ತಂದೆಯ ಸಾವಿನ ಬಳಿಕ ಮಲೈಕಾ ಅರೋರಾ ನ್ಯೂಲುಕ್​ ರಿವೀಲ್​​; ನೆಟ್ಟಿಗರ ರಿಯಾಕ್ಷನ್​ ಹೀಗಿದೆ..| Malaika Arora

blur-still-malaika
Published on

ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ(Malaika Arora) ಬಹಳ ಸಮಯದಿಂದ ಸಾಮಾಜಿಕ ಜಾಲತಾಣದಿಂದ ದೂರವಿದ್ದರು. ವಾಸ್ತವವಾಗ ಅವರ ತಂದೆ ಅನಿಲ್​ ಅರೋರಾ ನಿಧನರಾದ ನಂತರ ಮಲೈಕಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಇತ್ತೀಚೆಗಷ್ಟೇ ಮಲೈಕಾ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದಾರೆ. ಈಗ ಅವರ ನ್ಯೂಲುಕ್​ನ ವಿಡಿಯೋ ಜಾಲತಾಣಲದ್ಲಿ ವೈರಲ್​ ಆಗುತ್ತಿದೆ.

ಅಂದ್ಹಾಗೆ ಮಲೈಕಾ ಈ ಪೋಸ್ಟ್​​ ಅನ್ನು ಸ್ವತಃ ಹಂಚಿಕೊಂಡಿಲ್ಲ. ಅವರ ಹೇರ್​ ಸ್ಟೈಲಿಸ್ಟ್​​​ ವಿಡಿಯೋವನ್ನು ನಟಿಗೆ ಟ್ಯಾಗ್​ ಮಾಡಿದ್ದಾರೆ. ವೀಡಿಯೊದಲ್ಲಿ ಮಲೈಕಾ ಅವರ ಹೊಸ ಹೇರ್​ ಸ್ಟೈಲ್​ನೊಂದಿಗೆ ಕೂಲ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಕನ್ನಡಿ ಮುಂದೆ ಕುಳಿತಿದ್ದಾರೆ. ಅವರ ಹೇರ್​ ಸ್ಟೈಲಿಸ್ಟ್​​​​​​​​ ತೆಗೆದಿಯುತ್ತಿರುವ ವಿಡಿಯೋಗೆ ನಟಿ ಕೂಲ್​ ಎಕ್ಸ್​​ಪ್ರೆಶನ್​​ ನೀಡುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು.

ಅವರ ಸ್ಟೈಲ್ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದು ವೈರಲ್​ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

ಮಲೈಕಾ ಅರೋರಾ ತಮ್ಮ ಇನ್‌ಸ್ಟಾಗ್ರಾಮ್​ ಸ್ಟೋರಿಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಟಿಯ ಐಟಂ ಸಾಂಗ್‌ನ ಒಂದು ದೃಶ್ಯವನ್ನು ನೋಡಬಹುದು.ಇದು ಮರಾಠಿ ಚಿತ್ರ 'ಯೇಕ್ ನಂಬರ್'ನದ್ದು ಎನ್ನಲಾಗಿದೆ. ಈ ಚಿತ್ರದ ಟ್ರೇಲರ್ ಸ್ವಲ್ಪ ಸಮಯದ ಹಿಂದೆ ಬಿಡುಗಡೆಯಾಗಿದೆ. ಈ ಸಿನಿಮಾದ ಮೂಲಕ ಮಲೈಕಾ ಮರಾಠಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಅವರು ಸೆಪ್ಟೆಂಬರ್ 11 ರಂದು ನಿಧನರಾದರು. ಬಾಂದ್ರಾದಲ್ಲಿರುವ ತನ್ನ ಫ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತಂದೆಯ ಮರಣದ ನಂತರ, ಮಲೈಕಾ ಅರೋರಾ ಭಾವನಾತ್ಮಕವಾಗಿ ಪೋಸ್ಟ್​ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತನ್ನ ತಂದೆಗೆ ಗೌರವ ಸಲ್ಲಿಸಿದ್ದರು. ಜತೆಗೆ ಅಭಿಮಾನಿಗಳಿಗೆ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿದ್ದರು. ಅಂದಿನಿಂದ ಮಲೈಕಾ ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಂಡಿದ್ದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net