ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಪೂರಕ

nrp sports
ಎನ್.ಆರ್.ಪುರದಲ್ಲಿ ರಾಜ್ಯ ಮಟ್ಟದ ಹೆಬ್ಬಾರ್ ಲೀಗ್ ಪಂದ್ಯಾವಳಿಯನ್ನು ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ಉದ್ಘಾಟಿಸಿದರು. ವೈ.ಎಂ.ಮಧು, ಸುಬ್ರಹ್ಮಣ್ಯ, ಕೆ.ಆರ್.ಶಶಿಕುಮಾರ್, ಚರಣ ಹೆಬ್ಬಾರ, ನಿಶಾಂತ ಹೆಬ್ಬಾರ ಇತರರಿದ್ದರು.
Published on

ಎನ್.ಆರ್.ಪುರ: ಯುವ ಜನರಿಗೆ ವ್ಯಕ್ತಿತ್ವ ವಿಕಸನವಾಗಲು ಕ್ರೀಡೆ, ಸಾಹಿತ್ಯ, ಸಂಗೀತ ಎಲ್ಲವೂ ಅಗತ್ಯ. ಕ್ರೀಡೆಯಿಂದ ದೇಹಕ್ಕೆ ಮಾತ್ರವಲ್ಲ ಮಾನಸಿಕವಾಗಿಯೂ ಆರೋಗ್ಯವಾಗಿರಬಹುದು ಎಂದು ಶಿವಮೊಗ್ಗ ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ಹೇಳಿದರು.
ಕುದುರೆಗುಂಡಿ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಹಾಗೂ ಯುವ ಹೆಬ್ಬಾರ ತಾಲೂಕು ಘಟಕದ ಆಶ್ರಯದಲ್ಲಿ ಹೆಬ್ಬಾರ ಸಮಾಜದವರಿಗಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಹೆಬ್ಬಾರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಒತ್ತಡದ ನಡುವೆಯೂ 3 ವರ್ಷದಿಂದ ಹೆಬ್ಬಾರ ಬ್ರಾಹ್ಮಣ ಸಭಾ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿದ್ದು, ಇದೊಂದು ಕ್ರೀಡಾ ಹಬ್ಬವಾಗಿದೆ. ಪ್ರಸ್ತುತ ನಗರ ಪ್ರದೇಶದಲ್ಲಿ ಮಕ್ಕಳು 4 ಗೋಡೆಗಳ ಮಧ್ಯೆ ಕಾಲ ಕಳೆಯುವಂತಾಗಿದೆ. ಆಧುನಿಕ ಯುಗದಲ್ಲಿ ಯುವಜನರು ಕ್ರೀಡೆ ಒಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ಹೆಬ್ಬಾರ ಸಮಾಜದವರು ಬಹಳ ವರ್ಷಗಳ ಹಿಂದೆಯೇ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ತಲುಪಿದ್ದರು. ನಮ್ಮ ಪೂರ್ವಜರ ಕ್ರೀಡಾ ಸಾಧನೆ ದಾಖಲಿಸಬೇಕು ಎಂದು ಸಲಹೆ ನೀಡಿದರು.
ಶಿವಮೊಗ್ಗ ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ಕೆ.ಆರ್.ಶಿವಕುಮಾರ್ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಅದನ್ನು ಕ್ರೀಡಾ ಭಾವದಿಂದ ಸ್ವೀಕರಿಸಬೇಕು ಎಂದರು. ಹೆಬ್ಬಾರ ಬ್ರಾಹ್ಮಣ ಸಭಾದ ತಾಲೂಕು ಘಟಕದ ಅಧ್ಯಕ್ಷ ಸೇತುವೆಮನೆ ಸುಬ್ರಹ್ಮಣ್ಯ, ಶಿವಮೊಗ್ಗ ಶಾರದಾ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ವೈ.ಎಂ.ಮಧು, ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚರಣ ಹೆಬ್ಬಾರ, ಯುವ ಬಳಗದ ತಾಲೂಕು ಘಟಕದ ಅಧ್ಯಕ್ಷ ನಿಶಾಂತ ಹೆಬ್ಬಾರ್, ಎ.ಎಸ್.ವೆಂಕಟರಮಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net