ಧನ್ವಂತರಿಯನ್ನು ಪ್ರಾರ್ಥಿಸಿ.  

    ಕರ್ಕ ಸಪ್ತಮದ ಗುರುವು 2021ರ ಏಪ್ರಿಲ್ 5ರವರೆಗೂ ಇದ್ದು, ಆನಂತರದಲ್ಲಿ ಅಷ್ಟಮಕ್ಕೆ ಹೋಗುತ್ತಾನೆ. ಅಲ್ಲಿಯವರೆಗೂ ಗುರುವು ಫಲದಾಯಕನು. ದೇವರು ನಿಮಗೆ ಕರುಣೆಯನ್ನು ತೋರಿಸುತ್ತಾನೆ. ಗುರುವನ್ನು ಅಧಿಕವಾಗಿ ಪ್ರಾರ್ಥಿಸಿ, ಅಷ್ಟಮದಲ್ಲಿ ಗುರು ಬಂದಾಗ ನಿಮ್ಮ ಗ್ರಹಗತಿಗಳ ಸಮತೋಲನವನ್ನು ಕಾಯ್ದುಕೊಳ್ಳಬಹುದು. ತಪ್ಪದೆ ಗುರು ಸೂಕ್ತವನ್ನು ಪಾರಾಯಣ ಮಾಡಿ. ಸೆಪ್ಟೆಂಬರ್ 21ರವರೆಗೆ ನಿತ್ಯವೂ ಗುರು ಚರಿತ್ರೆಯನ್ನು ಪಾರಾಯಣ ಮಾಡಿದಲ್ಲಿ ನಿಮ್ಮ ಕೆಲಸ ಕೈಗೂಡುವುದು. ಸ್ವಕ್ಷೇತ್ರ ಶನಿಯು ಯಾವುದೇ ಆಘಾತಗಳನ್ನು ನೀಡದಿದ್ದರೂ, ಮಾಡುವ ಕೆಲಸಗಳು ನಿಧಾನವಾಗಬಹುದು. ಧಾವಂತವೂ ಬೇಡ, ಚಿಂತೆಯೂ ಬೇಡ. ಸುಸ್ಥಿತಿಯಲ್ಲಿ ಮನಸ್ಸನ್ನು ಇಟ್ಟುಕೊಂಡರೆ, ಆರೋಗ್ಯವನ್ನು ಕಾಪಾಡಿಕೊಂಡು ಗುರುವು ಮೀನ ರಾಶಿಗೆ ಬಂದಾಗ ನೀವು ಬಯಸಿದ್ದನ್ನು ಕೊಡುವನು. ಈ 2021ನೇ ಇಸವಿಯಲ್ಲಿ ನಿಮಗೆ ಗೃಹಲಾಭ, ಭೂಮಿಯಿಂದ ಸಾಕಷ್ಟು ಏಳಿಗೆಯು ಸಿಗುತ್ತದೆ.

     
    ಸಿಂಹ  ಅಧಿಪತಿ ಸೂರ್ಯ ಮತ್ತು ಬುಧ ಪಂಚಮದಲ್ಲಿ ಸೇರಿ ಸಮಯವು ಚೆನ್ನಾಗಿಯೇ ಇದೆ. ಶನಿಯಂತೂ ಆರನೇ ಮನೆಯಲ್ಲಿದ್ದು, ನಿಮಗೆ ಧೈರ್ಯ, ಕೀರ್ತಿ, ಯಶಸ್ಸು, ಕಾರ್ಯದಲ್ಲಿ ಪ್ರಗತಿ, ಸಂತೋಷ, ದೈವ ಕೃಪೆ ಎಲ್ಲವನ್ನೂ ಏಕಕಾಲದಲ್ಲಿ ನೀಡುತ್ತಾನೆ. ಆರರ ಗುರುವು ಏಪ್ರಿಲ್ ನಂತರದಲ್ಲಿ ಏಳನೇ ಮನೆಗೆ ಬಂದು ಈಪ್ಸಿತ ಕಾರ್ಯಗಳಲ್ಲಿ ವಿಶೇಷವಾದ ಯಶಸ್ಸನ್ನು, ಪ್ರಗತಿಯನ್ನು, ಸದೃಢವಾದ ಮನವನ್ನು ಕೊಟ್ಟು ಸಂರಕ್ಷಿಸುತ್ತಾನೆ. ಸಪ್ತಮಕ್ಕೆ ಗುರು ಬಂದಲ್ಲಿ ಭಾರತದಲ್ಲಿ ಮಿಂಚಿನ ಭಯವನ್ನು ಉಂಟುಮಾಡಿರುವ ರೋಗವೊಂದು ನಾಶವಾಗಿ ನಿಮಗೂ, ರಾಷ್ಟ್ರಕ್ಕೂ, ಧನವನ್ನೂ, ಅರೋಗ್ಯವನ್ನೂ ಕೊಡುತ್ತಾನೆ. ಬಲವನ್ನು ಕೊಡುತ್ತಾನೆ. ಸೂರ್ಯ ನಮಸ್ಕಾರ ಮತ್ತು ಅರುಣ ಪಾರಾಯಣ, ಗುರುವಿಗಾಗಿ ಗಣೇಶ ಸಹಸ್ರನಾಮ ಪಾರಾಯಣ ಮಾಡಿ, ನಿಮಗೂ ಇತರರಿಗೂ ಉಪಕಾರವನ್ನು ಮಾಡಿ ಸದೃಢವಾಗಿ ಬದುಕುವ ಕಾಲವಿದೆ.

     
    ಕನ್ಯಾ  ಕನ್ಯಾ ರಾಶಿಯ ಅಧಿಪತಿ ಬುಧ. ಚಂಚಲವಾದ ಮನಸ್ಸನ್ನು ತೊರೆದು ವ್ಯವಹರಿಸಿದಲ್ಲಿ ಬೇಕಾದ್ದನ್ನು ಪಡೆದು, ಸಮಯಕ್ಕೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ಕೆಲಸದಲ್ಲಿ ಪ್ರಗತಿಯನ್ನು ಕಾಣಬಹುದು. ಏಪ್ರಿಲ್ ತಿಂಗಳಲ್ಲಿ ಪಂಚಮ ಶನಿಯು, ಆರರ ಗುರುವು ಕೆಲವೊಂದು ಬೇಸರದ ವಿಚಾರಗಳನ್ನು, ಮನಸ್ಸಿನ ಸ್ಥಿತಿಯನ್ನು ಚಿಂತೆಗೀಡುಮಾಡಿ ಸಮಾಧಾನವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಅದಕ್ಕೆ ಹೆದರಿಕೆಯು ಮದ್ದಲ್ಲ. ಭಯವನ್ನು ಹೋಗಲಾಡಿಸಲು ಭಗವಂತನನ್ನು ಪ್ರಾರ್ಥಿಸುವುದೇ ನಿಮ್ಮ ವಿಚಾರವಾಗಿರಲಿ. ನಿತ್ಯವೂ ರಾಮಾಯಣವನ್ನು ಒಂದೊಂದು ಸರ್ಗದಂತೆ ಪಾರಾಯಣ ಮಾಡಿದಲ್ಲಿ ಕೆಟ್ಟ ಸಮಯವೂ ಒಳ್ಳೆಯ ಸಮಯವಾಗಿ ಪರಿವರ್ತನೆಯಾಗುತ್ತದೆ. ಅದರಲ್ಲೂ ವಿಶೇಷವಾಗಿ ಸಪ್ತ ದಿನಗಳ ಪರ್ಯಂತ ಸುಂದರಕಾಂಡ ಪಾರಾಯಣವನ್ನು ತಪ್ಪದೇ ಮಾಡಿ. ಶನಿವಾರದಲ್ಲಿ ಪ್ರಾಣದೇವರನ್ನು ಪ್ರಾರ್ಥಿಸಿ ಬೇಲದ ಪಾನಕವನ್ನು, ಹೆಸರುಕಾಳಿನ ಹುಸಲಿಯನ್ನೂ ನೈವೇದ್ಯ ಮಾಡಿ ಹಂಚಿ. ನಾಲ್ಕು ತಿಂಗಳ ನಂತರ ನಿಮ್ಮ ಪೂಜಾ ಫಲವು ನಿಮ್ಮದಾಗಿ ನಿಮಗೆ ಭಗವಂತನು ಸುಖವನ್ನು ನೀಡುತ್ತಾನೆ.

      
    ತುಲಾ  ತುಲಾ ರಾಶಿಯು ಸಂಕೇತ ತಕ್ಕಡಿ. ತಕ್ಕಡಿಯಲ್ಲಿ ಶ್ರೀ ಕೃಷ್ಣ ತುಲಾಭಾರದಲ್ಲಿ ಒಂದು ಗುಲಗಂಜಿಯೇ ದೇವರನ್ನು ತೂಗಿ ಸತ್ಯ, ಧರ್ಮ, ನ್ಯಾಯವನ್ನೂ ತೋರಿಸಿದೆ. ಚತುರ್ಥದಲ್ಲಿ ಶನಿ, ಗುರು ಇದ್ದರೂ ಏಪ್ರಿಲ್ 21ರ ನಂತರ ಪಂಚಮ ಗುರು ಬಂದು ಸಂತೋಷ, ಸುಖ, ಜ್ಞಾನ, ಸುಜ್ಞಾನ ಕೊಡುವುದಲ್ಲದೆ ವ್ಯಾಪಾರ ವಹಿವಾಟುಗಳಲ್ಲಿ ಅಭಿವೃದ್ಧಿ ಪಥವನ್ನು ತೋರಿಸುತ್ತಾನೆ. ಧೈರ್ಯಂ ಸರ್ವತ್ರ ಸಾಧನಂ. ಭಯವಿದ್ದಲ್ಲಿ ಕರೊನಾ ಒಂದೇ ಅಲ್ಲ; ಯಾವ ಖಾಯಿಲೆಯೂ ಮನುಷ್ಯನನ್ನು ಜಗ್ಗಿಸುವುದು. ನಿಮ್ಮ ಮನೋಧೈರ್ಯವು ನಿಮ್ಮನ್ನು ಕಾಪಾಡುತ್ತದೆ. ವಿಶೇಷವಾಗಿ ಬಾದಾಮಿಯ ಬನಶಂಕರಿಯನ್ನು ಆರಾಧನೆ ಮಾಡಿ ನಿಮ್ಮ ಸಮತೋಲನವನ್ನು ಕಾಯ್ದುಕೊಂಡು, ಸುಖಮಯ ಜೀವನವನ್ನು, ಬೇಕಾದ ಹಣಗಳಿಕೆಯನ್ನು, ವ್ಯಾಪಾರವನ್ನು ವೃದ್ಧಿ ಮಾಡಿಕೊಳ್ಳುವ ಕಾಲವಿದೆ. ಕಾಶಿಯಲ್ಲಿ ಕಾಲಭೈರವನನ್ನು ಪೂಜಿಸಿ ತುಲಾಧಿಪತಿಯಾದ ಶುಕ್ರನಿಗೆ ದುರ್ಗಾಷ್ಟಕವನ್ನು ಪಠಿಸಿ, ದೇವೀ ಪಾರಾಯಣವನ್ನು ಮಾಡಿ.
     

    ವೃಶ್ಚಿಕ  ಮೇಷ, ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಸಮಯವನ್ನು ಮುಂದೂಡದೆ ಕುಲದೇವರು, ಲಕ್ಷ್ಮೀ ನರಸಿಂಹ, ಸುಬ್ರಹ್ಮಣ್ಯ ದೇವರಿಗೆ ಹರಕೆಗಳನ್ನು ತೀರಿಸಿದಲ್ಲಿ ಸುಖ, ಯಶಸ್ಸು, ಧನ, ಆರೋಗ್ಯವನ್ನು ಕಾಣುತ್ತೀರಿ. ಮನುಷ್ಯ ಎತ್ತರಕ್ಕೆ ಬೆಳೆಯಬೇಕು. ಆದರೆ ಆಕಾಶ ಮುಟ್ಟಲು ಸಾಧ್ಯವಿಲ್ಲ. ನಮ್ಮ ವ್ಯವಹಾರ, ಧನಾರ್ಜನೆ ನಮ್ಮ ಕೈಯಲ್ಲೇ ಇದ್ದು, ನಾವೇ ಅನುಭವಿಸಬೇಕೆಂಬುದು ಮನುಷ್ಯರ ಬಯಕೆ. ಅದಾಗಬೇಕಾದರೆ ಪೂರ್ವಜನ್ಮದ ಪುಣ್ಯವು ಬಹಳವಿರಬೇಕು. ಮೂರರ ಗುರುವು, ಮೂರರ ಶನಿಯು ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸುವುದರಲ್ಲಿ ಸಂದೇಹವಿಲ್ಲ. ಕಳೆದ ಏಳೂವರೆ ವರ್ಷಗಳಲ್ಲಿ ತಡೆದು ಇಟ್ಟಿದ್ದ ಧನ, ಸಂಪತ್ತು, ಸುಖ, ಶಾಂತಿ ಲಭಿಸುವ ಕಾಲ. ಜನ್ಮ ಕೊಟ್ಟ ತಂದೆ ತಾಯಿಯವರ ಬಗ್ಗೆ ಜಾಗರೂಕರಾಗಿರಿ. ಅವರ ಮನೋ ಇಚ್ಛೆಯನ್ನು ಪೂರೈಸಿ ಆಶೀರ್ವಾದಕ್ಕೆ ಭಾಜನರಾದಲ್ಲಿ, ಹಿಂದೆ ಮಾಡಿದ ತಪ್ಪುಗಳನ್ನು ಅರಿತು ಪಾಠವನ್ನು ಕಲಿತಲ್ಲಿ, ಸುಖಕ್ಕೆ ಕೊರತೆ ಇಲ್ಲ. ಆರೋಗ್ಯಕ್ಕೆ ಹಾನಿಯಿಲ್ಲ. ಋಣವನ್ನು ತೀರಿಸುವುದು ನಿಮ್ಮ ಮೊದಲ ಪಾಠವಾಗಲಿ.
     
    ಧನು  ಸ್ವಕ್ಷೇತ್ರದಲ್ಲಿ ಶನಿ ಗುರುವಿನ ಸಂಯೋಜನೆಯಲ್ಲಿ ಕುಳಿತಿದ್ದಾನೆ. ಭಯವೂ ಬೇಡ, ಆತುರವೂ ಬೇಡ. ಇದು ಅಶಾಂತಿಯ ಸಮಯವಲ್ಲ. ತಾಳಿದವನು ಬಾಳಿಯಾನು ಎಂಬ ನಾಣ್ಣುಡಿಯಂತೆ ಯಾವುದೇ ವಿಚಾರವನ್ನು ದೀರ್ಘವಾಗಿ ಆಲೋಚಿಸಿ ವ್ಯವಹರಿಸಿದಲ್ಲಿ ಒಂದು ದೊಡ್ಡ ಬೆಳಕಿನಂತೆ ಹೊರಹೊಮ್ಮುತ್ತೀರಿ. ಅಸಾಧ್ಯವಾದದ್ದು ಯಾವುದೂ ಇಲ್ಲ. ಕಾರ್ಯಸಾಧನೆಗೆ ಎರಡನೇ ಮನೆಯಲ್ಲಿರುವ ಗುರುವೇ ಸಾಕು. ಶನಿಯು ಬಿಡುವ ಕಾಲ ಹತ್ತಿರ ಬರುತ್ತಿದ್ದು, ಜಯದ ಪತಾಕೆಯಲ್ಲಿ ನಿಲ್ಲಿಸುತ್ತಾನೆ. ಗಾಳಿಗೆ ಗುದ್ದಿ ಮೈ ನೋಯಿಸಿಕೊಂಡರೆ ಉಪಯೋಗವಿಲ್ಲ. ತಡವಾದರೂ ಕಾರ್ಯಗಳು ಈಡೇರುತ್ತವೆ. ತಂದೆಯಿಂದ ಪಡೆದ ಗಾಯತ್ರಿಯ ಉಪಾಸನೆ ಮಾಡಿ ತ್ರಿಜಕಲ್ಪ ಮಂತ್ರದಲ್ಲಿ ಸೂರ್ಯ ನಮಸ್ಕಾರವನ್ನು ಮಾಡಿ, ಶಿವ ಸಹಸ್ರನಾಮ ಪಾರಾಯಣ ಮಾಡಿದಲ್ಲಿ ಹೆಚ್ಚಿನ ಕಾರ್ಯಗಳು ಯಾವುದೇ ಪ್ರಯತ್ನ ಇಲ್ಲದೇ ಸಾಗುತ್ತದೆ. ಶನಿಯು ತರುವುದು ಹೆಣ್ಣಿನಿಂದ ಕಳವಳ. ಹಣ್ಣನ್ನು ತಿನ್ನಬೇಕು, ಹೆಣ್ಣನ್ನು ಗೌರವಿಸಬೇಕು ಎಂಬ ನಾಣ್ಣುಡಿಯನ್ನು ಗಮನದಲ್ಲಿಟ್ಟುಕೊಂಡು ಸೌಂದರ್ಯ ಲಹರಿಯನ್ನು ಪಾರಾಯಣ ಮಾಡಿ.
     
    ಮಕರ ಕಳೆದ ಮೂರೂವರೆ ವರ್ಷಗಳಿಂದ ಶನಿಯ ಸಂಚಾರದಲ್ಲಿ ಬೆಂದು ನೊಂದು ಸುಸ್ತಾಗಿದ್ದೀರಿ. ಅರಿವಿಲ್ಲದೆ, ದೈವ ಭಕ್ತಿ ಇಲ್ಲದೆ ನೀವು ಪಡೆದುಕೊಂಡು ಬಂದ ವಿಚಾರಗಳು ನಿಮ್ಮನ್ನೇ ಅಲುಗಾಡುವಂತೆ ಮಾಡಿ ಹಣದ ಕೊರತೆಯನ್ನೂ, ಮನಸ್ಸಿಗೆ ದುಃಖವನ್ನೂ, ಅಧೈರ್ಯವನ್ನೂ, ರೋಗ, ಋಣ, ವೃಥಾ ಅಪವಾದಗಳನ್ನು ಕೊಟ್ಟಿರುತ್ತಾರೆ. ಪ್ರಾಜ್ಞರು ನೆನ್ನೆಯನ್ನು ನೆನೆಸುವುದಿಲ್ಲ. ದೈವ ಭಕ್ತರು ನಾಳೆಯನ್ನು ನೋಡುತ್ತಾರೆ, ದೇವರಲ್ಲಿ ನಂಬಿಕೆ ಇಟ್ಟು ಶ್ರದಾಟಛಿ ಭಕ್ತಿಯಿಂದ ಗುರುವಿಗೆ ಶರಣಾದಲ್ಲಿ ಕಷ್ಟ ಕಾರ್ಪಣ್ಯಗಳು ಮಂಜಿನಂತೆ ಕರಗಿ ಹೋಗುತ್ತದೆ. ಶನಿ ಸಂಚಾರ ಬದಲಿಸುವವರೆಗೂ ವಿಷ್ಣು ಸಹಸ್ರನಾಮ ಪರಾಯಣ, ಶನೈಶ್ಚರ ಅಷ್ಟೋತ್ತರ, ತಿಲಾ ದೀಪವನ್ನು ಬೆಳಗಿಸಿ. ಗಾಣಗಾಪುರದಲ್ಲಿ ಅಷ್ಟ ತೀರ್ಥಗಳ ಸ್ನಾನ ಮಾಡಿ ದೇವರನ್ನು ಸಂದರ್ಶಿಸಿ. ಮಾರ್ಗವನ್ನು ತೋರುತ್ತಾನೆ, ಅನ್ನವನ್ನು ನೀಡುತ್ತಾನೆ, ಅರಿವನ್ನು ಮೂಡಿಸುತ್ತಾನೆ.

     
    ಕುಂಭ  ಮಕರ ಕುಂಭ ರಾಶಿಗೆ ಶನಿಯೇ ಅಧಿಪತಿ. ಶನಿಯು ಕೆಟ್ಟ ಗ್ರಹವಲ್ಲ. ಧರ್ಮಕರ್ವಧಿಪತಿ ಅವನು. ನ್ಯಾಯ, ಧರ್ಮ, ಸತ್ಯ, ಪರೋಪಕಾರ ಇದ್ದಲ್ಲಿ ಅಂತಹವರನ್ನು ಮುಟ್ಟುವುದಿಲ್ಲ. ಚತುಮುಖ ಬ್ರಹ್ಮ ಗುರುವಿನ ಆದೇಶವನ್ನು ಪಾಲಿಸುವವನು. ಪಾಠ ಕಲಿಸಲೇ ಬರುತ್ತಾನೆ. ನಿಮಗೆ ಕೆಟ್ಟದ್ದನ್ನು ಮಾಡುವವರನ್ನು, ದ್ರೋಹಿಗಳು, ದುಷ್ಟರನ್ನು ದೂರವಿಟ್ಟು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಏಕೈಕ ಗ್ರಹ ಶನಿ. ಭಯ ನಿವಾರಣೆಗೆ ದಶರಥ ವಿರಚಿತ ಶನೈಶ್ಚರ ಸ್ತೋತ್ರ ಪಾರಾಯಣ ಮಾಡಿ. 48 ದಿನಗಳ ಪರ್ಯಂತ ಯಾವುದೇ ಈಶ್ವರನ ಗುಡಿಗೆ ನಿರಂತರವಾಗಿ ಹೋಗಿ ಪೂಜಿಸಿ ಅಶ್ವತ್ಥ ವೃಕ್ಷಕ್ಕೂ, ಔದುಂಬರ ವೃಕ್ಷಕ್ಕೂ ಪ್ರದಕ್ಷಿಣೆ ನಮಸ್ಕಾರವನ್ನು ಮಾಡಿ. ನಿಮಗೆ ಮೋಸ ಮಾಡಿದವರು, ತೊಂದರೆ ಕೊಟ್ಟವರಿಗೆ, ನಿಮ್ಮ ದಾರಿಯನ್ನು ತಪ್ಪಿಸಿದವರಿಗೆ ಶನಿಯೇ ವಾಪಸ್ಸು ಕಳುಹಿಸಿ ನಿಮಗೆ ಭಾಗ್ಯವನ್ನು ಕೊಡುತ್ತಾನೆ. ತಾಳ್ಮೆ ಇರಬೇಕು.
     
    ಮೀನ ಆಕಾಶದಲ್ಲಿದ್ದ ಬೆಳಕು ಈ ಲೋಕವನ್ನೇ ಎಬ್ಬಿಸುತ್ತದೆ. ದೇವರು ಕಳೆದ 3 ವರ್ಷಗಳಿಂದ ಏನನ್ನೂ ಕಡಿಮೆ ಮಾಡಿಲ್ಲ. ಇಂದು ಮಾಡಿದ ಪುಣ್ಯ ಮುಂದೆ ನಮ್ಮ ಪಾಲಿಗೆ ಆಪತ್ಕಾಲದಲ್ಲಿ ಭಗವಂತನೇ ಕಾಣದ ಕೈಯಿಂದ ಸಹಾಯ ಮಾಡಿಸುತ್ತಾನೆ. ಬಂದ ಹಣವನ್ನು ಧರ್ಮ ಮಾಡಬೇಕು, ಇಲ್ಲವೇ ವ್ಯಾಧಿಗಾಗಿ ಖರ್ಚು ಮಾಡಿ ವೈದ್ಯರಿಂದ ಚಿಕಿತ್ಸೆಯನ್ನು ಪಡೆಯಬೇಕು. ಗುರುವಿನ ರಾಶಿಯಲ್ಲಿ ಜನಿಸಿದ ನೀವು ಲೋಕೋಪಕಾರಿ ವ್ಯಕ್ತಿಗಳಾಗಿ ಮತ್ತೊಬ್ಬರಿಗೆ ಮಾರ್ಗದರ್ಶನ ನೀಡುವಂತಿರಬೇಕು. ನಿಮಗೆ ಬೇಕಾದ್ದನ್ನು ಕೊಡುವ ಸಮಯ 2022ನೇ ಇಸವಿ ಮಧ್ಯ ಭಾಗದವರೆಗೂ ಇರುತ್ತದೆ. ಅಡೆತಡೆ ಇಲ್ಲದೆ ಪ್ರಗತಿಯನ್ನು, ಆನಂದವನ್ನು ಅನುಭವಿಸುತ್ತೀರಿ. ಶಾಸ್ತ್ರದಲ್ಲಿ ದೈವ ಕೋಪಕ್ಕೆ ಶಾಂತಿಯಿದೆ. ಋಷಿಕೋಪಕ್ಕೆ ಗುರುವಿನ ಆರಾಧನೆಯಿದೆ. ಪಿತೃಶಾಪಕ್ಕೆ ಪರಿಹಾರವಿಲ್ಲ. ವೃದ್ಧರನ್ನು ಪೂಜಿಸಿ. ವೃದ್ಧಾಶ್ರಮಕ್ಕೆ ಸೇರಿಸುವ ಹಂಬಲ ಬಿಡಿ. ಮನುಷ್ಯರು ಒಳ್ಳೆಯದನ್ನು, ಸಿಹಿಯನ್ನು ಹಂಚಿ ತಿನ್ನಬೇಕು.

    2021ರ ಮೊದಲ ಬ್ರೇಕ್​ಅಪ್​ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts