ಮತ್ತೆ ಆಯತಪ್ಪಿ ಎಡವಿದ ಮಾಜಿ ಸಿಎಂ; ಈ ಊರಲ್ಲಿ ಸಿದ್ದರಾಮಯ್ಯಗೆ ಇದೇನಿದು ಸಮಸ್ಯೆ?!

1358954
Published on

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಆಯತಪ್ಪಿ ಎಡವಿದ್ದಾರೆ. ಇಂದು ಕಾಲು ಜಾರಿ ಟೀಪಾಯಿ ಮೇಲೆ ಕುಸಿದ ಅವರನ್ನು ಅಂಗರಕ್ಷಕರು ಕೂಡಲೇ ಹಿಡಿದೆತ್ತಿದ್ದಾರೆ. ಅದರಲ್ಲೂ ಈ ಹಿಂದೆಯೂ ಇದೇ ಊರಲ್ಲಿ ಅವರು ಒಮ್ಮೆ ಇದೇ ಥರ ಎಡವಿ ಕುಸಿದಿದ್ದರು!

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಇಂದು ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಅವರ 60ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಅವರು ಮುಖ್ಯವೇದಿಕೆ ಹತ್ತಿ ಆಸನದ ಬಳಿ ತೆರಳುವ ವೇಳೆ ಘಟನೆ ನಡೆದಿದೆ. ಟೀಪಾಯಿ ಕೆಳಗೆ ಬಿದ್ದಿದ್ದ ನೀರಿನ ಬಾಟಲಿ ಮೇಲೆ ಕಾಲಿಟ್ಟಾಗ ಜಾರಿ ಆಯತಪ್ಪಿ ಟೀಪಾಯಿ ಮೇಲೇ ಕುಸಿದಿದ್ದರು. ತಕ್ಷಣವೇ ಅವರನ್ನು ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಮತ್ತು ಅಂಗರಕ್ಷಕರು ಹಿಡಿದೆತ್ತಿದ್ದಾರೆ.

ಎಡವಿದ್ದರಿಂದ ಕೆಲವು ಕ್ಷಣ ಆತಂಕ ಉಂಟಾಗಿತ್ತಾದರೂ ಯಾವುದೇ ತೊಂದರೆ ಆಗಿರಲಿಲ್ಲ. ನಂತರ ಚೇತರಿಸಿಕೊಂಡ ಸಿದ್ದರಾಮಯ್ಯ ಎಂದು ನಿಂತು ಜನರತ್ತ ಕೈಬೀಸಿದ್ದಾರೆ. ಕಳೆದ ತಿಂಗಳಲ್ಲೂ ಬಾಗಲಕೋಟೆಯಲ್ಲಿ ಇದೇ ಥರದ ಘಟನೆ ನಡೆದಿತ್ತು. ಬಾಗಲಕೋಟೆಯಲ್ಲಿ ವಾಹನ‌ ಹತ್ತಿ ಜನರಿಗೆ ಕೈಬೀಸುವ ವೇಳೆ ಸಿದ್ದರಾಮಯ್ಯ ಕುಸಿದಿದ್ದು, ಅವರನ್ನು ಅಂಗರಕ್ಷಕರು ಹಿಡಿದು ಒಳಗೆ ಆಸನದ ಮೇಲೆ ಕೂರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net