More

    ವೃದ್ಧೆಯ ಕೊಂದ ಚಿರತೆ ಸೆರೆ ಹಿಡಿಯಲು ಡ್ರೋನ್‌ ಬಳಕೆ!

    ಬೆಂಗಳೂರು: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಜನತೆಯಲ್ಲಿ ಭೀತಿ ಮೂಡಿಸಿರುವ ಚಿರತೆಯನ್ನು ಆದಷ್ಟು ಬೇಗ ಸೆರೆ ಹಿಡಿಯಲು ಡ್ರೋನ್‌ ಬಳಕೆ ಮಾಡಲಾಗುವುದು. ಈ ಬಗ್ಗೆ ಜನ ಆತಂಕ ಪಡಬೇಕಿಲ್ಲ ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಹೇಳಿದ್ದಾರೆ.

    ಈ ಕುರಿತು ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಉಪಮುಖ್ಯಮಂತ್ರಿ, “ಚಿರತೆ ಹಿಡಿಯಲು 15 ಕಡೆಗಳಲ್ಲಿ ಬೋನು ‌ ಇರಿಸಲಾಗಿದ್ದು, ಅದರ ಚಲನವಲನವನ್ನು ತಿಳಿಯಲು ಡ್ರೋನ್‌ ನೆರವು ಪಡೆಯಲಾಗುದು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲು ಸೂಚಿಸಲಾಗಿದೆ” ಎಂದು ತಿಳಿಸಿದರು.

    ಇದನ್ನೂ ಓದಿ ಮನೆಯಲ್ಲಿ ಮಲಗಿದ್ದ 3 ವರ್ಷದ ಮಗುವನ್ನು ಹೊತ್ತೊಯ್ದು ಕೊಂದು ತಿಂದ ಚಿರತೆ

    “ಮಾಗಡಿ ತಾಲೂಕಿನ 68 ವರ್ಷದ ವೃದ್ದೆ ಗಂಗಮ್ಮ ಎಂಬುವವರನ್ನು ಚಿರತೆ ಕೊಂದು ಹಾಕಿರುವುದು ದುರದೃಷ್ಟಕರ. ಇಂಥ ಘಟನೆಗಳು ನಡೆಯದಂತೆ ಎಚ್ಚರವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೃತ ಗಂಗಮ್ಮ ಅವರ ಕುಟುಂಬಕ್ಕೆ ಗುರುವಾರದೊಳಗೆ 7.5 ಲಕ್ಷ ರೂ. ಪರಿಹಾರ ಹಣ ತಲುಪಿಸಲಾಗುವುದು” ಎಂದು ಅವರು ಹೇಳಿದರು.

    “ಕಳೆದ ಶನಿವಾರ ಕದರಯ್ಯನ ಪಾಳ್ಯದಲ್ಲಿ ಮೂರು ವರ್ಷದ ಬಾಲಕ ಚಿರತೆ ದಾಳಿ ಬಲಿಯಾಗಿದ್ದ. ಇದು ಬಹಳ ಬೇಸರದ ಸಂಗತಿ. ಸರ್ಕಾರದ ವತಿಯಿಂದ ಈ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಿಸಲಾಗುತ್ತದೆ” ಎಂದರು.

    ಇದನ್ನೂ ಓದಿ ಕೊನೆಗೂ ಸೆರೆಯಾಯ್ತು ಮಗುವನ್ನು ತಿಂದ ಚಿರತೆ!

    ಸೆಕೆ ಅಂತ ಮನೆಯ ಪಡಸಾಲೆಯಲ್ಲಿ ಮಲಗಿದ್ದ ವೃದ್ಧೆಯನ್ನು ಎಳೆದೊಯ್ದು ತಿಂದ ಚಿರತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts