ತ್ಯಾಜ್ಯ ಕಾಗದಗಳಿಂದ ಗೊಂಬೆಗಳ ತಯಾರಿಕೆ; ಪರಿಸರ ಸ್ನೇಹಿ ಗೊಂಬೆ ಉದ್ಯಮದಿಂದ ಸ್ವಾವಲಂಬನೆ

Man Made Product
Published on

ಮಂಗಳೂರು: ಎಷ್ಟೇ ಕಠಿಣ ನಿಯಮ ಹೇರಿದರೂ, ಜಾಗೃತಿ ಮೂಡಿಸಿದರೂ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಮಾತ್ರ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಸಣ್ಣ ಮಕ್ಕಳ ಆಟಿಕೆ ವಸ್ತುವಿನಲ್ಲಿ ಕಳಪೆ ಗುಣಮಟ್ಟದ ಪ್ಲಾಸ್ಟಿಕ್​ನದ್ದೇ ಸಿಂಹಪಾಲು. ದಿನಬಳಕೆಯಲ್ಲಿ ಪ್ಲಾಸ್ಟಿಕ್ ವಸ್ತುಗಳು ಹೆಚ್ಚಾಗುತ್ತಿದ್ದಂತೆ ಸಾಂಪ್ರದಾಯಿಕ ಕರಕುಶಲ ವಸ್ತುಗಳು ಹಿನ್ನೆಲೆಗೆ ಸರಿಯುತ್ತಿವೆ.

ಕರಕುಶಲ ಸೂಕ್ತ ಪ್ರೋತ್ಸಾಹ ಇಲ್ಲ ಎಂಬು ಕೂಗಿನ ನಡುವೆಯೂ ದಿವ್ಯಾಂಗ ರಾಧಿಕಾ ಎ.ಜೆ ಎಂಬುವವರು ಸ್ವಾವಲಂಬಿಯಾಗಿ ಬದುಕಬೇಕೆಂದು ಪರಿಸರಕ್ಕೆ ಪೂರಕವಾಗಿರುವ ತ್ಯಾಜ್ಯ ಕಾಗದವನ್ನು ಬಳಸಿ ವಿಶಿಷ್ಟ ರೀತಿಯಲ್ಲಿ ಬೊಂಬೆಗಳನ್ನು ತಯಾರಿಸುತ್ತಿದ್ದಾರೆ. ಇದರೊಂದಿಗೆ ಸ್ವ-ಉದ್ಯೋಗಿಗಳಿಗೆ ಮಾದರಿಯಾಗಿದ್ದಾರೆ.

ತ್ಯಾಜ್ಯ ಕಾಗದವನ್ನು ಸಂಗ್ರಹಿಸಿ ಅದರಿಂದ ವಿಧ ವಿಧದ ಆಕಾರದ ಬೊಂಬೆಗಳನ್ನು ತಯಾರಿಸುವ ರಾಧಿಕಾ ತಮಿಳುನಾಡಿನ ಕೊಯಂಬೂತ್ತಿರಿನವರು. ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆಯುತ್ತಿರುವ 2022ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ವಸ್ತು ಪ್ರದರ್ಶನ ಮಳಿಗೆಯಲ್ಲಿ ರಾಧಿಕಾಗೆ ನೆರವಾಗಲು ತಮ್ಮ ಟ್ರಸ್ಟ್​ನ ಮೂಲಕ ವಕೀಲೆ ಜಯಶ್ರೀ ಬೊಂಬೆಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದಾರೆ.

ಸಣ್ಣ ಮಕ್ಕಳಿಗೆ ಯಾವುದೇ ಹಾನಿಯಾಗದಂತೆ ಕಾಗದದ ಬೊಂಬೆಗಳು ಕಣ್ಮನ ಸೆಳೆಯುತ್ತಿವೆ. ವಿಭಿನ್ನ ಭಂಗಿಯಲ್ಲಿ ನಿಂತ ಬೊಂಬೆಗಳು ವಿವಿಧ ಬಣ್ಣಗಳನ್ನು ಹೊಂದಿವೆ. ಇದೀಗ ವಿವಿಧ ಬಣ್ಣದ, ಮಾದರಿಯ ಪರಿಸರ ಸ್ನೇಹಿ ಗೊಂಬೆಗಳು ಹೆಚ್ಚಿನ ಗ್ರಾಹಕರನ್ನು ಮನೆಸೆಳೆಯುತ್ತಿವೆ.

ಚಿತ್ರ ಮತ್ತು ವರದಿ: ಕ್ರೀಷ್ಮಾ ಆರ್ನೋಜಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net