More

    ದೆಹಲಿಯಲ್ಲಿ ಇಂದು ಎನ್​ಡಿಎ ಮೈತ್ರಿಕೂಟದ ಸಭೆ; 38 ಪಕ್ಷಗಳು ಭಾಗಿ

    ನವದೆಹಲಿ: 2024ರ ಲೋಕಸಭೆ ಚುನಾವಣೆಯನ್ನು ಗೆಲ್ಲುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಬಿಜೆಪಿ ನಾಯಕರು ಮ್ಯಾರಥಾನ್​ ಮೀಟಿಂಗ್​ ನಡೆಸುತ್ತಿದ್ದು, ಜುಲೈ 18ರಂದು ತನ್ನ ಮಿತ್ರಪಕ್ಷಗಳ ಸಭೆ ಕರೆದಿದೆ.

    ಸಭೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ(NDA) 38 ಪಕ್ಷಗಳು ಭಾಗಿಯಾಗಲಿದ್ದು, ವಿಪಕ್ಷಗಳ ಮಹಾಮೈತ್ರಿಕೂಟಕ್ಕೆ ಟಕ್ಕರ್​ ಕೊಡುವ ನಿಟ್ಟಿನಲ್ಲಿ ಬಿಜೆಪಿ ಜುಲೈ 18ರಂದು ಸಭೆ ಕರೆದಿದೆ.

    ಈ ಕುರಿತು ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಂಗಳವಾರ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಒಟ್ಟು 38 ಪಕ್ಷಗಳು ಭಾಗಿಯಾಗಲಿವೆ ಎಂದು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಅಸ್ತಿತ್ವದಲ್ಲಿರುವ ಹಾಗೂ ಹೊಸ ಪಕ್ಷಗಳಿಗೂ ಆಹ್ವಾನ ನೀಡಲಾಗಿದ್ದು, ಹಿಂದೆ ಬಿಜೆಪಿ ನೇತೃತ್ವದ ಮೃತ್ರಿಕೂಟದಿಂದ ಹೊರಹೋಗಿದ್ದವರನ್ನು ಸಹ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: VIRAL VIDEO| ಈ ನಂದಿ ವಿಗ್ರಹ ನಿಜಕ್ಕೂ ನೀರು ಕುಡಿಯುತ್ತಿದೆಯಾ?

    ಸಭೆಯಲ್ಲಿ ಭಾಗವಹಿಸುವ ಪಕ್ಷಗಳ ಹೆಸರಿ ಇಂತಿವೆ:

    1. ಭಾರತೀಯ ಜನತಾ ಪಕ್ಷ (ಬಿಜೆಪಿ)
    
    2. ಶಿವಸೇನೆ (ಏಕನಾಥ್ ಶಿಂಧೆ ಬಣ)
    
    3. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಅಜಿತ್ ಪವಾರ್ ಬಣ)
    
    4. ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ (ಪಶುಪತಿ ಕುಮಾರ್ ಪರಸ್ ನೇತೃತ್ವದ ಬಣ)
    
    5. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ
    
    6. ಅಪ್ನಾ ದಳ (ಸೂರಿಲಾಲ್)
    
    7. ನ್ಯಾಷನಲ್ ಪೀಪಲ್ಸ್ ಪಾರ್ಟಿ
    
    8. ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ
    
    9. ಎಲ್ಲಾ ಜಾರ್ಖಂಡ್ ವಿದ್ಯಾರ್ಥಿಗಳ ಒಕ್ಕೂಟ
    
    10. ಸಿಕ್ಕಿಂ ಕ್ರಾಂತಿಕಾನ್ ಮೋರ್ಚಾ
    
    11. ಮಿಜೋ ನ್ಯಾಷನಲ್ ಫ್ರಂಟ್
    
    12. ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ
    
    13. ನಾಗಾ ಪೀಪಲ್ಸ್ ಫ್ರಂಟ್, ನಾಗಾಲ್ಯಾಂಡ್
    
    14. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಲೆ)
    
    15. ಅಸೋಮ್ ಗಣ ಪರಿಷತ್
    
    16. ಪಾರ್ಟಲಿ ಮಕ್ಕಳ್ ಕಚ್ಚಿ
    
    17. ತಮಿಳು ಮನಿಲಾ ಕಾಂಗ್ರೆಸ್
    
    18. ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್
    
    19. ಸುಬೆಲ್ ದೇವ್ ಭಾರತೀಯ ಸಮಾಜ ಪಕ್ಷ
    
    20. ಶಿರೋಮಣಿ ಅಕಾಲಿ ದಳ (ಸಂಯುಕ್ತ)
    
    21. ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ
    
    22. ಜನನಾಯಕ್ ಜನತಾ ಪಾರ್ಟಿ
    
    23. ಪ್ರಹಾರ್ ಜನಶಕ್ತಿ ಪಾರ್ಟಿ
    
    24. ರಾಷ್ಟ್ರೀಯ ಸಮಾಜ ಪಕ್ಷ
    
    25. ಜನ ಸುರಾಜ್ಯ ಶಕ್ತಿ ಪಕ್ಷ
    
    26. ಕುಕಿ ಪೀಪಲ್ಸ್ ಅಲೈಯನ್ಸ್
    
    27. ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (ಮೇಘಾಲಯ)
    
    28. ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ
    
    29. ನಿಶಾದ್ ಪಾರ್ಟಿ
    
    30. ಅಖಿಲ ಭಾರತ ಎನ್.ಆರ್. ಕಾಂಗ್ರೆಸ್
    
    31. HAM
    
    32. ಜನ ಸೇನಾ ಪಕ್ಷ
    
    33. ಹರಿಯಾಣ ಲೋಕಿತ್ ಪಕ್ಷ
    
    34. ಭಾರತ್ ಧರ್ಮ ಜನ ಸೇನೆ
    
    35. ಕೇರಳ ಕಾಮರಾಜ್ ಕಾಂಗ್ರೆಸ್
    
    36. ಪುತಿಯಾ ತಮಿಳಗಂ
    
    37. ಲೋಕಜನ ಶಕ್ತಿ ಪಕ್ಷ (ರಾಮ್ ವಿಲಾಸ್ ಪಾಸ್ವಾನ್)
    
    38. ಗೂರ್ಖಾ ನ್ಯಾಷನಲ್ ಲಿಬರೇಶನ್ ಫ್ರಂಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts