ಬಾಯ್​ಫ್ರೆಂಡ್​ ನಂಬಿ ರೆಸ್ಟೋರೆಂಟ್​ಗೆ ಹೋದ ಪ್ರೇಯಸಿಯ ಪಾಡು ಏನಾಯಿತು ನೋಡಿ! ವಿಡಿಯೋ ವೈರಲ್​

boyfriend
Published on

ನವದೆಹಲಿ: ಯಾವುದೇ ಪರಿಸ್ಥಿತಿ ಎದುರಾಗಲಿ ನಾನು ನಿನ್ನ ಕೈ ಬಿಡುವುದಿಲ್ಲ... ಇದು ಸಾಮಾನ್ಯವಾಗಿ ಎಲ್ಲ ಪ್ರೇಮಿಗಳು ತಾವು ಪ್ರೀತಿಸುವವರಿಗೆ ಹೇಳುವ ಮಾತು. ಆದರೆ, ಇದಕ್ಕೆ ವಿರುದ್ಧವಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಬಿಟ್ಟು ಓಡಿ ಹೋದ ವಿಡಿಯೋ ವೈರಲ್​ ಆಗಿದೆ. ಲ್ಯಾನ್ಸ್​ ಹೆಸರಿನ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಶೇರ್​ ಮಾಡಲಾಗಿದ್ದು, ಈವರೆಗೆ 10 ಮಿಲಿಯನ್​ಗೂ ಅಧಿಕ ವೀಕ್ಷಣೆ ಕಂಡಿದೆ. ಅಲ್ಲದೆ, 2 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ಲೈಕ್​​ ಮಾಡಿದ್ದು, 28 ಸಾವಿರಕ್ಕೂ ಅಧಿಕ ಮಂದಿ ರೀಟ್ವೀಟ್​ ಮಾಡಿದ್ದಾರೆ. 3 ಸಾವಿರಕ್ಕೂ ಅಧಿಕ ಮಂದಿ ವಿಡಿಯೋ ಪ್ರತಿಕ್ರಿಯೆ ನೀಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ರೆಸ್ಟೋರೆಂಟ್​ ಒಂದರಲ್ಲಿ ಮಹಿಳೆಯೊಬ್ಬಳು ತನ್ನ ಬಾಯ್​ಫ್ರೆಂಡ್​ ಜೊತೆ ಕುಳಿತಿರುತ್ತಾಳೆ. ಇದೇ ಸಮಯದಲ್ಲಿ ಟೋಪಿ ಧರಿಸಿ, ಮುಖಕ್ಕೆ ಮಾಸ್ಕ್​ ಹಾಕಿಕೊಂಡು ರೆಸ್ಟೋರೆಂಟ್​ ಪ್ರವೇಶಿಸುವ ವ್ಯಕ್ತಿಯೊಬ್ಬ ತನ್ನ ಬ್ಯಾಗ್​ನಿಂದ ಗನ್​ ತೆಗೆದು ಇತರರನ್ನು ಹೆದರಿಸುತ್ತಾನೆ. ಈ ವೇಳೆ ತನ್ನ ಪ್ರೇಯಸಿಯನ್ನು ಕಾಪಾಡುವ ಬದಲು ಬಾಯ್​ಫ್ರೆಂಡ್​ ಅಲ್ಲಿಂದ ಎಸ್ಕೇಪ್​ ಆಗಿದ್ದಾನೆ. ಇದನ್ನು ನೋಡಿದ ಪ್ರೇಯಸಿಗೆ ಒಂದು ಕ್ಷಣ ಶಾಕ್​ ಆಗಿದ್ದಾಳೆ. ಸುಲಿಗೆಕೋರ ರೆಸ್ಟೋರೆಂಟ್​ನಲ್ಲಿ ಇತರರ ಬಳಿ ಸುಲಿಗೆ ಮಾಡಿ ಮೊಟರ್​ ಬೈಕ್​ನಿಂದ ಪರಾರಿಯಾಗುತ್ತಾನೆ. ಅಲ್ಲಿಯವರೆಗೂ ಮಹಿಳೆ ತನ್ನ ಕುರ್ಚಿಯಲ್ಲಿ ಕುಳಿತ್ತಿರುತ್ತಾಳೆ. ಆದರೆ, ಬಾಯ್​ಫ್ರೆಂಡ್​ ಮಾತ್ರ ಎಸ್ಕೇಪ್​ ಆಗಿರುತ್ತಾನೆ. ಸುಲಿಗೆಕೋರ ಹೋದ ಬಳಿಕ ಮಹಿಳೆ ತನ್ನ ಬಾಯ್​ಫ್ರೆಂಡ್​ ಹುಡುಕಿಕೊಂಡು ಹೋಗುತ್ತಾಳೆ.

ವಿಡಿಯೋ ಶೇರ್​ ಮಾಡಿಕೊಂಡಿರುವ ಟ್ವಿಟರ್​ ಬಳಕೆದಾರ ಎಲ್ಲದಕ್ಕಿಂತ ಸ್ವಯಂ ಸಂರಕ್ಷಣೆ ಮೊದಲು ಎಂದು ಅಡಿಬರಹ ನೀಡಿದ್ದಾರೆ. ಇದೀಗ ವಿಡಿಯೋ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್​ ಮಾಡುತ್ತಿದ್ದಾರೆ. ವಿಡಿಯೋ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net