

ನ್ಯೂಯಾರ್ಕ್: ವ್ಯಕ್ತಿಯೊಬ್ಬ ದುಬಾರಿ ಬೆಲೆಯ ಬರೋಬ್ಬರಿ 300 ಐಫೋನ್ ಮೊಬೈಲ್ಗಳನ್ನು ಖರೀದಿಸಿ ಹಿಂತಿರುಗುತ್ತಿದ್ದ. ಈ ವೇಳೆ ಮಾರ್ಗ ಮಧ್ಯೆ ಮೊಬೈಲ್ಗಳು ದರೋಡೆಯಾಗಿವೆ. ಈ ಘಟನೆ ತಡರಾತ್ರಿ ಹೊತ್ತಿಗೆ ನಡೆದಿದೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ 27 ವರ್ಷದ ವ್ಯಕ್ತಿ, ಮೊಬೈಲ್ ಶೋರೂಂ ವ್ಯವಹಾರ ನಡೆಸುತ್ತಿದ್ದ. ಹೀಗಾಗಿ ತನ್ನ ಅಂಗಡಿಯಲ್ಲಿ ಮಾರಾಟ ಮಾಡುವ ಸಲುವಾಗಿ, ಐಫೋನ್ ಸ್ಟೋರ್ಗೆ ತೆರಳಿ, 300 ಮೊಬೈಲ್ ಫೋನ್ಗಳನ್ನು ಖರೀದಿಸಿದ್ದಾನೆ. ಈ ಹಿಂದೆಯೂ ಇದೇ ಪ್ರಮಾಣದಲ್ಲಿ ಮೊಬೈಲ್ ಫೋನ್ ಖರೀದಿಸಿದ್ದರಿಂದಾಗಿ ಈತ ಶೋರೂಂ ಮಂದಿಗೆ ಪರಿಚಿತನಾಗಿದ್ದ.
ಖರೀದಿಯ ನಂತರ ಮೂರು ಬ್ಯಾಗ್ಗಳಲ್ಲಿ ಸ್ಮಾರ್ಟ್ಫೋನ್ಗಳನ್ನು ತುಂಬಿಸಿಕೊಂಡು ತನ್ನ ಕಾರಿನತ್ತ ಹಿಂತಿರುಗಿದ್ದಾನೆ. ಈ ವೇಳೆ ಇಬ್ಬರು ಅಡ್ಡಗಡ್ಡಿ, ಲಕ್ಷಾಂತರ ಬೆಲೆ ಬಾಳುವ ಮೊಬೈಲ್ ಫೋನ್ಗಳನ್ನು ದರೋಡೆ ಮಾಡಲು ಯತ್ನಿಸಿದ್ದಾರೆ.
ವ್ಯಕ್ತಿಯಿಂದ ಬಲವಂತವಾಗಿ ಮೊಬೈಲ್ ಫೋನ್ಗಳನ್ನು ಕಿತ್ತುಕೊಳ್ಳಲು ಯತ್ನಿಸಿದಾಗ ಹೊಡೆದಾಟ ನಡೆದಿದ್ದು, ಖದೀಮರು ವ್ಯಕ್ತಿಯ ಮುಖಕ್ಕೆ ಹಲ್ಲೆ ಮಾಡಿದ್ದಾರೆ. ನಂತರ ಮೂರರಲ್ಲಿ ಒಂದು ಚೀಲವನ್ನು ದರೋಡೆ ಮಾಡಿದ್ದಾರೆ. ಇದರಿಂದ 125 ಐಫೋನ್ ಮೊಬೈಲ್ಗಳು ದರೋಡೆಯಾಗಿದೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. (ಏಜೆನ್ಸೀಸ್)