

ಕೇರಳ: ಇಲ್ಲೊಬ್ಬ ಎಂಥ ನೀಚ ಕೆಲಸ ಮಾಡಿದ್ದಾನೆಂದರೆ ಹೆಂಡತಿಯ ಅಜ್ಜಿಯನ್ನೂ ಬಿಟ್ಟಿಲ್ಲ. ಅಂದರೆ ಈತ ಹೆಂಡತಿಯ ಅಜ್ಜಿಯ ಮೇಲೇ ಅತ್ಯಾಚಾರ ಮಾಡಿದ್ದಾನೆ. ಅಷ್ಟಕ್ಕೂ ಇಂಥ ನೀಚ ಕೃತ್ಯ ಮಾಡಿದ ಈತನ ವಯಸ್ಸು ಅರವತ್ತು.
ಕೇರಳದ ಶಿವದಾಸನ್ ಎಂಬಾತನೇ ಆರೋಪಿ. ಈತ ಮೇ ಎರಡನೇ ವಾರದಲ್ಲಿ ಹೆಂಡತಿಯ ಅಜ್ಜಿ, 85 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ್ದ. ಇದನ್ನು ಆಕೆ ಅಂಗನವಾಡಿ ಕಾರ್ಯಕರ್ತೆ ಬಳಿ ಹೇಳಿಕೊಂಡಿದ್ದು, ಆಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಳು.
ಹೀಗೆ ದಾಖಲಾದ ದೂರಿನ ಮೇರೆಗೆ ಕೇರಳ ಪೊಲೀಸರು ಶಿವದಾಸನ್ನನ್ನು ಶನಿವಾರ ಬಂಧಿಸಿದ್ದಾರೆ. ಈತ ಆ ಮಹಿಳೆ ಮೇಲೆ ಆಗಾಗ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಈತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.