VIDEO| ನಡುರಸ್ತೆಯಲ್ಲಿ ಕರುವಿನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ ವ್ಯಕ್ತಿ

up
Published on

ನವದೆಹಲಿ: ಪ್ರಾಣಿಸಹಜವಾದ ನಡವಳಿಕೆಯಿಂದ ಸ್ವಲ್ಪ ಗುದ್ದಿದ್ದಕ್ಕೆ ಕರುವೊಂದನ್ನು ಹೊಡೆದು - ಒದ್ದು, ನಂತರ ಇಟ್ಟಿಗೆಯಿಂದಲೂ ಥಳಿಸಿದ ಮಹಾನುಭಾವ ಈಗ ದೆಹಲಿ ಪೊಲೀಸರ ಅತಿಥಿಯಾಗಿದ್ದಾನೆ.

ಪೂರ್ವದೆಹಲಿಯ ವೆಸ್ಟ್ ವಿನೋದನಗರದಲ್ಲಿ ಮಂಗಳವಾರ ಕಮಲ್ ಎಂಬುವ ದಾರಿಯಲ್ಲಿ ಹಾದುಹೋಗುತ್ತಿದ್ದಾಗ ಕರುವೊಂದು ಅಚಾನಕ್ಕಾಗಿ ಪಕ್ಕದಿಂದ ಗುಮ್ಮಿತು. ಇದರಿಂದ ಶಾಕ್ ಆಗಿ ಆತ ಕೈಯಲ್ಲಿದ್ದ ಕವರ್ ಕೆಳಗೆ ಬೀಳಿಸಿಕೊಂಡ. ತಕ್ಷಣ ಕರುವಿಗೆ ಬೂಟುಕಾಲಿನಿಂದ ಒದ್ದು ಮನಬಂದಂತೆ ಹೊಡೆಯಲು ಆರಂಭಿಸಿದ. ನಂತರ ಬಿದ್ದ ಕವರ್ ಇತ್ಯಾದಿಯನ್ನು ಎತ್ತಿಕೊಳ್ಳುತ್ತಾ ಪಕ್ಕದಲ್ಲಿ ಕಂಡ ಇಟ್ಟಿಗೆಯನ್ನೂ ಕೈಗೆತ್ತಿಕೊಂಡು ಕರುವನ್ನು ಚಚ್ಚಲಾರಂಭಿಸಿದ. ಕರು ಸುಸ್ತಾಗಿ ಕೆಳಗೆ ಕುಸಿಯಿತು. ಆತ ಏನೂ ಆಗಿಲ್ಲವೆಂಬಂತೆ ಮುಂದೆ ಸಾಗಿದ.

ಕರು ಬಾಲಿಶವಾಗಿ ಈ ವ್ಯಕ್ತಿಗೆ ಗುದ್ದಿದ್ದು, ನಂತರ ಆತ ಅದನ್ನು ಥಳಿಸಿದ್ದು ಎಲ್ಲವೂ ರಸ್ತೆಯ ಸಿಸಿಟಿವಿಯಲ್ಲಿ ಖೈದಾಯಿತು. ಈ ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಮಂಡಾವಲಿ ಠಾಣೆ ಪೋಲೀಸರು ಪ್ರಾಣಿ ರಕ್ಷಣಾ ಕಾಯ್ದೆಯಡಿ ಕ್ರೌರ್ಯ ಎಸಗಿದ್ದಕ್ಕೆ ಕಮಲ್​ನನ್ನು ಬಂಧಿಸಿದರು. ಕರುವನ್ನು ವೈದ್ಯಕೀಯ ಶುಶ್ರೂಷೆಗಾಗಿ ಸಂಜಯ ಗಾಂಧಿ ಆಸ್ಪತ್ರೆಗೆ ಕರೆದೊಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net