

ಚಿಕ್ಕಬಳ್ಳಾಪುರ: ನಗರಸಭೆ ಸದಸ್ಯರೊಬ್ಬರ ವಿರುದ್ಧ ಕಿರುಕುಳ ಆರೋಪ ಹೊರಿಸಿದ ವ್ಯಕ್ತಿಯೊಬ್ಬ ವಾಟ್ಸ್ಆ್ಯಪ್ನಲ್ಲಿ ವಿಡಿಯೋ ಸ್ಟೇಟಸ್ ಹಾಕಿ ನೇಣು ಹಾಕಿಕೊಂಡಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಆತ್ಮಹತ್ಯೆ ಪ್ರಕರಣ ನಡೆದಿದೆ.
ಚಿಕ್ಕಬಳ್ಳಾಪುರ ನಗರದ 15ನೇ ವಾರ್ಡ್ನಲ್ಲಿ ಈ ಘಟನೆ ನಡೆದಿದೆ. ಬಾಡಿಗೆ ಮನೆಯಲ್ಲಿದ್ದ ಪ್ರಶಾಂತ್ (32) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿಗೆ ನಗರಸಭಾ ಸದಸ್ಯ ಅಂಬರೀಷ್ ಕಿರುಕುಳವೇ ಕಾರಣ ಎಂದು ಈತ ಆರೋಪಿಸಿದ್ದಾನೆ.
ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿಕೊಂಡಿರುವ ಈತ, ತನ್ನ ಸಾವಿಗೆ ನಗರಸಭಾ ಸದಸ್ಯ ಅಂಬರೀಷ್ ಕಿರುಕುಳ ಕಾರಣವೆಂದು ಆರೋಪಿಸಿದ್ದಾನೆ. ಬಳಿಕ ಆ ವಿಡಿಯೋ ವಾಟ್ಸ್ಆ್ಯಪ್ ಸ್ಟೇಟಸ್ಗೆ ಹಾಕಿಕೊಂಡು ನೇಣು ಹಾಕಿಕೊಂಡಿದ್ದಾನೆ.
ಈ ಆತ್ಮಹತ್ಯೆ ಬಳಿಕ ನಗರಸಭಾ ಸದಸ್ಯ ಅಂಬರೀಷ್ ಪೊಲೀಸರಿಗೆ ಶರಣಾಗಿದ್ದಾನೆ. ಚಿಕ್ಕಬಳ್ಳಾಪುರ ಡಿವೈಎಸ್ಪಿ ವಾಸುದೇವ್ ಅವರ ಮುಂದೆ ಹಾಜರಾಗುವ ಮೂಲಕ ಶರಣಾಗಿದ್ದಾನೆ. ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಶಾಂತ್ ಆತ್ಮಹತ್ಯೆಯಲ್ಲಿ ತನ್ನ ಪಾತ್ರವಿಲ್ಲ, ತಾನು ಬೆದರಿಕೆ ಹಾಕಿಲ್ಲ, ಯಾವುದೇ ತನಿಖೆಗೂ ಸಿದ್ಧ ಎಂದು ಅಂಬರೀಷ್ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.