

ಕೋಟ: ಇಲ್ಲಿನ ಕೋಟ ಗ್ರಾಪಂ ವ್ಯಾಪ್ತಿಯ ಗಿಳಿಯಾರು ಗ್ರಾಮದ ಹೊಳೆ ಹಾಗೂ ಕೆರೆ ಒತ್ತುವರಿ ವಿರುದ್ಧ ಮೇ 7ರಂದು ವಿಜಯವಾಣಿಯಲ್ಲಿ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಬುಧವಾರ ಬ್ರಹ್ಮಾವರ ತಾಲೂಕು ದಂಡಾಧಿಕಾರಿ ಶ್ರೀಕಾಂತ್ ಎಸ್.ಹೆಗ್ಡೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ವಿಜಯವಾಣಿಯೊಂದಿಗೆ ಮಾತನಾಡಿ ಹೊಳೆ ಹಾಗೂ ಕೆರೆ ಒತ್ತುವರಿ ಮೇಲ್ನೋಟಕ್ಕೆ ಕಂಡು ಬಂದಿದೆ ಶೀಘ್ರದಲ್ಲಿ ಸರ್ವೇ ಕಾರ್ಯ ನಡೆಸಿ ಮುಂದಿನ ಕ್ರಮ ಕೈಗೊಳ್ಳಲ್ಲಿದೆ ಎಂದರು. ಹೊಳೆ ಹಾಗೂ ಕೆರೆ ಒತ್ತುರಿ, ಮಳೆಗಾಲದಲ್ಲಿ ಇಲ್ಲಿನ ಕೃಷಿ ಭೂಮಿಯ ನೀರು ಸರಾಗವಾಗಿ ಹರಿಯಲು ಅವಕಾಶಗಳೆ ಕಲ್ಪಿಸದ ಸ್ಮಾರ್ಟ್ ಸಿಟಿ ಹಾಗೂ ಲ್ಯಾಂಡ್ ಮಾಫಿಯಾದವರ ವಿರುದ್ಧ ಕೋಟ ಗ್ರಾಪಂ ಸದಸ್ಯ ಅಜಿತ್ ದೇವಾಡಿಗ ಬ್ರಹ್ಮಾವರ ತಾಲೂಕು ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದು, ಅರ್ಜಿದಾರರಿಗೆ ಮಾಹಿತಿ ನೀಡದೆ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದು, ಜಿಲ್ಲಾಧಿಕಾರಿಗಳಿಗೆ ದೂರು ನೀಡುದಾಗಿ ತಿಳಿಸಿದ್ದಾರೆ.