ಮಾನಸಿಕ ಅಸ್ವಸ್ಥ ಗಂಡನೆದುರೇ ನಡೆಯುತ್ತಿತ್ತು ಅತ್ತಿಗೆಯ ಅಫೇರ್​! ವಿಷಯ ಗೊತ್ತಿದ್ದ ಮೈದುನನಿಗೆ ಅತ್ತಿಗೆ ಮಾಡಿದ್ದೇನು?

Double Murder
Published on

ಜೈಪುರ: ಅಕ್ರಮ ಸಂಬಂಧಗಳು ಒಬ್ಬ ವ್ಯಕ್ತಿಯನ್ನು ಮಾತ್ರವಲ್ಲದೆ ಪೂರ್ತಿ ಕುಟುಂಬವನ್ನೇ ಹಾಳು ಮಾಡಿಬಿಡುತ್ತದೆ ಎನ್ನುತ್ತಾರೆ. ಅದೇ ರೀತಿ ಅಕ್ರಮ ಸಂಬಂಧವನ್ನು ಹೊಂದಿದ್ದ ಮಹಿಳೆಯೊಬ್ಬಳು ತನ್ನ ಜೀವನದ ಜತೆ ಕುಟುಂಬವನ್ನೇ ಹಾಳು ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಜಲಾವರ್​ ಜಿಲ್ಲೆಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. 41 ವರ್ಷದ ಗುಡ್ಡಿನ ಬಾಯಿಯ ಪತಿ ಮಾನಸಿಕ ಅಸ್ವಸ್ಥ. ಆತನಿಂದ ತನಗೆ ಸುಖವಿಲ್ಲ ಎಂದು ನಿರ್ಧರಿಸಿದ ಗುಡ್ಡಿ ಸೋನು ಮಾಲಿ ಹೆಸರಿನ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಈ ವಿಚಾರ ಆಕೆಯ ಗಂಡನ ತಮ್ಮನಿಗೆ ಗೊತ್ತಾಗಿದೆ. ಅತ್ತಿಗೆ ಅಕ್ರಮ ಸಂಬಂಧ ನಡೆಸುತ್ತಿದ್ದಾರೆ. ನೀನು ಆಕೆಗೆ ಬೈದು, ಸರಿ ಮಾಡು ಎಂದು ಆತ ಅಣ್ಣನಿಗೆ ಹೇಳಿಕೊಟ್ಟಿದ್ದಾನೆ. ಇದರಿಂದ ಸಿಟ್ಟಿಗೆದ್ದ ಗುಡ್ಡಿ ಮೈದುನನ ಪ್ರಾಣವನ್ನೇ ತೆಗೆಯಲು ನಿರ್ಧರಿಸಿದ್ದಾಳೆ.

ಗುಡ್ಡಿ, ಆಕೆಯ ಕೆಲಸಗಾರ ಶ್ಯಾಮ್​ ಭೀಮ್​ (30) ಮತ್ತು ಸೋನು ಮೂವರು ಸೇರಿಕೊಂಡು ಮೈದುನನ್ನು ಗದ್ದೆಗೆ ಬರಲು ಹೇಳಿದ್ದಾರೆ. ಅಲ್ಲಿಗೆ ಬಂದ ಆತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಗದ್ದೆಯಲ್ಲಿದ್ದ ಬಾವಿಗೆ ಹೆಣವನ್ನು ಎಸೆದಿದ್ದಾರೆ. ಶವದಲ್ಲಿ ಗಾಯಕ ಕಲೆಗಳಿದ್ದಿದ್ದರಿಂದಾಗಿ ಪೊಲೀಸರು ವಿಚಾರಣೆ ನಡೆಸಿದ್ದು ನಿಜಾಂಶ ಹೊರಬಿದ್ದಿದೆ. ಗುಡ್ಡಿ ಮತ್ತು ಶ್ಯಾಮ್​ನನ್ನು ಪೊಲೀಸರು ಬಂಧಿಸಿದ್ದಾರೆ. ಸೋನುಗಾಗಿ ಹುಡುಕಾಟ ನಡೆಸಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net