ಚೆನ್ನೈ: ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಸದ್ದಯ ತಾಯಿ ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರೇಕ್ಷಕರನ್ನು ಹಿಡಿದುಕೊಳ್ಳುವ ನಟಿ ಶರಣ್ಯಾ ಪೊನ್ವಣ್ಣನ್(Saranya Ponvannan) ಅವರ ಕುರಿತು ಪರಿಚಯದ ಅಗತ್ಯತೆ ಇಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 1987ರಲ್ಲಿ ಕಮಲ್ ಹಾಸನ್ ಜತೆಗೆ ಮಣಿರತ್ನಂ ಅವರ ಐಕಾನಿಕ್ ಸಿನಿಮಾ ನಾಯಕ್ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ಶರಣ್ಯಾ ಪೊನ್ವಣ್ಣನ್ ಅವರು 1995ರಲ್ಲಿ ನಿರ್ದೇಶಕ ಪೊನ್ವಣ್ಣನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇದನ್ನು ಓದಿ: ದಿನಕ್ಕೆ 200 ಸಿಗರೇಟ್ ಸೇದುತ್ತಿದ್ದೆ ಆದರೀಗ..; ಬಿಗ್ ಬಿ ರಿವೀಲ್ ಮಾಡಿದ ಸಂಗತಿ ಏನು ಗೊತ್ತಾ? | Amitabh Bachchcan
ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಶರಣ್ಯಾ ಪೊನ್ವಣ್ಣನ್ ತಾವು ಮದುವೆ ಬಳಿಕ ನಟನೆಯನ್ನು ಮುಂದುವರಿಸಬಾರದು ಎಂದುಕೊಂಡಿದ್ದೆ ಎಂದು ಹೇಳಿದ್ದಾರೆ. ಆದರೂ ಸಿನಿಮಾರಂಗಕ್ಕೆ ಮತ್ತೆ ಬಂದಿದ್ದೇಕೆ ಎಂಬುದನ್ನು ವಿವರಿಸಿದ್ದಾರೆ. ಮದುವೆಯಾದ ನಂತರ ಎಂಟು ವರ್ಷ ಸಿನಿಮಾರಂಗದಿಂದ ದೂರ ಉಳಿದಿದ್ದ ನಟಿ ಶರಣ್ಯಾ ಪೊನ್ವಣ್ಣನ್ ತಮ್ಮ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಮಾಡಿದ ಪಾತ್ರವೆಲ್ಲ ಸಾಮಾನ್ಯ ಜನರ ಜೀವನಕ್ಕೆ ಹತ್ತಿರವಿದೆ ಎನ್ನಿಸುವುದು ಸುಳ್ಳಲ್ಲ. ಪ್ರಸ್ತುತ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಮುಖ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ಪಾತ್ರದ ನಟಿಯರಲ್ಲಿ ಇವರು ಒಬ್ಬರು.
ಪೊನ್ವಣ್ಣನ್ ಅವರೊಂದಿಗೆ ವಿವಾಹವಾದ ಬಳಿಕ ನಾನು ನಟನೆಯನ್ನು ಮುಂದುವರಿಸಬಾರದು ಎಂದುಕೊಂಡಿದ್ದೆ. ಅದು ನನ್ನ ನಿರ್ಧಾರವೆ ಆಗಿತ್ತು. ಏಕೆಂದರೆ ನನಗೆ ಕುಟುಂಬ, ಮಕ್ಕಳ ಕಡೆ ಗಮನ ಹರಿಸುವುದು ಮುಖ್ಯ ಎನ್ನಿಸಿತು. ಅಲ್ಲದೆ ನನಗೆ ಮಕ್ಕಳೆಂದರೆ ಹಾಗೂ ಮಕ್ಕಳನ್ನು ಬೆಳೆಸುವುದು ಬಹಳ ಇಷ್ಟ. ನಾನು 6 ಮಕ್ಕಳಿಗೆ ಜನ್ಮ ನೀಡಬೇಕು ಎಂದುಕೊಂಡಿದ್ದೆ, ಆದರೆ ಇಬ್ಬರನ್ನು ಮಾತ್ರ ಹೆತ್ತಿರುವುದಾಗಿ ಹೇಳಿ ಶರಣ್ಯಾ ನಕ್ಕರು.
ಮಕ್ಕಳನ್ನು ನೋಡಿಕೊಳ್ಳುವುದು, ಅಡುಗೆ ಮಾಡುವುದು ಹೀಗೆ ಮನೆಯ ಪ್ರತಿಯೊಂದು ಕೆಲಸವನ್ನು ಮಾಡುವುದು ನನಗಿಷ್ಟ. ಈ ಕಾರಣದಿಂದಲೇ ನಾನು ಮದುವೆ ಬಳಿಕ ನಟನೆಗೆ ಪುಲ್ಸ್ಟಾಪ್ ಇಡಬೇಕು ಎಂದುಕೊಂಡೆ. ಬಳಿಕ ನಾನು ವರ್ಕಿಂಗ್ ವುಮೆನ್ ಆಗಬೇಕು ಎಂದುಕೊಂಡು ಪೊನ್ವಣ್ಣನ್ ಅವರ ಬಳಿ ಹೇಳಿದೆ. ಅದು ನಟನೆ ಎಂದಲ್ಲಾ ಬೇರೆ ವೃತ್ತಿಯಾದರೂ ಪರವಾಗಿಲ್ಲ ಎಂಬುದು ನನ್ನ ಅನಿಸಿಕೆ ಆಗಿತ್ತು.
ಆ ಸಮಯದಲ್ಲಿ ಪೊನ್ವಣ್ಣನ್, ಈಗ ನಿನಗೆ ಮಕ್ಕಳಿದ್ದರೆ, ಫ್ಯಾಮಿಲಿ ಇದೆ, ಎರಡನ್ನೂ ನಿಭಾಯಿಸುವ ಸಾಮರ್ಥ್ಯವಿದೆ. ನೀನು ನಟನೆಯನ್ನು ಏಕೆ ಮತ್ತಿ ಆರಂಭಿಸಬಾರದು ಎಂದು ಹೇಳಿದರು. ಅವತ್ತು ಅವರು ಹಾಗೇ ಹೇಳದಿದ್ದರೆ ನಟನೆಯಲ್ಲಿನ ನನ್ನ ಸೆಕೆಂಡ್ ಇನ್ನಿಂಗ್ ಆರಂಭವೆ ಆಗುತ್ತಿರಲಿಲ್ಲ. ಅದೇ ಸ್ಥಳದಲ್ಲಿ ಮತ್ತೊಬ್ಬ ಪುರುಷನಿದ್ದರೆ ಪರಿಸ್ಥಿತಿ ಹೇಗಿರುತಿತ್ತು. ನನ್ನ ಪ್ರಕಾರ, ನಟನೆ ವಿಚಾರವಾಗಿ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಬರಬಹುದಿತ್ತು, ಅವರಿಗಿನ್ನ ನಾನು ಕೆಳಗಿದ್ದೇನೆ ಎಂದು ಅವರು ಅಸೂಯೆ ಪಡಬಹುದಿತ್ತು, ಇವರ ವೃತ್ತಿಜೀವನ ಏನು ಇಷ್ಟು ಸಕ್ಸಸ್ ಫುಲ್ ಆಗಿದೆ ಎಂದುಕೊಳ್ಳಬಹುದಿತ್ತು.
ಆದರೆ ಮತ್ತೆ ನನಗೆ ನಟನೆಯನ್ನು ಆರಂಭಿಸುವಂತೆ ಪ್ರೋತ್ಸಾಹ ನೀಡಿ, ನಾನು ಸಕ್ಸಸ್ ಆಗಬೇಕೆಂದು ಸಪೋರ್ಟ್ ಮಾಡಿದ್ರು ಪೊನ್ವಣ್ಣನ್. ನನ್ನ ತಂದೆ ನಡೆಸಿಕೊಳ್ಳುತ್ತಿದ್ದಂತೆಯೆ ನನ್ನ ಪತಿ ಪೊನ್ವಣ್ಣನ್ ಇಂದಿಗೂ ನನ್ನನ್ನು ಟ್ರೀಟ್ ಮಾಡುತ್ತಾರೆ. ಒಂದು ಹೆಣ್ಣಿಗೆ ತಂದೆಯ ಗುಣಗಳಿರುವ ಪತಿ ಸಿಗಬೇಕು, ಹಾಗೆಯೇ ಒಂದು ಗಂಡಿಗೆ ಆತನ ತಾಯಿಯ ಗುಣವಿರುವ ಹೆಂಡತಿ ಸಿಗಬೇಕು. ಆಗ ದಾಂಪತ್ಯ ಸುಂದರವಾಗಿರುತ್ತದೆ ಎಂದು ಹೇಳಿದರು.
ನಟಿ ಶರಣ್ಯಾ ಪೊನ್ವಣ್ಣನ್ ಅವರು ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಅಪ್ಪಾಜಿ ಸಿನಿಮಾದಲ್ಲಿ ನಟಿಸಿದ್ದಾರೆ. ಜತೆಗೆ ಚಾರುಲತಾ, ದಿ ವಿಲನ್, ಬಾಸ್, ಸಮಯಕ್ಕೊಂದು ಸುಳ್ಳು ಈ ಕನ್ನಡ ಸಿನಿಮಾಗಳು ಸೇರಿ ದಕ್ಷಿಣ ಭಾರತದ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್)
ಲಂಡನ್ನಲ್ಲಿ ಗಲ್ಲಿ ಕ್ರಿಕಟ್ ಆಡಿದ ವಿರಾಟ್-ಅನುಷ್ಕಾ; ವಿಡಿಯೋ ನೋಡಿ ಫ್ಯಾನ್ಸ್ ಖುಷ್ | Viral Video