ಮಧ್ಯರಾತ್ರಿ ತಂದೆಗೆ ಹಿಗ್ಗಾಮುಗ್ಗಾ ಥಳಿಸಿದ ಪುತ್ರ; ಅಪ್ಪನ ಜೀವ ಹೋಯ್ತು..ಮಗ ಪರಾರಿಯಾದ

crime
Published on

ಕೋಟಾ: 50ವರ್ಷ ವ್ಯಕ್ತಿಯನ್ನು ಅವರ ಪುತ್ರನೇ ಕೋಲಿನಿಂದ ಹೊಡೆದು ಹತ್ಯೆ ಮಾಡಿದ ದುರ್ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

ಮಂಗಳವಾರ ಮಧ್ಯರಾತ್ರಿ ರೋಹಿತ್​ (25) ತನ್ನ ತಂದೆ ವಾಲ್ಮೀಕಿ ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಪರಿಣಾಮ ಅವರು ಎಚ್ಚರವೇ ಇಲ್ಲದಂತೆ ಬಿದ್ದಿದ್ದರು. ನಂತರ ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ.

ವಾಲ್ಮೀಕಿ ಪ್ರತಿದಿನ ಮದ್ಯಪಾನ ಮಾಡುತ್ತಿದ್ದರು. ಮಿತಿಮೀರಿ ಕುಡಿದು ಮಗನ ಜತೆ, ಕುಟುಂಬದ ಬೇರೆ ಸದಸ್ಯರ ಜತೆ ಸದಾ ಜಗಳವಾಡುತ್ತಿದ್ದರು. ಮಂಗಳವಾರ ರಾತ್ರಿಯೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದಾಗ ರೊಚ್ಚಿಗೆದ್ದ ರೋಹಿತ್ ತಂದೆಗೆ ಥಳಿಸಿದ್ದಾನೆ ಎಂದು ಪೊಲೀಸ್​ ಅಧಿಕಾರಿ ಪ್ರಮೇಂದ್ರ ರಾವತ್​ ತಿಳಿಸಿದ್ದಾರೆ. ರೋಹಿತ್​ ಮನೆಯಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಗುಂಡು ಹಾರಿಸಿಕೊಂಡ ಹಿರಿಯ ಐಪಿಎಸ್ ಅಧಿಕಾರಿ ಆರ್.ಪಿ.ಶರ್ಮಾ

ವಾಲ್ಮೀಕಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ರೋಹಿತ್​​ನನ್ನು ಹುಡುಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net