8 ತಿಂಗಳ ಗರ್ಭಿಣಿಯಾಗಿದ್ದ ನಟಿ ಹೃದಯಾಘಾತದಿಂದ ನಿಧನ

malayalam serial actress dr priya passes away
Published on

ಕೇರಳ: ಮಲಯಾಳಂ ಕಿರುತೆರೆ ಧಾರಾವಾಹಿ ನಟಿ ಡಾ.ಪ್ರಿಯಾ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

ಡಾ. ಪ್ರಿಯಾ ಟಿವಿ ಸೀರಿಯಲ್‌ಗಳಲ್ಲಿ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ತಮ್ಮ ಮದುವೆಯ ನಂತರ ನಟನೆಯಿಂದ ವಿರಾಮ ತೆಗೆದುಕೊಂಡಿದ್ದರು. ಪ್ರಿಯಾ ಕೂಡ ವೃತ್ತಿಯಲ್ಲಿ ವೈದ್ಯೆಯಾಗಿದ್ದರು. ಆದರೆ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಟ-ಕಮ್-ನಿರೂಪಕ ಕಿಶೋರ್ ಫೇಸ್‌ಬುಕ್ ಪೋಸ್ಟ್ ಪ್ರಕಾರ, 'ಮಲಯಾಳಂ ಟಿವಿ ಉದ್ಯಮದಲ್ಲಿ ಮತ್ತೊಂದು ಅನಿರೀಕ್ಷಿತ ಸಾವಿನ ಸುದ್ದಿ ಬಂದಿದೆ. ಡಾಕ್ಟರ್ ಪ್ರಿಯಾ ಹೃದಯ ಸ್ತಂಭನದಿಂದ ನಿಧನರಾದರು. ಸಾಯುವ ವೇಳೆ ಆಕೆ ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ನವಜಾತ ಶಿಶು ಸದ್ಯ ಐಸಿಯುನಲ್ಲಿದೆ. ಆಕೆಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ, ಸಾಮಾನ್ಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದರು, ಅಲ್ಲಿಯೇ ಆಕೆಗೆ ಹೃದಯ ಸ್ತಂಭನವಾಯಿತು. ಕಳೆದ ಆರು ತಿಂಗಳಿಂದ ಆಕೆಯನ್ನು ನೋಡಿಕೊಳ್ಳುತ್ತಿದ್ದ ಗಂಡನ ನೋವು ಹೇಳತೀರದು. ನಿನ್ನೆ ರಾತ್ರಿ ಆಸ್ಪತ್ರೆಗೆ ಹೋದಾಗ ಅವರಿಗೆ ಹೇಗೆ ಸಾಂತ್ವನ ಹೇಳಬೇಕೆಂದು ತಿಳಿಯಲಿಲ್ಲ.

ನಟಿ ಡಾ.ಪ್ರಿಯಾ ಹೃದಯ ಸ್ತಂಭನದಿಂದ ಸಾವು ಕಂಡಿದ್ದಾರೆ. ಮಂಗಳವಾರ (ಅಕ್ಟೋಬರ್ 31) ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಾಗ 35 ವರ್ಷದ ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ನಟ ಕಿಶೋರ್ ಸತ್ಯ ಅಭಿಮಾನಿಗಳೊಂದಿಗೆ ಸುದ್ದಿ ಹಂಚಿಕೊಂಡಿದ್ದಾರೆ.

 dr priya

ಇಂಥ ಒಳ್ಳೆಯ ಜನರಿಗೆ ದೇವರು ಏಕೆ ಕ್ರೂರನಾಗಿದ್ದಾನೆ? ರೆಂಜೂಷಾ ಅವರ ನಿಧನವನ್ನು ಮರೆಯುವ ಮುನ್ನವೇ ಮತ್ತೊಂದು ನಿಧನ. 35ರ ಹರೆಯದ ವ್ಯಕ್ತಿಯೊಬ್ಬರು ಇಹಲೋಕ ತ್ಯಜಿಸುತ್ತಿರುವಾಗ ಸಂತಾಪ ಸೂಚಿಸುವ ಮಾತು ಕೂಡ ಸರಿಹೋಗುವುದಿಲ್ಲ, ಇದನ್ನು ಪ್ರಿಯಾಳ ತಂದೆ-ತಾಯಿ ಮತ್ತು ಆಕೆಯ ಪತಿ ಹೇಗೆ ಎದುರಿಸುತ್ತಾರೆಯೋ ಗೊತ್ತಿಲ್ಲ. ಅವರಿಗೆ ಧೈರ್ಯ ಬರಲಿ’ ಎಂದು ಭಾವುಕರಾಗಿ ಕಿಶೋರ್‌ ಸತ್ಯ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net