VIRAL VIDEO| ಈ ನಂದಿ ವಿಗ್ರಹ ನಿಜಕ್ಕೂ ನೀರು ಕುಡಿಯುತ್ತಿದೆಯಾ?

Nandi Statue
Published on

ಬೀದರ್​: ಪ್ರಪಂಚ ವಿಸ್ಮಯಗಳ ಆಗರ. ಇಲ್ಲಿ ಆಶ್ಚರ್ಯ, ವಿಸ್ಮಯ, ಪವಾಡದಂಥ ಚಕಿತಗಳು ನಡೆಯುತ್ತಲೇ ಇರುತ್ತವೆ. ಇಂಥ ವಿಸ್ಮಯಗಳೇ ಜನರಲ್ಲಿ ದೇವರ ಮೇಲಿನ ನಂಬಿಕೆ ಹೆಚ್ಚಿಸುವುದು. ಇದೀಗ ಕರ್ನಾಟಕದ ಬೀದರ್​ ಜಿಲ್ಲೆಯಲ್ಲೂ ಸಹ ಇದೇ ರೀತಿಯ ಪವಾಡ ಒಂದು ನಡೆದಿದೆ.

ಕಲ್ಲಿನ ನಂದಿ ಮೂರ್ತಿಯು ನೀರು ಕುಡಿಯುತ್ತಿರುವ ಪವಾಡವೊಂದು ಬೀದರ್​ನ ಧುಮಸಾಪುರದಲ್ಲಿರುವ ನಡೆದಿದ್ದು, ಪವಾಡವನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೆ ಹರಿದು ಬರುತ್ತಿದೆ. ಇದು ವಿಸ್ಮಯವೋ, ಪವಾಡವೋ ಗೊತ್ತಿಲ್ಲ. ಆದರೆ ಮೂರ್ತಿ ನೀರು ಕುಡಿದಿದ್ದು ಪಕ್ಕಾ ಎನ್ನುತ್ತಿದ್ದಾರೆ ಗ್ರಾಮಸ್ಥರು.

ದೇವಸ್ಥಾನದ ಪೂಜಾರಿಯಾದ ಶಶಿಕಲಾ ಮಠಪತಿ ಮಾತನಾಡಿ ಎಂದಿನಂತೆ ಅಭಿಷೇಕ ಮುಗಿಸಿ ತೀರ್ಥವನ್ನು ನಂದಿ ಮೂರ್ತಿ ಎದುರು ಇಟ್ಟಿದ್ದಾರೆ. ನೋಡುನೋಡುತ್ತಿದ್ದಂತೆ ಮೂರ್ತಿ ತೀರ್ಥವನ್ನು ಕುಡಿದಿದೆ. ಒಂದು ಹನಿಯೂ ಚೆಲ್ಲದಂತೆ ವಿಗ್ರಹ ನೀರು ಕುಡಿದಿದೆ ಎಂದು ಪವಾಡದ ಕುರಿತು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net