ಬೆಂಕಿ ಹೊತ್ತಿ ಉರಿದ ಟೀ ಅಂಗಡಿ; ಶೇ. 50 ಸುಟ್ಟ ಗಾಯಗಳಿಗೆ ಒಳಗಾದ ಬಾಲಕಿ, ಜೀವನ್ಮರಣ ಹೋರಾಟ..

fire 2
Published on

ಆನೇಕಲ್: ಚಹಾದಂಗಡಿಯೊಂದರಲ್ಲಿ ಸಂಭವಿಸಿದ ಅಗ್ನಿದುರಂತದಿಂದಾಗಿ ಅಂಗಡಿಯು ಬೆಂಕಿ ಹೊತ್ತಿಕೊಂಡು ಉರಿದಿದೆ. ಮಾತ್ರವಲ್ಲ, ಬಾಲಕಿಯೊಬ್ಬಳು ಬೆಂಕಿಯಿಂದ ಸುಟ್ಟ ಗಾಯಗಳಿಗೆ ಒಳಗಾಗಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಗೊಲ್ಲಹಳ್ಳಿ ಎಂಬಲ್ಲಿ ಈ ಅವಘಡ ಸಂಭವಿಸಿದೆ. ಈ ಅಗ್ನಿ ದುರಂತದಲ್ಲಿ ಅಂಗಡಿ ಮಾಲೀಕರ ಪುತ್ರಿ, 11 ವರ್ಷದ ಪಂಕಜ ಶೇ. 50 ಸುಟ್ಟಗಾಯಗಳಿಗೆ ಒಳಗಾಗಿದ್ದಾಳೆ.

ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಇದರಿಂದಾಗಿ ಗ್ಯಾಸ್ ಸಿಲಿಂಡರ್​ ಸ್ಫೋಟಗೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಹೊರಹೊಮ್ಮಿದೆ. ಈ ಸಂದರ್ಭದಲ್ಲಿ ಅಂಗಡಿಯೊಳಗೆ ಇದ್ದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಕೆಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದ್ದರೂ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net