ಮದ್ಯಪಾನ ಮಾಡಲು ಹಣ ಕೊಡಲಿಲ್ಲವೆಂದು ತಾಯಿಯನ್ನೇ ಕೊಂದ!

death
ಸಾಂದರ್ಭಿಕ ಚಿತ್ರ
Published on

ತುಮಕೂರು: ಮದ್ಯಪಾನದ ಅಮಲಿನಲ್ಲಿ ಯಾರ್ಯಾರೋ ಏನೇನೋ ಮಾಡಿದ್ದಿದೆ. ಇನ್ನು ಕೆಲವರು ಮದ್ಯಪಾನ ಮಾಡಲಿಕ್ಕಾಗಿಯೂ ಎಂಥ ಹೀನ ಕೆಲಸಕ್ಕೂ ಮುಂದಾಗಿದ್ದಿದೆ. ಅಂಥ ಪ್ರಕರಣಗಳ ಪಟ್ಟಿಗೆ ಇದು ಮತ್ತೊಂದು ಸೇರ್ಪಡೆ. ಇಲ್ಲೊಬ್ಬ ಮದ್ಯಪಾನ ಮಾಡಲು ಹಣ ಕೊಡಲಿಲ್ಲ ಎಂದು ತಾಯಿಯನ್ನೇ ಕೊಲೆ ಮಾಡಿದ್ದಾನೆ.

ತುಮಕೂರಿನ ಉಪ್ಪಾರಹಳ್ಳಿಯ ಪ್ರಸನ್ನ ಕುಮಾರ್​ ತಾಯಿಯನ್ನು ಕೊಲೆ ಮಾಡಿದವ. ತಿಮ್ಮಕ್ಕ (76) ಕೊಲೆಗೀಡಾದ ಮಹಿಳೆ. ಬೆಸ್ಕಾಂ ಲೈನ್​ಮ್ಯಾನ್ ಆಗಿರುವ ಪ್ರಸನ್ನ, ಮದ್ಯವ್ಯಸನಿ ಆಗಿದ್ದು, ಇತ್ತೀಚೆಗೆ ಕೆಲವು ದಿನಗಳಿಂದ ಕೆಲಸಕ್ಕೂ ಹೋಗುತ್ತಿರಲಿಲ್ಲ. ಅಲ್ಲದೆ, ಮದ್ಯಪಾನಕ್ಕಾಗಿ ಹಣ ನೀಡುವಂತೆ ದಿನಾಲೂ ತಾಯಿಯನ್ನು ಪೀಡಿಸುತ್ತಿದ್ದ.

ಇವತ್ತು ಕೂಡ ಮದ್ಯಪಾನ ಮಾಡಲಿಕ್ಕೆ ಹಣ ಕೊಡು ಎಂದು ತಾಯಿಯನ್ನು ಸತಾಯಿಸಿದ್ದ. ಈ ಸಂದರ್ಭದಲ್ಲಿ ಹಣ ಸಿಗದ್ದರಿಂದ ಸಿಟ್ಟಿಗೆದ್ದ ಪ್ರಸನ್ನ, ತಾಯಿಯ ಮೇಲೆ ಹಲ್ಲೆ ಮಾಡಿದ್ದು, ಆಗ ಆಕೆ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಜತೆಗೆ ಆರೋಪಿ ಪ್ರಸನ್ನ ಕುಮಾರ್​​ನನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net