ಸಿಖ್ಖರ ಪವಿತ್ರ ಕ್ಷೇತ್ರಕ್ಕೆ ನುಗ್ಗಿ ಅಪಚಾರಕ್ಕೆ ಯತ್ನಿಸಿದವ ಹೆಣವಾಗಿ ಹೋದ!

Sikh 1
Published on

ಪಂಜಾಬ್​: ಇಲ್ಲಿನ ಅಮೃತಸರದಲ್ಲಿರುವ ಸಿಖ್ಖರ ಪವಿತ್ರ ಕ್ಷೇತ್ರ ಗೋಲ್ಡನ್ ಟೆಂಪಲ್​​ ಒಳಕ್ಕೆ ನುಗ್ಗಿದ್ದಲ್ಲದೆ, ಅದರ ಪಾವಿತ್ರ್ಯಕ್ಕೆ ಧಕ್ಕೆ ತರಲು ಯತ್ನಿಸಿದವ ಹೆಣವಾಗಿ ಹೋಗಿದ್ದಾನೆ. ಇಂಥದ್ದೊಂದು ಘಟನೆ ಇಂದು ಸಂಜೆಯ ಸುಮಾರಿಗೆ ಇಲ್ಲಿ ನಡೆದಿದೆ.

ಗೋಲ್ಡನ್ ಟೆಂಪಲ್ ಎಂದೂ ಕರೆಯಲಾಗುವ ಈ ದರ್ಬಾರ್ ಸಾಹಿಬ್​ ಒಳಕ್ಕೆ ಎಂದಿನಂತೆ ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ಇದ್ದಕ್ಕಿದ್ದಂತೆ ನುಗ್ಗಿದ್ದಲ್ಲದೆ ಸಿಖ್ಖರ ಪವಿತ್ರ ಗ್ರಂಥ ಗ್ರಂಥ್​ ಸಾಹಿಬ್​ಅನ್ನು ಗೋಲ್ಡನ್​ ಕಿರ್ಪನ್​ನಿಂದ ಹೊಡೆದಿದ್ದಾನೆ. ಈತನ ದಾಳಿಯ ಕೆಲ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ಯುವಕ ನುಗ್ಗಿ ದಾಂಧಲೆ ನಡೆಸುತ್ತಿದ್ದ ಬೆಚ್ಚಿಬಿದ್ದ ಕೆಲವರು ದಿಕ್ಕಾಪಾಲಾಗಿ ಓಡಿದರೂ ಕೆಲವೇ ಕ್ಷಣಗಳಲ್ಲಿ ಮಂದಿರದ ಒಳಗಿದ್ದ ಜನರು ಆತನನ್ನು ಸುತ್ತುವರಿದಿದ್ದರು. ಬಳಿಕ ಆತನನ್ನು ಶಿರೋಮಣಿ ಗುರುದ್ವಾರ ಪ್ರಬಂಧಕ್ ಕಮಿಟಿ (ಎಸ್​ಜಿಪಿಸಿ) ಅವರು ವಶಕ್ಕೆ ಪಡೆದು, ಎಸ್​ಜಿಪಿಸಿ ಹೆಡ್​ಕ್ವಾರ್ಟರ್ಸ್​ಗೆ ಕರೆದೊಯ್ದಿದ್ದರು. ಬಳಿಕ ಆತನನ್ನು ಸಾಯುವಂತೆ ಹೊಡೆಯಲಾಗಿದೆ ಎನ್ನಲಾಗಿದ್ದು, ನಂತರ ಆತನ ಶವವನ್ನು ಎಸ್​ಜಿಪಿಸಿ ಗೇಟ್ ಬಳಿ ಇಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net