ಲಂಡನ್​ನಲ್ಲಿ ಗಲ್ಲಿ ಕ್ರಿಕೆಟ್​ ಆಡಿದ ವಿರಾಟ್​​​​-ಅನುಷ್ಕಾ; ವಿಡಿಯೋ ನೋಡಿ ಫ್ಯಾನ್ಸ್​​ ಖುಷ್​​ | Viral Video

Untitled-design-2024-10-02T160146.897
Published on

ಲಂಡನ್​​: ಕ್ಯೂಟ್​ ಕಪಲ್​ ಎಂದೇ ಫೇಮಸ್​ ಆದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಇತ್ತೀಚೆಗೆ ಗಲ್ಲಿ ಕ್ರಿಕೆಟ್​​​ ಆಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video)​ ಆಗಿದೆ. ವಾಸ್ತವವಾಗಿ ವಿರಾಟ್ ಮತ್ತು ಅವರ ಪತ್ನಿ ಅನುಷ್ಕಾ ಅವರು ಖಾಸಗಿ ಬ್ರಾಂಡ್​ಗಾಗಿ ವಿಡಿಯೋ ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ. ವಿರಾಟ್ ಕೊಹ್ಲಿ ಆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ತಮಾಷೆಯೆಂದರೆ ವಿಡಿಯೋದಲ್ಲಿ ಅನುಷ್ಕಾ ತನ್ನದೇ ಆದ ಗೇಮ್​​ ರೂಲ್​​ಗಳನ್ನು ಮಾಡಿ ವಿರಾಟ್ ಮುಂದೆ ನಿಯಮಗಳನ್ನು ಓದುತ್ತಿರುವುದನ್ನು ಕಾಣಬಹುದಾಗಿದೆ.

ಅನುಷ್ಕಾ ಕ್ರಿಕೆಟ್​​ ರೂಲ್ಸ್​​​:

  • ನಿಯಮ 1: ಬಾಲ್ ಮೂರು ಬಾರಿ ತಪ್ಪಿಸಿಕೊಂಡರೆ ನೀವು ಔಟ್ ಆಗುತ್ತೀರಿ.
  • ನಿಯಮ 2: ಬಾಲ್​​ ನಿಮ್ಮ ದೇಹಕ್ಕೆ ಮೂರು ಬಾರಿ ಬಡಿದರೆ ನೀವು ಔಟ್.
  • ನಿಯಮ 3: ನೀವು ಈ ರೀತಿ ಕಟ್ಟದ್ದಾಗಿ ಮುಖ ಮಾಡಿದರೆ ಔಟ್​ ಆಗುತ್ತೀರಿ

ಹೀಗೆ ನಿಯಮ ಓದುತ್ತಿದ್ದ ಅನುಷ್ಕಾ ಅವರನ್ನು ನಿಲ್ಲಿಸಿ ವಿರಾಟ್​ ಆಟ ಆಡುವಂತೆ ಹೇಳುತ್ತಾರೆ. ಬಳಿಕ ಯಾರ ಬಳಿ ಬ್ಯಾಟ್ ಇದೆಯೋ ಅವರು ಮೊದಲು ಬ್ಯಾಟ್ ಮಾಡುತ್ತಾರೆ ಎಂದು ಅನುಷ್ಕಾ ಮತ್ತೊಂದು ನಿಯಮವನ್ನು ಸೇರಿಸುತ್ತಾರೆ. ಅದಕ್ಕಾಗಿಯೇ ಸ್ವತಃ ಅನುಷ್ಕಾ ಮೊದಲು ಬ್ಯಾಟಿಂಗ್​​ ಮಾಡುತ್ತಾರೆ. ಅದೇ ಸಮಯದಲ್ಲಿ, ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲಿ ಅನುಷ್ಕಾ ಅವರನ್ನು ಔಟ್ ಮಾಡಿದಾಗ, ಅವರು ಮತ್ತೊಂದು ನಿಯಮವನ್ನು ಹೇಳುತ್ತಾರೆ. ಮೊದಲ ಎಸೆತವು ಟ್ರಯಲ್ ಬಾಲ್ ಆಗಿರುತ್ತದೆ, ಆದ್ದರಿಂದ ಇದು ಔಟ್​ ಅಲ್ಲ ಎಂದು ಅನುಷ್ಕಾ ಹೇಳುತ್ತಾರೆ. ಟ್ರಯಲ್ ಬಾಲ್ ನಂತರ ವಿರಾಟ್ ಕೊಹ್ಲಿ ಮತ್ತೊಮ್ಮೆ ಬೌಲಿಂಗ್ ಮಾಡಿದಾಗ ಅನುಷ್ಕಾ ಮೊದಲ ಎಸೆತದಲ್ಲಿಯೇ ಔಟಾದರು. ವಿರಾಟ್ ಬ್ಯಾಟಿಂಗ್‌ಗೆ ಬಂದಾಗ ಅವರು ಏರಿಯಲ್ ಶಾಟ್ ಆಡಿದರು. ಮೊದಲ ಬಾಲ್ ಅನ್ನು ಹೊಡೆದಾಗ 'ಕಿಂಗ್ ಕೊಹ್ಲಿ'ಗೆ ದೂರದ ಶಾಟ್ ಹೊಡೆಯುವವರು ಬಾಲ್​ ತರಬೇಕು ಎಂದು ಸ್ಟ್ರೀಟ್ ಕ್ರಿಕೆಟ್‌ನ ಮತ್ತೊಂದು ನಿಯಮವನ್ನು ಹೇಳಲಾಯಿತು. ವಿರಾಟ್ ವಿಕೆಟ್‌ನಿಂದ ದೂರ ನಿಂತಿರುವಾಗ ಅನುಷ್ಕಾ ಬೌಲಿಂಗ್ ಮಾಡಿ ಸ್ಟಂಪ್‌ಗಳನ್ನು ಸ್ಫೋಟಿಸಿದರು ಮತ್ತು ವಿರಾಟ್ ಈಗ ಔಟ್ ಆಗಿದ್ದಾರೆ ಎಂದು ಹೇಳಿಕೊಂಡರು. ಇದನ್ನು ಕಂಡು ವಿರಾಟ್​ ಇದೆಂಥಾ ನಿಯಮ ಎಂದು ಅಸಮಾಧಾನದಿಂದ ಅಲ್ಲಿಂದ ಹೊರಡುತ್ತಾರೆ.

ವಿಡಿಯೋ ವೈರಲ್​ ಆಗುತ್ತಿದ್ದಂತೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಒಬ್ಬ ಪುರುಷ ತನ್ನ ನೆಚ್ಚಿನ ಮಹಿಳೆ ಮಾಡಿದ ನಿಯಮಗಳನ್ನು ಮಾತ್ರ ಅನುಸರಿಸುತ್ತಾನೆ, ಮೋಜಿನ ಆಟ, ಬ್ರದರ್​​ ನಿಮ್ಮ ಹೆಂಡತಿಯ ವಿರುದ್ಧ ನೀವು ಗೆಲ್ಲಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net