ಮೊಮ್ಮಗಳೊಂದಿಗಿನ ಸ್ನೇಹವನ್ನು ಪ್ರಶ್ನಿಸಿದ್ದಕ್ಕೆ ಅಜ್ಜಿಯ ಕಥೆಯನ್ನೇ ಮುಗಿಸಿಬಿಟ್ಟ! ಲವ್​ ಜಿಹಾದ್​ಗೆ ಅಜ್ಜಿ, ಮೊಮ್ಮಗ ಬಲಿ?

murder
Published on

ನಾಗ್ಪುರ: ಲವ್​ ಜಿಹಾದ್​ ಬಗ್ಗೆ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡಿದ್ದು ಕಾನೂನು ಕ್ರಮಕ್ಕೆ ಮುಂದಾಗುತ್ತಿವೆ. ಆದರೆ ಅದೇ ರೀತಿಯ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಇದೀಗ ಮಹಾರಾಷ್ಟ್ರದಲ್ಲಿ ಲವ್​ ಜಿಹಾದ್​​ ರೀತಿಯ ಪ್ರಕರಣದಿಂದಾಗಿ ಅಜ್ಜಿ ಮೊಮ್ಮಗನ ಪ್ರಾಣವೇ ಹೋಗಿದೆ.

ನಾಗ್ಪುರ ನಗರ ವಾಸಿ ಯುವತಿಯೊಬ್ಬಳಿಗೆ (20) ಸಾಮಾಜಿಕ ಜಾಲತಾಣದಲ್ಲಿ 17 ವರ್ಷದ ಯುವಕ ಪರಿಚಿತನಾಗಿದ್ದ. ಬೇರೆ ಧರ್ಮಕ್ಕೆ ಸೇರಿದ್ದ ಆತ ಆಗಾಗ ಯುವತಿಯ ಮನೆಗೆ ಬಂದು ಹೋಗುತ್ತಿದ್ದನಂತೆ. ಆದರೆ ಇತ್ತೀಚೆಗೆ ಯುವತಿ ತನ್ನ ಮನೆಯಿಂದ ತನ್ನ ಅಂಕಲ್​ ಮನೆಗೆ ಶಿಫ್ಟ್​ ಆಗಿದ್ದಾಳೆ. ಅಲ್ಲಿ ತನ್ನ ಅಜ್ಜಿ ಮತ್ತು 10 ವರ್ಷದ ತಮ್ಮನೊಂದಿಗೆ ಕಾಲ ಕಳೆಯುವಾಗ ಈ ಯುವಕ ಅಲ್ಲಿಗೆ ಬಂದಿದ್ದಾನೆ. ತನ್ನ ಮೊಮ್ಮಗಳೊಂದಿಗೆ ಬೇರೆ ಧರ್ಮದ ಯುವಕನೊಬ್ಬ ಸ್ನೇಹ ಮಾಡಿದ್ದನ್ನು ಅಜ್ಜಿ ಪ್ರಶ್ನಿಸಿದ್ದಾಳೆ. ಆಗ ಸಿಟ್ಟಿಗೆದ್ದ ಬಾಲಕ ಅಜ್ಜಿಯ ಕೊಲೆ ಮಾಡಿದ್ದಾನೆ. ಯುವತಿಯ ತಮ್ಮನನ್ನು ಬಾತ್​ರೂಂಗೆ ಎಳೆದೊಯ್ದು ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ನಂತರ ಆತ ಚಲಿಸುತ್ತಿದ್ದ ರೈಲಿಗೆ ಎದುರು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ

ಯುವತಿಯ ತಾಯಿ ಮನೆಗೆ ಬಂದು ನೋಡಿದಾಗ ಆಕೆಗೆ ಆಘಾತವಾಗಿದೆ. ತಕ್ಷಣವೇ ತನ್ನ ಪತಿಗೆ ಈ ವಿಚಾರವನ್ನು ತಿಳಿಸಿದ್ದಾಳೆ. ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದು ಲವ್​ ಜಿಹಾದ್​ನಿಂದಲೇ ಆಗಿರುವ ಕೃತ್ಯ ಎಂದು ವಿಶ್ವ ಹಿಂದೂ ಪರಿಷತ್​ ಮತ್ತು ರಾಷ್ಟ್ರೀಯ ಭಜರಂಗದಳದ ಕಾರ್ಯಕರ್ತರು ದೂರಿದ್ದಾರೆ. ಇಂದು ಸಂಜೆ ನಾಗ್ಪುರದಲ್ಲಿ ಹೋರಾಟಕ್ಕೆ ಕರೆ ನೀಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net