More

    ಸೂತಕದ ಸಂಪ್ರದಾಯ; ಬಾಣಂತಿಯನ್ನು ಊರಿನಿಂದ ಹೊರಗಿಟ್ಟ ಸಮುದಾಯ

    ತುಮಕೂರು: ನಮ್ಮ ಸಮಾಜವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರು ಸಹ ಕೆಲವು ಭಾಗಗಳಲ್ಲಿ ಮೌಢ್ಯ ಆಚರಣೆ ಇನ್ನು ಜೀವಂತವಾಗಿರುವುದು ಬೇಸರದ ಸಂಗತಿ. ಇದನ್ನು ಹೋಗಲಾಡಿಸಲು ಸರ್ಕಾರ ಅನೇಕ ರೀತಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಜನರ ಮೇಲೆ ಯಾವುದೇ ಪರಿಣಾಮ ಬೀರದೆ ಇರುವುದು ದುರದೃಷ್ಟಕರ.

    ಇದೀಗ ಘಟನೆಯೊಂದರಲ್ಲಿ ಐದು ದಿನಗಳ ಬಾಣಂತಿಯನ್ನು ಕುಟುಂಬಸ್ಥರು ಊರಿನಿಂದ ಹೊರಗಿಟ್ಟಿರುವ ಘಟನೆ ತುಮಕೂರು ಸಮೀಪದ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಐದು ದಿನಗಳ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ವಸಂತ ಎಂಬ ಬಾಣಂತಿಯನ್ನು ಊರಿನಿಂದ ಹೊರಗಿಡಲಾಗಿದೆ.

    TUmkur

    ಇದನ್ನೂ ಓದಿ: ಹೊರಬಿತ್ತು ಗೃಹಲಕ್ಷ್ಮಿ ಯೋಜನೆ ಉದ್ಘಾಟನೆಯ ಆಹ್ವಾನ ಪತ್ರಿಕೆ; ಯಾವ್ಯಾವ ಗಣ್ಯರು ಬರ್ತಾರೆ? ಇಲ್ಲಿದೆ ವಿವರ

    ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವಸಂತ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಎರಡು ಮಕ್ಕಳ ಪೈಕಿ ಗಂಡು ಮಗು ಮೃತಪಟ್ಟಿದ್ದು, ನವಜಾತ ಹೆಣ್ಣು ಶಿಶುವಿನೊಂದಿಗೆ ಊರಿಗೆ ವಾಪಸ್​ ಬಂದಿದ್ದಾರೆ. ಕಾಡು ಗೊಲ್ಲರಿಂದ ಸೂತಕದ ಸಂಪ್ರದಾಯ ಆಚರಣೆ ಮಾಡಲಾಗುತ್ತಿದ್ದು, ಊರ ಹೊರಗೆ ಸಣ್ಣ ಗುಡಿಸಲು ಮಾಡಿ ಅದರಲ್ಲಿ ಬಾಣಂತಿ ಮತ್ತು ಮಗುವನ್ನು ಇರಿಸಲಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಸಮುದಾಯದ ಮುಖಂಡರೊಬ್ಬರು ನಮ್ಮ ಜುಂಜಪ್ಪ ಹಾಗೂ ಯತ್ತಪ್ಪ ದೇವರಿಗೆ ಸೂತಕ ಆಗಲ್ಲ ಹಾಗಾಗಿ ನಾವು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಸೂತಕದ ಬಾಣಂತಿ ಊರಿಗೆ ಬಂದರೆ ಕೇಡು ಹಿಂದಿನಿಂದಲ್ಲೂ ಈ ಆಚರಣೆ ಮಾಡಿಕೊಂಡು ಬಂದಿರುವುದಾಗಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts