ಕೆಲವೇ ನಿಮಿಷಗಳಲ್ಲಿ ಮಾಡಿ ಮೃದುವಾದ ತೆಂಗಿನ ಕಾಯಿ ಕೇಕ್​..| Recipe

untitled-design-2025-08-27t181534243-68aefdfab941f
Published on

Recipe : ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರೂ ಕೇಕ್​ ತಿನ್ನಲು ಇಷ್ಟಪಡುತ್ತಾರೆ. ಅದೇ ರೀತಿಯಲ್ಲಿ ಇಂದು ಬೇಕರಿಗಳಲ್ಲಿ ಮಾಡುವ ವಿವಿಧ ರೀತಿಯ ಕೇಕುಗಳಿಗೆ ಆಹಾರ ಪ್ರಿಯರು ಮಾರು ಹೋಗುತ್ತಿದ್ದಾರೆ. ಇಷ್ಟ ಪಡುವ ಕೇಕ್​ಗಳನ್ನು ತಿನ್ನಲು ಮುಗಿಬಿದ್ದಿದ್ದಾರೆ. ಇನ್ನು ಆಹಾರ ಪ್ರಿಯರಿಗಾಗಿ ಈ ತೆಂಗಿನ ಕಾಯಿ ಕೇಕನ್ನು ತಯಾರಿಸುವುದನ್ನು ನಾವಿಂದು ತಿಳಿಸಲಿದ್ದೇವೆ. ಇದು ಆರೋಗ್ಯಕ್ಕೂ ಉತ್ತಮವಾಗಿದೆ.

ಬೇಕಾಗುವ ಪದಾರ್ಥಗಳು

* 1 ಕಪ್​ ಮೈದಾ ಹಿಟ್ಟು

* 1 ಕಪ್​ ಸಕ್ಕರೆ

* 1/2 ಕಪ್​ ತೆಂಗಿನಕಾಯಿ ತುರಿ

* 1/2 ಕಪ್ ಎಣ್ಣೆ

* 2 ಮೊಟ್ಟೆ

* 1/2 ಕಪ್ ಹಾಲು

* 1/4 ಚಮಚ ಬೇಕಿಂಗ್ ಸೋಡಾ

* 1/4 ಚಮಚ ಬೇಕಿಂಗ್ ಪೌಡರ್

* 1 ಟೀಸ್ಪೂನ್ ವೆನಿಲ್ಲಾ ಎಸೆನ್ಸ್

* ಚಿಟಿಕೆ ಉಪ್ಪು

ಮಾಡುವ ವಿಧಾನ

ಮೊದಲು ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಬೇಕಿಂಗ್​ ಪೌಡರ್​, ಸೋಡ ಮತ್ತು ಉಪ್ಪು, ವೆನಿಲ್ಲಾ ಎಸೆನ್ಸ್​ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ನಂತರ ಒಂದೊಂದೇ ಮೊಟ್ಟೆ ಸೇರಿಸಿ ಮಿಕ್ಸ್​ ಮಾಡಿ. ನಂತರ ಮತ್ತೊಂದು ಬೌಲ್​ನಲ್ಲಿ ಎಣ್ಣೆ ಅಥವಾ ಬೆಣ್ಣೆ, ಸಕ್ಕರೆ ಸೇರಿಸಿ ಮಿಕ್ಸ್​ ಮಾಡಬೇಕು. ಇದಾದ ಬಳಿಕ ಆ ಮಿಶ್ರಣಕ್ಕೆ ಹಾಲು, ತೆಂಗಿನ ತುರಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಂದು ಕುಕ್ಕರ್​ ಬಿಸಿ ಮಾಡಿ, ಅದರೊಳಗೆ ಮಾಡಿದ ಮಿಶ್ರಣವನ್ನು ಇಟ್ಟು 25-30 ನಿಮಿಷಗಳ ಕಾಲ ಬೇಯಿಸಿ. ನಂತರ ಸ್ವಲ್ಪ ತಣ್ಣಗಾದ ಬಳಿಕ ತಟ್ಟೆಯಿಂದ ತೆಗೆದು ಸೇವಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net