ಸಾಯುವ ಮುನ್ನ ಮಾಡಿದ್ದ ಸೆಲ್ಫಿ ವಿಡಿಯೋ, ಸತ್ತ 2 ದಿನಗಳ ಬಳಿಕ ವೈರಲ್​

Shivaraj
Published on

ರಾಮನಗರ: ವ್ಯಕ್ತಿಯೊಬ್ಬ ಸಾಯುವ ಮುನ್ನ ಮಾಡಿದ್ದ ಸೆಲ್ಫಿ ವಿಡಿಯೋ ಆತ ಸತ್ತ ಎರಡು ದಿನಗಳ ಬಳಿಕ ವೈರಲ್ ಆಗಿದ್ದು, ಆತನ ಸಾವಿಗೆ ಏನು ಕಾರಣ ಎಂಬುದು ಬಹಿರಂಗಗೊಂಡಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು.

ಶಿವರಾಜ್ ( 33) ಎಂಬಾತ ಫೆ. 3ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ ಅದಕ್ಕೂ ಮುನ್ನ ಆತ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದ. ಸಾಲಗಾರರ ಹಿಂಸೆ ತಾಳಲಾಗದೆ ಆತ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದ. ಅಷ್ಟಕ್ಕೂ ಈತ ಬಲಿಯಾಗಿದ್ದು ಯಾರಿಗೋ ಕೊಡಿಸಿದ್ದ ಸಾಲಕ್ಕೆ, ಅಂದರೆ ಸಾಲಕ್ಕೆ ಜಾಮೀನುದಾರನಾಗಿದ್ದೇ ಪ್ರಾಣಕ್ಕೆ ಮುಳುವಾಗಿದೆ.

ಹೇರ್ ಸಲೂನ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಶಿವರಾಜ್​ ಮಧ್ಯಸ್ಥಿಕೆ ವಹಿಸಿ ರೇಣುಕಾರಾಧ್ಯ, ಧನು, ವೆಂಕಟೇಶ್ ಅವರಿಂದ ಸ್ನೇಹಿತರಿಗೆ ಸಾಲ ಕೊಡಿಸಿದ್ದ. ಆದರೆ ಸಾಲ ಮರುಪಾವತಿ ಸರಿಯಾಗಿ ಆಗದ್ದರಿಂದ ಅವರು ಕಿರುಕುಳ ನೀಡುತ್ತಿದ್ದು, ಮೀಟರ್ ಬಡ್ಡಿ ಕಟ್ಟಿಲ್ಲವೆಂದು ಬೈಕ್​ ಕೂಡ ಕಸಿದುಕೊಂಡಿದ್ದರು ಎಂದು ಸಾಲಗಾರರಿಂದ ಮಾನಸಿಕ ಹಿಂಸೆ ಆಗುತ್ತಿರುವ ಕುರಿತು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ. ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net