ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ!? ಬೆಳಗಾವಿಯಲ್ಲಿ ನಾಗ್ಪುರ ಪೊಲೀಸರ ಕಾರ್ಯಾಚರಣೆ

Nitin Gadkari
Published on

ಬೆಳಗಾವಿ: ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗ್ಪುರ ಪೋಲೀಸರು ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಕೈದಿಗಳ ವಿಚಾರಣೆ ನಡೆಸಿದ್ದಾರೆ.

ಬೆಳಗಾವಿಯ ಹಿಂಡಲಗಾ ಸೆಂಟ್ರಲ್ ಜೈಲಿನ ಕೈದಿಯಿಂದಲೇ ಶನಿವಾರ ಬೆಳಗ್ಗೆ ನಿತಿನ್​ ಗಡ್ಕರಿಗೆ ಕರೆ ಮಾಡಿ, ಬಾಂಬ್ ಇಟ್ಟು ಹತ್ಯಗೈಯುವ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಮಾಹಿತಿಯಿಂದ ಶನಿವಾರ ರಾತ್ರಿ ನಾಗ್ಪುರದ ಪೊಲೀಸ್ ಅಧಿಕಾರಿಗಳ ತಂಡ ಕಾರ್ಯಾಚರಣೆ ಕೈಗೊಂಡಿದೆ.

ಜೀವ ಬೆದರಿಕೆ ಸಂಬಂಧ ಮಹಾರಾಷ್ಟ್ರದ ನಾಗುರ ಪೊಲೀಸರ ಗಮನಕ್ಕೆ ನಿತಿನ್​ ಗಡ್ಕರಿ ತಂದಿದ್ದು, ಆರೋಪಿ ಶೋಧಕ್ಕೆ ಹಿಂಡಲಗಾ ಜೈಲಿಗೆ ಬಂದಿರುವ ನಾಗುರ ಪೊಲೀಸರು ಶನಿವಾರ ರಾತ್ರಿಯಿಂದ ವಿಚಾರಣೆ ನಡೆಸಿದ್ದಾರೆ. ನಾಗ್ಪುರ ಪೊಲೀಸರಿಗೆ ಕೊಲ್ಲಾಪುರ, ಸಾಂಗ್ಲಿ ಬೆಳಗಾವಿ ನಗರ ಪೊಲೀಸರು ಸಾಥ್ ನೀಡಿದ್ದಾರೆ. ಶನಿವಾರ ರಾತ್ರಿ ಮೂರು ಗಂಟೆಗಳ ಕಾಲ ಜೈಲಿನಲ್ಲಿ ಶೋಧ ಕಾರ್ಯ ನಡೆಸಿರುವ ಪೊಲೀಸರು ಇಂದು ಕೂಡ ವಿಚಾರಣೆ ಮುಂದುವರೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net