

ನವದೆಹಲಿ: ಸಮಾಜ ಬೆಳೆಯುತ್ತಿದೆ. ಹಾಗೆ ತಂತ್ರಜ್ಞಾನವು ಬೆಳೆಯುತ್ತಿದೆ. ಹೊಸ ಆವಿಷ್ಕಾರಗಳನ್ನು ಮಾನವರು ಮಾಡುತ್ತಿದ್ದಾರೆ. ಪೇಟ್ರೋಲ್, ಡಿಸೇಲ್ ಹಾಗೂ ವಿದ್ಯುತ್ ಚಾಲಿತವಾಗಿ ಚಲಿಸುವ ವಾಹನವನ್ನು ಮಾನವರು ಆವಿಷ್ಕಾರ ಮಾಡಿದ್ದಾರೆ. ಆದರೆ ಒಂದು ಹೆಜ್ಜೆ ಮುಂದೆ ಹೋಗಿ ಇಲ್ಲೊಬ್ಬ ಯುವಕ ಬಿಯರ್ ಚಾಲಿತ ಮೋಟಾರ್‌ಸೈಕಲ್ ಅನಾವರಣ ಮಾಡಿದ್ದಾನೆ.
ತನ್ನ ಅಸಾಮಾನ್ಯ ಆವಿಷ್ಕಾರಗಳಿಗೆ ಸಂಚಲನ ಮೂಡಿಸಿರುವ ಅಮೆರಿಕದ ಮೈಕೆಲ್ಸನ್, ತಮ್ಮ ಇತ್ತೀಚಿನ ಸೃಷ್ಟಿಯೇ ಈ ಬಿಯರ್ ಚಾಲಿತ ಮೋಟಾರ್‌ಸೈಕಲ್ ಆಗಿದೆ. ಈ ಬೈಕ್ ಇನ್ನೂ ರಸ್ತೆಗೆ ಇಳಿದಿಲ್ಲ. ಆದರೆ ಇದು ಸ್ಥಳೀಯ ಪ್ರದರ್ಶನವೊಂದರಲ್ಲಿ ಮೊದಲ ಸ್ಥಾನವನ್ನು ಗಳಿಸಿದೆ.
ಮೈಕೆಲ್ಸನ್ ಇಂತಹದ್ದೊಂದು ವಿಶೇಷ ಬೈಕ್ ಕಂಡುಹಿಡಿದಿದ್ದಾರೆ. ಮೈಕೆಲ್ಸನ್ ಈ ಬೈಕ್ ಅನ್ನು ಬ್ಲೂಮಿಂಗ್ಟನ್‌ನಲ್ಲಿರುವ ತನ್ನ ಗ್ಯಾರೇಜ್‌ನಲ್ಲಿ ನಿರ್ಮಿಸಿದ್ದಾರೆ. ಈ ಬೈಕ್‌ಗೆ ಪೆಟ್ರೋಲ್ ಬೇಕಿಲ್ಲ. ಬದಲಿಗೆ ಇದು ಬಿಯರ್‌ನಿಂದ ಚಲಿಸುತ್ತದೆ. ಈ ಬೈಕ್ ಗಂಟೆಗೆ 240 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಬೈಕ್‌ಗೆ ಅನಿಲ ಚಾಲಿತ ಎಂಜಿನ್ ಬದಲು ಹೀಟಿಂಗ್ ಕಾಯಿಲ್ ಅನ್ನು ಬಳಸಲಾಗಿದೆ. ಈ ಕಾಯಿಲ್ ಬಿಯರ್ ಅನ್ನು 300 ಡಿಗ್ರಿಗಳ ವರೆಗೆ ಬಿಸಿ ಮಾಡಿ ಬೈಕ್ ಮುಂದೆ ಚಲಿಸುವಂತೆ ಮಾಡುತ್ತದೆ.
ಬೈಕ್ನ ವಿಶೇಷತೆ:
"ಅತ್ತ ಇಂಧನದ ಬೆಲೆ ಏರಿಕೆಯಾಗುತ್ತಿದೆ. ನಾನು ಮದ್ಯಪಾನ ಮಾಡಲ್ಲ. ಹೀಗಾಗಿ ಬೈಕ್ ಚಲಿಸುವಂತೆ ಮಾಡಲು ಇಂಧನದ ಬದಲು ಬಿಯರ್ ಅನ್ನು ಬಳಸಿದರೆ ಹೇಗೆ ಎಂದು ನಾನು ಯೋಚಿಸಿ ಮಾಡಿದ್ದೇನೆ" ಎಂದು ಮೈಕೆಲ್ಸನ್ ಹೇಳಿದ್ದಾರೆ.