ಶೂನಿಂದ ಬಡಿದಾಡಿಕೊಂಡ ವಧು-ವರ! ಮದುವೆ ಮಂಟಪದ ಹೈವೋಲ್ಟೇಜ್​ ಡ್ರಾಮಾ ವಿಡಿಯೋ ವೈರಲ್​

Wedding 1
Published on

ನವದೆಹಲಿ: ಸಾಂಪ್ರದಾಯಿಕ ಆಚರಣೆಗಳು, ಸ್ನೇಹಿತರು ಮತ್ತು ಸಂಬಂಧಿಕರ ಕೂಟ, ವಿನೋದ, ಸಂಗೀತ, ನೃತ್ಯ, ದೀಪಗಳು, ವರ್ಣರಂಜಿತ ಅಲಂಕಾರಗಳು, ಮೆರವಣಿಗೆ ಹಾಗೂ ಉಲ್ಲಾಸ, ಭಾರತೀಯ ವಿವಾಹದ ಅವಿಭಾಜ್ಯ ಅಂಗಗಳಾಗಿವೆ. ಮದುವೆ ಮನೆ ಅಂದರೆ ಸಾಕು ವಧು-ವರನಿಂದಿಡಿದು ಎಲ್ಲರ ಉತ್ಸಾಹ ಮುಗಿಲು ಮುಟ್ಟುತ್ತದೆ. ಆದರೆ, ಕೆಲವೊಮ್ಮೆ ಒಂದು ಸಣ್ಣ ಘಟನೆ ಇಡೀ ವಾತಾವರಣವನ್ನು ಕಹಿಯ ವಾತಾವರಣವಾಗಿ ಬದಲಿಸಿಬಿಡುತ್ತದೆ.

ಮದುವೆ ಮನೆ ಅಂದ ಮೇಲೆ ಮನಸ್ತಾಪಗಳು ಮತ್ತು ಸಣ್ಣ ಜಗಳಗಳು ಸಹ ಸಾಮಾನ್ಯ. ಇಂತಹ ಘಟನೆ ನಡೆದಾಗ ಸಂಬಂಧಿಕರು ಅಥವಾ ಅತಿಥಿಗಳು ಸಮಸ್ಯೆಗಳನ್ನು ಪರಿಹರಿಸಲು ಮತ್ತು ಎಲ್ಲವನ್ನೂ ಸರಿಪಡಿಸಲು ಅತ್ಯುತ್ತಮ ಪ್ರಯತ್ನ ಮಾಡುತ್ತಾರೆ. ಆದರೆ, ವಿವಾಹದ ಕೇಂದ್ರ ಬಿಂದು ಆಗಿರುವ ವಧು-ವರರೇ ತಮ್ಮ ಮದುವೆ ವೇದಿಕೆಯಲ್ಲಿ ಜಗಳವಾಡಿದರೆ ಅದಕ್ಕಿಂತ ದೊಡ್ಡ ಸಮಸ್ಯೆ ಇನ್ನೊಂದಿಲ್ಲ.

ವಧು-ವರರ ಜಗಳದ ಸಾಕಷ್ಟು ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಆದರೆ, ಇಂದು ನಾವು ತೋರಿಸುತ್ತಿರುವ ವಿಡಿಯೋ ಇತ್ತೀಚಿಗಷ್ಟೇ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋ ಆಗಿದೆ. ಮದುವೆಯ ವೇದಿಕೆಯಲ್ಲಿ ಭಾರೀ ಹೈಡ್ರಾಮವೇ ನಡೆದಿರುವ ವಿಡಿಯೋ ಇದಾಗಿದ್ದು, ಎಲ್ಲರ ಹುಬ್ಬೇರಿಸಿದೆ.

ವಿಡಿಯೋದಲ್ಲಿ ಏನಿದೆ?

ವಧು-ವರ ಒಬ್ಬರಿಗೊಬ್ಬರು ಎದುರು-ಬದರು ನಿಂತಿರುವುದನ್ನು ಮತ್ತು ಮಾತಿನ ಚಕಮಕಿಯಲ್ಲಿ ತೊಡಗಿರುವುದನ್ನು ನೀವು ಕಾಣಬಹುದು. ಆದಾಗ್ಯೂ ವರ ತೀವ್ರ ಅಸಮಾಧಾನಗೊಂಡಂತೆ ಕಾಣುತ್ತಾನೆ ಮತ್ತು ತಕ್ಷಣ ವಧುವಿನ ಮೇಲೆ ದಾಳಿ ಮಾಡುತ್ತಾನೆ. ಅಲ್ಲದೆ, ಶೂನಿಂದ ಬಾರಿಸುತ್ತಾನೆ. ಅಷ್ಟರಲ್ಲಿ ವಧು-ವರರ ಬಳಿಯಿದ್ದ ಸಂಬಂಧಿಕರು ತಡೆಯಲು ಯತ್ನಿಸುತ್ತಾರೆ. ಆದರೆ, ವಧು ಕೂಡ ತನ್ನ ಶೂನಿಂದ ವರನಿಗೆ ಹೊಡೆಯಲು ಪ್ರಯತ್ನಿಸುತ್ತಾಳೆ. ಆದರೆ, ಆಕೆ ವಿಫಲಗೊಳ್ಳುತ್ತಾಳೆ. ಕೆಲವು ಕ್ಷಣಗಳ ನಂತರ, ವರನು ಮತ್ತೆ ದಾಳಿ ಮಾಡಿ ವಧುವಿನ ಕೂದಲು ಹಿಡಿದು ಎಳೆಯುತ್ತಾನೆ. ಕಾದಾಡುತ್ತಲೇ ಇಬ್ಬರೂ ಮದುವೆಯ ಸಿಂಹಾಸನದ ಮೇಲೆ ಬೀಳುತ್ತಾರೆ. ಈ ವೇಳೆ ವಧು ವರನನ್ನು ಹೊಡೆಯುವುದನ್ನು ಮುಂದುವರೆಸುತ್ತಾಳೆ.

ವಿಡಿಯೋವನ್ನು kashyap_memer ಎಂಬ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಶೇರ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೋ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net