ಲಿವ್-ಇನ್ ಸಂಗಾತಿ ಮೇಲೆ ಸ್ಕ್ರೂಡ್ರೈವರ್​ನಿಂದ ಹಲ್ಲೆ ನಡೆಸಿದ ಪ್ರಿಯಕರ

manf
Published on

ಗುರುಗ್ರಾಮ್​​: ವ್ಯಕ್ತಿಯೊಬ್ಬ ಲಿವ್-ಇನ್ ಸಂಗಾತಿ ಮೇಲೆ ಸ್ಕ್ರೂಡ್ರೈವರ್​ನಿಂದ ಹಲ್ಲೆ ನಡೆಸಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಉತ್ತರ ಪ್ರದೇಶ ಮೂಲದ ಶಿವಂ ಕುಮಾರ್ ಎಂದು ಗುರುತಿಸಲಾಗಿದೆ. ಮಹಿಳೆ ಉತ್ತರ ಪ್ರದೇಶ ಮೂಲದವರಾಗಿದ್ದು, ತನ್ನೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಶಿವಂ ಒತ್ತಾಯಿಸಿದ್ದ ಎಂದು ಆರೋಪಿಸಿದ್ದಾರೆ. ಆಕೆ ನಿರಾಕರಿಸಿದಾಗ ಸ್ಕ್ರೂಡ್ರೈವರ್‌ನಿಂದ ಕುತ್ತಿಗೆಗೆ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ತಿಳಿಸಿದ್ದಾರೆ.


ಮಹಿಳೆ ನೀಡಿದ ದೂರಿನ ಪ್ರಕಾರ ಆಕೆ ಪತಿಯಿಂದ ಬೇರೆಯಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು, ಅಲ್ಲಿ ಅವರು ಯುಪಿಯ ಕನೌಜ್ ನಿವಾಸಿ ಶಿವಂ ಕುಮಾರ್ ಅವರನ್ನು ಭೇಟಿಯಾದರು.


ಹೀಗೆ ಭೇಟಿಯಾದ ಇಬ್ಬರೂ ವ್-ಇನ್ ಸಂಬಂಧವನ್ನು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ, ಮದುವೆಯ ನೆಪದಲ್ಲಿ ಶಿವಮ್ ನನ್ನೊಂದಿಗೆ ದೈಹಿಕ ಸಂಬಂಧ ಹೊಂದಲು ಮುಂದಾಗಿದ್ದ. ಆದರೆ ಇತ್ತೀಚೆಗಷ್ಟೆ ಶಿವಂ ಮತ್ತೊಬ್ಬಳನ್ನ ಮದುವೆಯಾಗಿರುವ ವಿಚಾರ ನನಗೆ ತಿಳಿಯಿತು.

ಗುರುವಾರ ಸಂಜೆ ಬಂದು ಮತ್ತೆ ದೈಹಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದರು. ನಾನು ನಿರಾಕರಿಸಿದಾಗ ಕೋಪಗೊಂಡು ಸ್ಕ್ರೂಡ್ರೈವರ್‌ನಿಂದ ನನ್ನ ಕುತ್ತಿಗೆಗೆ ಹೊಡೆದು ಪರಾರಿಯಾಗಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ.


ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಾವು ಅವನನ್ನು ವಿಚಾರಣೆ ನಡೆಸುತ್ತಿದ್ದೇವೆ. ಶನಿವಾರ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎಸಿಪಿ ವರುಣ್ ದಹಿಯಾ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net