ಇಂಡಿಯಾ ಗೆಲ್ಲುತ್ತದೆ ಬಿಜೆಪಿ ಸೋಲುತ್ತದೆ: ಮಮತಾ ಬ್ಯಾನರ್ಜಿ

Mamata Banerjee
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಸೆಡ್ಡುಹೊಡೆಯಲು ಕಾಂಗ್ರೆಸ್ ನೇತೃತ್ವದಲ್ಲಿ ನಡೆದಿರುವ ವಿಪಕ್ಷಗಳ‌ ಸಭೆ ಹಲವು ನಿರ್ಣಯ ಕೈಗೊಂಡಿವೆ. ಈ ಸಂಗತಿ ತಿಳಿಸಲು ನಲವತ್ತು ನಾಯಕರು ಒಟ್ಟಾಗಿ ಮಾಧ್ಯಮದ‌ ಮುಂದೆ ಕಾಣಿಸಿಕೊಂಡು ದೇಶದ‌ ಮುಂದೆ ತಮ್ಮ ಒಗ್ಗಟ್ಟಿನ ಪ್ರದರ್ಶನ‌ ಮಾಡಿದರು.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ ವೇದಿಕೆಯಲ್ಲಿ ಎಕ್ಸ್ ಸಿಎಂಗಳನ್ನು ಮಾಜಿ ಎಂದು ಕರೆಯಲ್ಲ. ಮುಂದೆ ಅವರೆಲ್ಲ ಅಧಿಕಾರಕ್ಕೆ ಬರಲಿದ್ದಾರೆ. ಇಂದಿನ ಸಭೆ ಫಲಪ್ರದವಾಯಿತು. ನಮ್ಮ ಸಂಘಟನೆ 26 ಪಕ್ಷಗಳ ಸಭೆ. ಮುಂಚೆ ಯುಪಿಎ ಎಂದು ಕರೆಯಲಾಗುತ್ತಿತ್ತು.

INDIA ಗೆಲ್ಲುತ್ತದೆ

ದೇಶದಲ್ಲಿ ದಲಿತ, ಹಿಂದು‌‌, ಮುಸ್ಲಿಂ, ದಲಿತರು ಎಲ್ಲ ಕಡೆ ಅಪಾಯದಲ್ಲಿದ್ದಾರೆ. ನಮ್ಮ ಅಲೆಯನ್ಸ್ ಹೆಸರು ಇಂಡಿಯಾ, ಬಿಜೆಪಿ "ಇಂಡಿಯಾ" ಗೆ ಸವಾಲು ಹಾಕುತ್ತಿದ್ದಾರೆ. ನಮ್ಮ ಜತೆ ರೈತರು, ಯುವಕರು, ಶ್ರಮಿಕರು ಇದ್ದಾರೆ. ನಮ್ಮ ಹೋರಾಟ ಇಂಡಿಯಾ ಅಡಿ ನಡೆಯಲಿದೆ.ಸಾಧ್ಯವಾದರೆ ನಮ್ಮನ್ನು "ಹಿಡಿಯಲಿ" ಎಂದು ಸವಾಲೆಸೆದಿದ್ದಾರೆ.

ಲೋಕತಂತ್ರವನ್ನು ಬಿಜೆಪಿ ಖರೀದಿಸುತ್ತಿದೆ. ಯಾವುದೇ ಸ್ವತಂತ್ರ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪ್ರತಿಪಕ್ಷವನ್ನು ಹತ್ತಿಕ್ಕುತ್ತಿದೆ. ದೇಶವನ್ನು ರಕ್ಷಿಸಬೇಕಿದೆ. "ಇಂಡಿಯಾ ಜೀತೇಗ", ಬಿಜೆಪಿ ಹರೇಗ. ದೇಶ ಗೆಲ್ಲಲಿದ, ಬಿಜೆಪಿ ಸೋಲಲಿದೆ. ಈ‌ ಪ್ರಯತ್ನಕ್ಕೆ ಬೆಂಗಳೂರಿನಲ್ಲಿ ತಳಪಾಯ ಬಿದ್ದಿದೆ. ಮುಂಬೈನಲ್ಲಿ ಮುಂದಿನ ಸಭೆ ನಡೆಯಲಿದೆ. ಇನ್ನಷ್ಟು ತೀರ್ಮಾನವಾಗಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net