ಯುವತಿಯರ ಜತೆ ಪತಿ ಚಾಟಿಂಗ್: ಪ್ರಶ್ನಿಸಿದ ಪತ್ನಿ ಫಿನಿಶ್!

web photo
Published on

ಬೆಂಗಳೂರು: ಯುವತಿಯರ ಜತೆ ಚಾಟಿಂಗ್ ಮಾಡುತ್ತಿದ್ದುದನ್ನು ಪ್ರಶ್ನಿಸಿದ ಪತ್ನಿಯನ್ನು ಕೊಲೆ ಮಾಡಿದ ಪತಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ!

ಬಿಹಾರ ಮೂಲದ ಮನೀಶ್ (42) ಮತ್ತು ಸಂಧ್ಯಾ (35) ಪರಸ್ಪರ ಪ್ರೀತಿಸಿ 2016ರಲ್ಲಿ ವಿವಾಹವಾಗಿದ್ದರು. ಬಳಿಕ ನಗರದ ಎಎ್ಸಿಎಲ್ ಲೇಔಟ್‌ನ ಅಪಾರ್ಟ್‌ಮೆಂಟ್‌ನ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮನೀಶ್ ಸ್ಥಳೀಯ ಗಾರ್ಮೆಂಟ್ಸ್‌ನಲ್ಲಿ ಮ್ಯಾನೇಜರ್ ಆಗಿದ್ದ. ಸಂಧ್ಯಾ ಗೃಹಿಣಿಯಾಗಿದ್ದಳು.

ಮನೀಶ್ ಮದುವೆಗೂ ಮುನ್ನ ದೆಹಲಿಯಲ್ಲಿದ್ದಾಗ ಪಬ್‌ಗಳಿಗೆ ಹೋಗುತ್ತಿದ್ದ. ಆಗ ಯುವತಿಯರ ಸಹವಾಸ ಬೆಳೆಸಿಕೊಂಡಿದ್ದ. ಮದುವೆಯ ಬಳಿಕವೂ ಅವರ ಜತೆ ವಾಟ್ಸ್‌ಆ್ಯಪ್‌ನಲ್ಲಿ ಚಾಟಿಂಗ್ ಮುಂದುವರಿಸಿದ್ದ. ಇದು ಪತ್ನಿಗೆ ಗೊತ್ತಾಗಿ ಪ್ರಶ್ನಿಸಿದ್ದಳು. ಇದೇ ವಿಚಾರವಾಗಿ ದಂಪತಿಯ ನಡುವೆ 2-3 ದಿನದ ಹಿಂದೆ ಗಲಾಟೆಯಾಗಿತ್ತು. ಈ ವೇಳೆ ಆಕ್ರೋಶಗೊಂಡು ಸಿಟ್ಟಿನ ಭರದಲ್ಲಿ ಆತ ಪತ್ನಿಯನ್ನು ಕೊಲೆ ಮಾಡಿದ.

ಸಂಧ್ಯಾ ಕುಟುಂಬದವರು ಆಕೆಗೆ ಪ್ರತಿನಿತ್ಯ ದೆಹಲಿಯಿಂದ ಕರೆ ಮಾಡುತ್ತಿದ್ದರು. ಹಾಗೆಯೇ ಈ ಸಲವೂ ಫೋನ್ ಮಾಡಿದಾಗ ಆಕೆಯ ೆನ್ ಆ್ ಆಗಿತ್ತು. ಮನೀಶ್‌ನ ೆನ್ ಕೂಡ ಸಂಪರ್ಕಕ್ಕೆ ಸಿಗಲಿಲ್ಲ. ಇದರಿಂದ ಆತಂಕಗೊಂಡ ಸಂಧ್ಯಾಳ ಪಾಲಕರು ಹೊಂಗಸಂದ್ರದಲ್ಲಿರುವ ಸಂಬಂಧಿಕರಿಗೆ ಕರೆ ಮಾಡಿದರು.

ಮಗಳ ಮನೆಗೆ ಹೋಗಿ ವಿಚಾರಿಸಿಕೊಂಡು ಬರುವಂತೆ ಕೇಳಿಕೊಂಡರು. ಅವರು ದಂಪತಿ ನೆಲೆಸಿದ್ದ ಮನೆ ಬಳಿ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಕಿಟಕಿಯಲ್ಲಿ ನೋಡಿದಾಗ ಕೊಠಡಿಯಲ್ಲಿ ರಕ್ತ ಹರಿದಿರುವುದು ಕಾಣಿಸಿತು. ಕೂಡಲೇ ನೆರೆಹೊರೆ ನಿವಾಸಿಗಳ ನೆರವಿನಿಂದ ಶೌಚಗೃಹದ ಬಾಗಿಲು ಮುರಿದು ಒಳ ಹೋದರು.

ಅಲ್ಲಿ ಕೈ ಕುಯ್ದುಕೊಂಡಿದ್ದ ಮನೀಶ್, ಬ್ಲೇಡ್ ಹಿಡಿದು ಹತ್ತಿರಕ್ಕೆ ಬರದಂತೆ ಬೆದರಿಸಿದ. ಬಳಿಕ ಅವರಿಂದ ತಪ್ಪಿಸಿಕೊಂಡು 3ನೇ ಮಹಡಿಯಿಂದ ಹಾರಿ ಮೃತಪಟ್ಟ.

ಸಂಬಂಧಿಕರು ಸಂಧ್ಯಾಳನ್ನು ಹುಡುಕುತ್ತಿದ್ದಾಗ, ಮನೆಯಲ್ಲಿ ದುರ್ವಾಸನೆ ಬರುತ್ತಿತ್ತು. ಮಲಗುವ ಕೊಠಡಿಗೆ ಹೋಗಿ ನೋಡಿದಾಗ ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟಿದ್ದ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆಯಾಯಿತು. 2-3 ದಿನದ ಹಿಂದೆಯೇ ಕೊಲೆ ನಡೆದಿರುವುದು ಇದರಿಂದ ಸಾಬೀತಾಯಿತು.

ಶವವನ್ನು ಮನೆಯಲ್ಲಿ ಬಚ್ಚಿಟ್ಟಿದ್ದ ಮನೀಶ್, ವಿಚಾರ ಕುಟುಂಬಸ್ಥರಿಗೆ ಗೊತ್ತಾಗಿದ್ದರಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕೊಲೆ ಹೇಗೆ ಮಾಡಿದ್ದಾನೆ ಎಂಬುದು ಗೊತ್ತಾಗಿಲ್ಲ. ಮರಣೋತ್ತರ ವರದಿ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೀಶ್ ಬರೆದಿಟ್ಟಿದ್ದ ಡೆತ್‌ನೋಟ್ ಕೂಡ ಪತ್ತೆಯಾಗಿದ್ದು ಅದರಲ್ಲಿ ಏನಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net